ಪ್ರಿಯಕರನೊಂದಿಗೆ ಓಡಿ ಹೋದ ಪತ್ನಿ, ಹೆಣ್ಣು ಮಕ್ಕಳನ್ನು ಕೊಂದು ಮೃತದೇಹಗಳೊಂದಿಗೆ ಆಟೋದಲ್ಲಿ ಸುತ್ತಿದ ಪತಿ

ಬೆಂಗಳೂರು: ಪ್ರಿಯುಕರನೊಂದಿಗೆ ಪತ್ನಿ ಪರಾರಿಯಾಗಿದ್ದಾಳೆ. ಇದರಿಂದ ಮನನೊಂದ ವ್ಯಕ್ತಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದಿದ್ದಾನೆ. ಅವರ ದೇಹಗಳನ್ನು ತನ್ನ ಆಟೋ ಸೀಟಿನ ಕೆಳಗೆ ಇರಿಸಿ… ದಿನವಿಡೀ ಆಟೋ ಓಡಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದಾನೆ… ಕೊನೆಗೆ ಮರುದಿನ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಕರ್ನಾಟಕದ ಕಲಬುರಗಿಯಲ್ಲಿ ಈ ದುಷ್ಕೃತ್ಯ ನಡೆದಿದೆ. 34 ವರ್ಷದ ಲಕ್ಷ್ಮೀಕಾಂತ ವೃತ್ತಿಯಲ್ಲಿ ಆಟೋ ಚಾಲಕ.. ಈತ ಕೆಲ ವರ್ಷಗಳ ಹಿಂದೆ ಅಂಜಲಿ ಎಂಬ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಅವರಿಗೆ ನಾಲ್ಕು ಮಕ್ಕಳಿದ್ದಾರೆ.
ಈ ನಡುವೆ ಕಳೆದ ನಾಲ್ಕು ತಿಂಗಳ ಹಿಂದೆ ಲಕ್ಷ್ಮಿಕಾಂತ ಅವರ ಪತ್ನಿ ಅಂಜಲಿ ತನ್ನ ರಹಸ್ಯ ಗೆಳೆಯನೊಂದಿಗೆ ಓಡಿ ಹೋಗಿದ್ದಳು. ಇದರಿಂದ ಮನನೊಂದ ಲಕ್ಷ್ಮೀಕಾಂತ, ಅಂದಿನಿಂದ ಈತ ಕುಡಿತದ ಚಟಕ್ಕೆ ಬಿದ್ದಿದ್ದ. ಹೀಗಾಗಿ ಅವರ ಮಕ್ಕಳು ಅಜ್ಜಿಯ ಬಳಿಯೇ ಇದ್ದಾರೆ. ಆದರೆ ಲಕ್ಷ್ಮಿಕಾಂತ ಮಂಗಳವಾರ ತನ್ನ ಮಕ್ಕಳ ಬಳಿ ಹೋಗಿದ್ದಾನೆ, ಹತ್ತು ವರ್ಷದ ಸೋನಿ ಮತ್ತು ಎಂಟು ವರ್ಷದ ಮಯೂರಿ ಎಂಬ ಇಬ್ಬರು ಮಕ್ಕಳನ್ನು ತನ್ನ ಆಟೋದಲ್ಲಿ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದಾನೆ.
ಬಳಿಕ ತನ್ನ ಇಬ್ಬರು ಪುತ್ರಿಯರನ್ನು ಆಟೋದಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಅವರ ದೇಹವನ್ನು ಆಟೋದಲ್ಲಿ ಸೀಟಿನ ಕೆಳಗೆ ಬಚ್ಚಿಟ್ಟಿದ್ದದ್ದಾನೆ… ತದನಂತರ ಆಟೋ ಓಡಿಸಿ ಹಲವಾರು ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದಾನೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದವರಿಗೂ ಅವರು ಕುಳಿತಿದ್ದ ಸೀಟಿನ ಕೆಳಗೆ ಇಬ್ಬರು ಹೆಣ್ಣು ಮಕ್ಕಳ ಶವಗಳಿರುವುದು ತಿಳಿದಿರಲಿಲ್ಲ.
ಆದರೆ, ಕೊನೆಗೆ ಲಕ್ಷ್ಮೀಕಾಂತ್ ಬುಧವಾರ ಮಧ್ಯಾಹ್ನ ಆಟೋದಲ್ಲಿದ್ದ ಮಕ್ಕಳ ಶವ ಸೇರಿದಂತೆ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
After Wife Elopes With Lover Man Kills His Daughters Roams With The Bodies In His Auto



