ಪಕ್ಕದ ಮನೆಯವನೊಂದಿಗೆ ಓಡಿ ಹೋದ ಪತ್ನಿ… ಆತ್ಮಹತ್ಯೆ ಮಾಡಿಕೊಂಡ ಪತಿ

ಪತ್ನಿ ಪಕ್ಕದ ಮನೆಯವನೊಂದಿಗೆ ಓಡಿ ಓಡಿ ಹೋದ ನಂತರ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಲಕ್ನೋ: ಪತ್ನಿ ಪಕ್ಕದ ಮನೆಯವನೊಂದಿಗೆ ಓಡಿ ಹೋದ ನಂತರ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಪ್ರದೇಶದ ಗುರುಗ್ರಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಸನ್ ಗ್ರಾಮದ ನಿವಾಸಿ ಕವೀಂದರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕ್ಯಾಬ್ ಓಡಿಸುತ್ತಿದ್ದಾರೆ. ಇದೇ ತಿಂಗಳ 10ರಂದು ಪತ್ನಿ ರೀನಾ ತನ್ನ ನೆರೆಮನೆಯ ರಾಮ್‌ವೀರ್‌ನೊಂದಿಗೆ ಓಡಿ ಹೋಗಿದ್ದಳು.

ಪೊಲೀಸರಿಗೆ ದೂರು ನೀಡಿದ ಕವೀಂದರ್ ತೀವ್ರ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕವಿಂದರ್‌ನನ್ನು ಗಮನಿಸಿದ ಸಹೋದರ ಸಂತೋಷ್‌ಕುಮಾರ್‌ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಕವಿಂದರ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮತ್ತೊಂದೆಡೆ ಈ ವಿಷಯ ತಿಳಿದ ಪೊಲೀಸರು ಕವೀಂದರ್ ಶವವನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಸಹೋದರ ಸಂತೋಷ್ ಕುಮಾರ್ ದೂರಿನ ಮೇರೆಗೆ ಪೊಲೀಸರು ಮೃತನ ಪತ್ನಿ ರೀನಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆಯ ಜೊತೆಗೆ ನೆರೆಯವನಾದ ರಾಮವೀರ್‌ನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಕದ ಮನೆಯವನೊಂದಿಗೆ ಓಡಿ ಹೋದ ಪತ್ನಿ... ಆತ್ಮಹತ್ಯೆ ಮಾಡಿಕೊಂಡ ಪತಿ

man commits suicide after wife elopes with neighbour

Related Stories