ಪಕ್ಕದಲ್ಲಿ ಮಲಗಲು ಬಿಡಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ತನ್ನ ಪಕ್ಕದಲ್ಲಿ ಮಲಗಲು ಬಿಡಲಿಲ್ಲ ಎಂಬ ಕೋಪದಲ್ಲಿ ಪತಿ ಪತ್ನಿಯನ್ನು ಕೊಂದಿದ್ದಾನೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಈ ಘಟನೆ ನಡೆದಿದೆ.

ಮುಂಬೈ: ತನ್ನ ಪಕ್ಕದಲ್ಲಿ ಮಲಗಲು ಬಿಡಲಿಲ್ಲ ಎಂಬ ಕೋಪದಲ್ಲಿ ಪತಿ ಪತ್ನಿಯನ್ನು ಕೊಂದಿದ್ದಾನೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಈ ಘಟನೆ ನಡೆದಿದೆ. ಮಲಾಡ್‌ನ ಮಾಲ್ವಾನಿ ಪ್ರದೇಶದ ನಿವಾಸಿ 58 ವರ್ಷದ ಜ್ಞಾನದೇವ್ ಗಣಪತ್ ಬಲಡೆ ಶುಕ್ರವಾರ ರಾತ್ರಿ ತನ್ನ 48 ವರ್ಷದ ಪತ್ನಿಯೊಂದಿಗೆ ಜಗಳವಾಡಿದ್ದಾರೆ. ಪಕ್ಕದಲ್ಲಿ ಮಲಗಲು ಬಿಡದ ಆಕೆಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಕೋಪಗೊಂಡು ಪತ್ನಿಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಇದರಿಂದ ತಲೆಗೆ ರಕ್ತಸ್ರಾವವಾಗಿ ಆಕೆ ಸಾವನ್ನಪ್ಪಿದ್ದಾಳೆ.

ಆದರೆ ಈ ಘಟನೆ ಬಳಿಕ ಜ್ಞಾನದೇವ್ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪಕ್ಕದಲ್ಲಿ ಮಲಗಲು ಬಿಡಲಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಪತ್ನಿಯ ತಲೆಗೆ ಹೊಡೆದು ಕೊಲೆಗೈದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಆತನ ಮನೆಗೆ ತಲುಪಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿ ಪತಿ ವಿರುದ್ಧ ಕೊಲೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಪಕ್ಕದಲ್ಲಿ ಮಲಗಲು ಬಿಡಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ - Kannada News

man kills wife by hitting her with stone

Follow us On

FaceBook Google News