ವಿಹಾರಕ್ಕೆಂದು ಬೀಚ್‌ಗೆ ಬಂದ ಬ್ರಿಟನ್ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ!

ಉತ್ತರ ಗೋವಾದ ಸ್ವೀಟ್ ವಾಟರ್ ಬೀಚ್ ನಲ್ಲಿ ಪತಿಯೊಂದಿಗೆ ಪಿಕ್ ನಿಕ್ ಗೆ ತೆರಳಿದ್ದ ಬ್ರಿಟನ್ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ

ಪಣಜಿ: ಉತ್ತರ ಗೋವಾದ ಸ್ವೀಟ್ ವಾಟರ್ ಬೀಚ್ ನಲ್ಲಿ ಪತಿಯೊಂದಿಗೆ ಪಿಕ್ ನಿಕ್ ಗೆ ತೆರಳಿದ್ದ ಬ್ರಿಟನ್ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ವಾರ ನಡೆದ ಘಟನೆಗೆ ಸಂಬಂಧಿಸಿದಂತೆ 32 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್ 2 ರಂದು, ಮಧ್ಯವಯಸ್ಕ ಮಹಿಳೆ ಬೀಚ್‌ನಲ್ಲಿ ಸುತ್ತಾಡುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಸೋಮವಾರ ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ನೀಡಿದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಅದೇ ಪ್ರದೇಶದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಹಾರಕ್ಕೆಂದು ಬೀಚ್‌ಗೆ ಬಂದ ಬ್ರಿಟನ್ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ! - Kannada News

British Woman On Holiday With Husband Abused At Beach

Follow us On

FaceBook Google News