ಹೊಟ್ಟೆಯಲ್ಲಿ 181 ಕೊಕೇನ್ ಕ್ಯಾಪ್ಸೂಲ್ !
ಹೊಟ್ಟೆಯಲ್ಲಿ 181 ಕೊಕೇನ್ ಕ್ಯಾಪ್ಸೂಲ್ ಗಳನ್ನು ಬಚ್ಚಿಟ್ಟುಕೊಂಡಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.
ನವದೆಹಲಿ: ಹೊಟ್ಟೆಯಲ್ಲಿ 181 ಕೊಕೇನ್ ಕ್ಯಾಪ್ಸೂಲ್ ಗಳನ್ನು ಬಚ್ಚಿಟ್ಟುಕೊಂಡು ಉಗಾಂಡಾದಿಂದ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದ ಇಬ್ಬರು ಮಹಿಳೆಯರನ್ನು ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರ ಹೊಟ್ಟೆಯಲ್ಲಿದ್ದ ಕೊಕೇನ್ ಸುಮಾರು 2 ಕೆಜಿ ತೂಕವಿದ್ದು, 28 ಕೋಟಿ ರೂ. ಮೌಲ್ಯ ಎನ್ನಲಾಗಿದೆ.
ಗುರುವಾರ ಮಹಿಳೆಯೊಬ್ಬರನ್ನು ಬಂಧಿಸಿ, ಆಕೆಯ ಹೊಟ್ಟೆಯಲ್ಲಿ 81 ಕ್ಯಾಪ್ಸುಲ್ಗಳೊಂದಿಗೆ ರಾಮಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದರ ತೂಕ 0.891 ಗ್ರಾಂ. ಇದರ ಮೌಲ್ಯ 13.6 ಕೋಟಿ ರೂ… ಅಂತೆಯೇ 22ರಂದು ಮತ್ತೊಬ್ಬ ಮಹಿಳೆಯ ಹೊಟ್ಟೆಯಲ್ಲಿ 80 ಕ್ಯಾಪ್ಸುಲ್ ಗಳು ಪತ್ತೆಯಾಗಿದ್ದವು. ಇದರ ತೂಕ 0.957 ಗ್ರಾಂ ಆಗಿದ್ದು, ಇದರ ಮೌಲ್ಯ 14 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
181 Cocaine Capsules In The Stomach
Follow Us on : Google News | Facebook | Twitter | YouTube