ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ನಾಲ್ವರು ಸಾವು

ವಿದ್ಯುತ್ ಸ್ಪರ್ಶದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಒಂದೇ ಕುಟುಂಬದವರು...

ನೆರೆ ರಾಜ್ಯ ತೆಲಂಗಾಣದಲ್ಲಿ ಧಾರುಣ ಘಟನೆ ನಡೆದಿದೆ, ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ವಿದ್ಯುತ್ ಸ್ಪರ್ಶದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಒಂದೇ ಕುಟುಂಬದವರು. ಮೃತರಲ್ಲಿ ಪತಿ-ಪತ್ನಿ ಹಾಗೂ ಅವರ ಇಬ್ಬರು ಮಕ್ಕಳು ಸೇರಿದ್ದಾರೆ.

ಸ್ಥಳೀಯರು ನೀಡಿದ ವಿವರದಂತೆ ಜಿಲ್ಲಾ ಕೇಂದ್ರದ ಬೀಡಿ ವರ್ಕರ್ಸ್ ಕಾಲೋನಿಯ ಹೈಮದ್ (35), ಪರ್ವೀನ್ (30), ಅದ್ನಾನ್ (4), ಮಾಹಿಮ್ (6) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಮನೆಯಲ್ಲಿ ಮೊದಲು ಮಕ್ಕಳಿಗೆ ವಿದ್ಯುತ್ ತಗುಲಿದೆ… ಇವರಿಬ್ಬರನ್ನು ರಕ್ಷಿಸಲು ಯತ್ನಿಸಿದ ಪೋಷಕರಿಬ್ಬರಿಗೂ ವಿದ್ಯುತ್ ಸ್ಪರ್ಶವಾಗಿದೆ. ಮೃತ ದೇಹಗಳನ್ನು ಕಾಮರೆಡ್ಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಈ ಘಟನೆಯ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Four members of the same family died due to electric shock

ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ನಾಲ್ವರು ಸಾವು - Kannada News

Follow us On

FaceBook Google News