Chandrashekhar Guruji Murder ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಕೊಲೆ
Chandrashekhar Guruji Murder: ಹುಬ್ಬಳ್ಳಿಯಲ್ಲಿ ರಾಜ್ಯದ ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಕೊಲೆ ನಡೆದಿದೆ
Chandrashekhar Guruji Murder: ರಾಜ್ಯದ ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯಲ್ಲಿ ಕೊಲೆ ಮಾಡಲಾಗಿದೆ, ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಹುಬ್ಬಳ್ಳಿಯ ಉಣಕಲ್ ನ ಖಾಸಗಿ ಹೋಟೆಲ್ ನಲ್ಲಿ ಹತ್ಯೆ ನಡೆದಿದೆ. ಹೋಟೆಲ್ ರಿಸ್ಪಷನ್ ನಲ್ಲಿಯೇ ಕೊಲೆ ನಡೆದಿದೆ ಎಂದು ವರದಿಯಾಗಿದೆ. ಚಂದ್ರಶೇಖರ್ ಗುರೂಜಿ ಅವರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿಯಲ್ಲಿ ಕೊಲೆ – Chandrashekhar Guruji Murder
ಚಂದ್ರಶೇಖರ್ ಗುರೂಜಿ ಸರಳವಸ್ತು ಮೂಲಕ ಜನಪ್ರಿಯಗಳಿಸಿದವರು. ಚಂದ್ರಶೇಖರ್ ಅವರು ಭಾರತ ಮತ್ತು ವಿದೇಶಗಳಲ್ಲಿ ವಾಸ್ತು ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಭಕ್ತನ ವೇಷ ಧರಿಸಿ ಬಂದು ಚಾಕುವಿನಿಂದ ಇರಿದಿದ್ದಾರೆ ಎಂದು ವರದಿಯಾಗಿದೆ. ಗುರೂಜಿ ಕೆಳಗೆ ಬೀಳುತ್ತಿದ್ದಾಗ ಮತ್ತೆ ಚಾಕುವಿನಿಂದ ಇರಿದು ಓಡಿಹೋಗಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ದೃಶ್ಯಗಳು ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಘಟನಾ ಸ್ಥಳಕ್ಕೆ ಶ್ವಾನದಳವನ್ನು ಕರೆತರಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಚಂದ್ರಶೇಖರ್ ಗುರೂಜಿ ಅವರ ಪೂರ್ಣ ಹೆಸರು ಚಂದ್ರಶೇಖರ್ ವಿರೂಪಾಕ್ಷಪ್ಪ ಅಂಗಡಿ. ಮೂಲತಃ ಬಾಗಲಕೋಟೆಯವರಾದ ಇವರು ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ನಲ್ಲಿ ಬಿಇ ಸಿವಿಲ್ ಪದವಿ ಪಡೆದರು.
1988ರಲ್ಲಿ ಬಾಗಲಕೋಟೆಯಿಂದ ಮುಂಬೈಗೆ ತೆರಳಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಮುಂಬೈನಿಂದ ಐದು ವರ್ಷಗಳ ನಂತರ ಸಿಂಗಾಪುರಕ್ಕೆ ಹೋದರು. ಅವರು ಸಿಂಗಾಪುರದಲ್ಲಿ ವಾಸ್ತು ಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಮುಂಬೈಗೆ ಬಂದು ಸರಳ ವಾಸ್ತುವನ್ನು ಪ್ರಾರಂಭಿಸಿದರು.
The famous Vastu expert of the state Chandrasekhar Guruji was murdered in Hubli. He was stabbed to death in broad daylight. The killing took place in a private hotel in Unakal, Hubli. Information is available that the killing took place at the hotel reception.
Chandrasekhar Guruji’s dead body has been sent to Kim’s Hospital.
Watch Chandrasekhar Guruji File Videos
Follow us On
Google News |