Lovers: ವಿವಾಹಕ್ಕೆ ಒಪ್ಪದ ಮನೆಯವರು, ಪ್ರೇಮಿಗಳು ಆತ್ಮಹತ್ಯೆ ಯತ್ನ.. ಯುವತಿ ಸಾವು

ವಿಶಾಖಪಟ್ಟಣಂ: ತಮ್ಮ ಪ್ರೇಮ ವಿವಾಹಕ್ಕೆ (Love Marriage) ದೊಡ್ಡವರು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು (Lovers) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ಸಾಗಿಸಿದ್ದು, ಯುವತಿ ಸಾವನ್ನಪ್ಪಿದ್ದು, ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಶಾಖಪಟ್ಟಣಂನಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ವಿವರಗಳಿಗೆ ಹೋದರೆ, ನೇಹಾ (17) ಮತ್ತು ಕೃಷ್ಣ (19) ಕಳೆದ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು. ಮದುವೆಯ ಪ್ರಸ್ತಾಪದೊಂದಿಗೆ ಹಿರಿಯರ ಸಮಾಲೋಚನೆ ನಡೆಸಲಾಯಿತು. ಅವರ ಪ್ರಸ್ತಾಪವನ್ನು ಎರಡೂ ಕಡೆಯ ಪೋಷಕರು ತಿರಸ್ಕರಿಸಿದರು.
ಇದೆ ಬೇಸರದಿಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರ ಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸಾವನ್ನಪ್ಪಿದ್ದಾಳೆ.
ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯುವಕನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಉತ್ತಮ ಚಿಕಿತ್ಸೆಗಾಗಿ ಕೆಜಿಎಚ್‌ಗೆ ರವಾನಿಸಲಾಗಿದೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆಜಿಎಚ್ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
Lovers Attempt Suicide As Parents Refuse Their Love



