ಆರು ಮಕ್ಕಳನ್ನು ಬಾವಿಗೆ ಎಸೆದ ಕ್ರೂರಿ ತಾಯಿ
ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ತನ್ನ ಆರು ಮಕ್ಕಳನ್ನು ಬಾವಿಗೆ ಎಸೆದ ಘಟನೆಯಲ್ಲಿ ಎಲ್ಲಾ ಮಕ್ಕಳು ಸಾವನ್ನಪ್ಪಿದ್ದಾರೆ.
Kolhapur/Raigad (ಕೊಲ್ಹಾಪುರ/ರಾಯಗಢ): ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ತನ್ನ ಆರು ಮಕ್ಕಳನ್ನು ಬಾವಿಗೆ ಎಸೆದ ಘಟನೆಯಲ್ಲಿ ಎಲ್ಲಾ ಮಕ್ಕಳು ಸಾವನ್ನಪ್ಪಿದ್ದಾರೆ. ರಾಯಗಡ ಜಿಲ್ಲೆಯ ಢಲ್ಕತಿ-ಬಿರವಾಡಿ ಗ್ರಾಮದಲ್ಲಿ ಈ ದುರಂತ ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ರಾಯಗಢ ಜಿಲ್ಲೆಯ ಢಲ್ಕತಿ-ಬಿರವಾಡಿ ಗ್ರಾಮದ ನಿವಾಸಿ ಮಹಿಳೆಯೊಬ್ಬರು ಏಳು ವರ್ಷದೊಳಗಿನ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ತನ್ನ ಆರು ಮಕ್ಕಳನ್ನು ತಮ್ಮ ಗ್ರಾಮದಲ್ಲಿರುವ ಬಾವಿಗೆ ಎಸೆದಿದ್ದಾರೆ. ಈ ಘಟನೆಗೆ ಕಾರಣ, ಮಹಿಳೆ ಏಕೆ ಈ ತೀವ್ರ ಹೆಜ್ಜೆ ಇಟ್ಟಿದ್ದಾಳೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಮಹಿಳೆಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಗ ಮಹಿಳೆ ನೀಡಿದ ಹೇಳಿಕೆಯಂತೆ…
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆ ಮೇಲೆ ಪತಿಯ ಮನೆಯವರು ಹಲ್ಲೆ ನಡೆಸಿದ್ದು, ಇದರಿಂದ ಜುಗುಪ್ಸೆಗೊಂಡು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
Woman throws her six children into a well
In a shocking incident, a woman threw her six children into a well, all children died in the incident.
Follow us On
Google News |