ಚೀಲವೊಂದರಲ್ಲಿ ಮಾನವ ದೇಹದ ಭಾಗಗಳು ಪತ್ತೆ
ಚೀಲವೊಂದರಲ್ಲಿ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಚಲನ ಮೂಡಿಸಿದೆ.
ನವದೆಹಲಿ: ಚೀಲವೊಂದರಲ್ಲಿ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಚಲನ ಮೂಡಿಸಿದೆ. ಕಲ್ಯಾಣಪುರಿ ಪ್ರದೇಶದ ರಾಮಲೀಲಾ ಮೈದಾನದ ಬಳಿಯ ಪೊದೆಯಲ್ಲಿ ಚೀಲವೊಂದು ಬಿದ್ದಿತ್ತು. ಇದರಿಂದ ದುರ್ವಾಸನೆ ಬರುತ್ತಿರುವುದನ್ನು ಪೊಲೀಸರು ಭಾನುವಾರ ಗಮನಿಸಿದ್ದಾರೆ.
ಕೂಡಲೇ ಅವರು ಆ ಪ್ರದೇಶದ ಪಾಂಡವ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಠಾಣಾಧಿಕಾರಿ ಹಾಗೂ ಸಿಬ್ಬಂದಿ ರಾಮಲೀಲಾ ಮೈದಾನಕ್ಕೆ ಧಾವಿಸಿದರು. ಅಲ್ಲೇ ಇದ್ದ ಬ್ಯಾಗನ್ನು ತೆರೆದರು. ಒಬ್ಬ ವ್ಯಕ್ತಿ ದೇಹದ ಭಾಗಗಳನ್ನು ಕತ್ತರಿಸಿದ್ದನ್ನು ನೋಡಿ ಆಘಾತಕ್ಕೊಳಗಾದರು.
ಅಪರಾಧ ವಿಭಾಗದ ಪೊಲೀಸರೊಂದಿಗೆ ಫೋರೆನ್ಸಿಕ್ ಸೈನ್ಸ್ ಲ್ಯಾಬ್ (ಎಫ್‌ಎಸ್‌ಎಲ್) ಸಿಬ್ಬಂದಿಯನ್ನು ತಕ್ಷಣವೇ ಕರೆಹಿಸಲಾಯಿತು. ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ಚೀಲದಲ್ಲಿ ತುಂಡಾಗಿ ಬಿದ್ದಿದ್ದ ವ್ಯಕ್ತಿಯ ದೇಹದ ಭಾಗಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಪಾಂಡವನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ.
Body Parts Recovered From Mysterious Bag In Delhi