Video, ಉಚಿತ ಊಟ ನೀಡದಿದ್ದಕ್ಕೆ ರೆಸ್ಟೋರೆಂಟ್ ಮ್ಯಾನೇಜರ್ ಮೇಲೆ ಪೊಲೀಸರಿಂದ ಹಲ್ಲೆ
Video – ಮುಂಬೈ: ಉಚಿತ ಊಟ ನೀಡಲಿಲ್ಲ ಎಂಬ ಕಾರಣಕ್ಕೆ ರೆಸ್ಟೋರೆಂಟ್ ಮ್ಯಾನೇಜರ್ ಒಬ್ಬರಿಗೆ ಪೊಲೀಸರು ಥಳಿಸಿದ್ದಾರೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಈ ಘಟನೆ ನಡೆದಿದೆ. ಬುಧವಾರ ಮಧ್ಯರಾತ್ರಿ ಸಾಂತಾಕ್ರೂಜ್ ಪೂರ್ವದಲ್ಲಿರುವ ಸ್ವಾಗತ್ ಡೈನಿಂಗ್ ಬಾರ್ ಮತ್ತು ರೆಸ್ಟೋರೆಂಟ್‌ಗೆ ಸಹಾಯಕ ಪೊಲೀಸ್ ನಿರೀಕ್ಷಕ ವಿಕ್ರಮ್ ಪಾಟೀಲ್ ಭೇಟಿ ನೀಡಿದರು. ಕುಡಿದ ಅಮಲಿನಲ್ಲಿದ್ದ ಆತ ಸಿಬ್ಬಂದಿಗೆ ಊಟ ಹಾಕುವಂತೆ ಒತ್ತಾಯಿಸಿದ್ದಾನೆ.
ಇದನ್ನೂ ಓದಿ : Viral Video ಚಲಿಸುವ ರೈಲಿನಿಂದ ಕೆಳಗೆ ಬಿದ್ದ ಮಹಿಳೆ.. ಪ್ರಾಣ ಉಳಿಸಿದ ಆರ್‌ಪಿಎಫ್
ಆದರೆ, ಈಗಾಗಲೇ ಅಡುಗೆ ಕೋಣೆಯನ್ನು ಮುಚ್ಚಲಾಗಿದೆ ಎಂದು ವ್ಯವಸ್ಥಾಪಕ ಗಣೇಶ ಪಾಟೀಲ ತಿಳಿಸಿದರು. ಇದರಿಂದ ಕುಪಿತಗೊಂಡ ಪೊಲೀಸ್ ಅಧಿಕಾರಿ ಮ್ಯಾನೇಜರ್ ಮೇಲೆ ಕೈಮಾಡಿದ್ದಾರೆ.. ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಸಿಬ್ಬಂದಿ ಬಂದು ಆತನನ್ನು ಪಕ್ಕಕ್ಕೆ ಎಳೆದರೂ ಮತ್ತೊಮ್ಮೆ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾರೆ. ರೆಸ್ಟೋರೆಂಟ್‌ನಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ಪೊಲೀಸ್ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ವರ್ತನೆಗೆ ಟೀಕೆ ವ್ಯಕ್ತವಾಗಿದೆ.
Police beat up restaurant manager for not giving free food