ಕಾರು ಚಾಲಕನ ಜೊತೆ ಚೆಲ್ಲಾಟ, ಅಡ್ಡಬಂದ ಪೊಲೀಸ್ ಪತಿಯನ್ನು ಮುಗಿಸಲು ಪ್ಲಾನ್ ಮಾಡಿದ ಪತ್ನಿ! ಮುಂದೇನಾಯ್ತು ಗೊತ್ತಾ?

ಕೊಟ್ಟ ವಾರ್ನಿಂಗ್ ಅನ್ನು ಗಂಭೀರವಾಗಿ ಪರಿಗಣಿಸದೆ ಮತ್ತೆ ಅದೇ ಚಾಳಿ ಮುಂದುವರೆಸಿದ್ದರು. ಇದೇ ವೇಳೆ ತಮ್ಮ ಸರಸ ಸಲ್ಲಾಪಕ್ಕೆ ಅಡ್ಡಿಪಡಿಸುವ ಗಂಡನನ್ನು ಕೊಲ್ಲಲು ಇಬ್ಬರೂ ಪ್ಲಾನ್ ಮಾಡಿದ್ದಾರೆ.

ಹೈದರಾಬಾದ್: ರಮೇಶ್ (35) ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದವರು. ಇವರು ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಶಿವಾನಿ (30). ಅವರಿಗೆ 2 ಹೆಣ್ಣು ಮಕ್ಕಳಿದ್ದಾರೆ. 2009ರಲ್ಲಿ ಪೊಲೀಸ್ ಪಡೆಗೆ ಸೇರಿದ್ದ ರಮೇಶ್ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು 2012 ರಲ್ಲಿ ಶಿವಾನಿ ಅವರನ್ನು ವಿವಾಹವಾದರು.

ಈ ಸಂದರ್ಭದಲ್ಲಿ ನೆರೆಮನೆಯ ರಮೇಶ್ ಸ್ನೇಹಿತ ರಾಮ್ ರಾವ್ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಈತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ನಂತರ ಶಿವಾನಿಗೆ ಪರಿಚಯವಾಗಿ ಕೊನೆಗೆ ಇಬ್ಬರ ನಡುವೆ ಸಲುಗೆ ಬೆಳೆದು ಪ್ರೇಮಕ್ಕೆ ತಿರುಗಿತ್ತು. ರಮೇಶ್ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ಆಗಾಗ ಖಾಸಗಿಯಾಗಿ ಭೇಟಿಯಾಗಿ ಮೋಜು ಮಸ್ತಿ ಮಾಡುತ್ತಿದ್ದರು.

Andhra Woman Murder Cop Husband For Lover

ಬಳಿಕ ಅಕ್ಕಪಕ್ಕದವರ ಮೂಲಕ ರಮೇಶ್ ಗೆ ಈ ವಿಷಯ ತಿಳಿಯಿತು. ಇದಾದ ಬಳಿಕ ಪತ್ನಿ ಹಾಗೂ ಸ್ನೇಹಿತನಿಗೆ ಎಚ್ಚರಿಕೆ ನೀಡಿದ್ದಾನೆ.

ಆದರೆ ಆತ ಕೊಟ್ಟ ವಾರ್ನಿಂಗ್ ಅನ್ನು ಗಂಭೀರವಾಗಿ ಪರಿಗಣಿಸದೆ ಮತ್ತೆ ಅದೇ ಚಾಳಿ ಮುಂದುವರೆಸಿದ್ದರು. ಇದೇ ವೇಳೆ ತಮ್ಮ ಸರಸ ಸಲ್ಲಾಪಕ್ಕೆ ಅಡ್ಡಿಪಡಿಸುವ ಗಂಡನನ್ನು ಕೊಲ್ಲಲು ಇಬ್ಬರೂ ಪ್ಲಾನ್ ಮಾಡಿದ್ದಾರೆ.

ಅದರಂತೆ ಆ.1ರಂದು ಕೆಲಸ ಮುಗಿಸಿ ಮನೆಗೆ ವಾಪಸ್ಸಾದ ಗಂಡ ರಮೇಶ್ ಗೆ ಪತ್ನಿ ಶಿವಾನಿ ಮದ್ಯ ಕುಡಿಸಿದ್ದಾಳೆ ಎನ್ನಲಾಗಿದೆ. ಕುಡಿದ ಅಮಲಿನಲ್ಲಿದ್ದ ರಮೇಶನನ್ನು ತಲೆದಿಂಬಿನಿಂದ ಮುಖ ಒತ್ತಿ ಕೊಲೆ ಮಾಡಿದ್ದಾಳೆ. ನಂತರ ಏನೂ ತಿಳಿಯದವಳಂತೆ ಮರುದಿನ ಬೆಳಗ್ಗೆ ತನ್ನ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಕಿರುಚಾಡುವ ಡ್ರಾಮಾ ಮಾಡಿದ್ದಾಳೆ

ರಮೇಶ್ ಅವರ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅನುಮಾನಗೊಂಡು ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆಯ ಸೆಲ್ ಫೋನ್ ಪರಿಶೀಲಿಸಿದಾಗ ಪಕ್ಕದ ಮನೆಯವನ ಜತೆ ಹಲವು ಬಾರಿ ಸಂಪರ್ಕದಲ್ಲಿದ್ದುದು ಬೆಳಕಿಗೆ ಬಂದಿದೆ. ನಂತರ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

Andhra Woman Murder Cop Husband For Lover