ದೆಹಲಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಮೂವರು ಆರೋಪಿಗಳ ಬಂಧನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ದುಷ್ಕರ್ಮಿಗಳು ಅತ್ಯಾಚಾರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ. ದಕ್ಷಿಣ ದೆಹಲಿಯ ವಸಂತ ವಿಹಾರ್‌ನ 10ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಮಹಿಪಾಲ್‌ಪುರಕ್ಕೆ ಹೋಗುತ್ತಾ ಈ ದುಷ್ಕೃತ್ಯ ಎಸಗಿದ್ದಾರೆ. ಜುಲೈ 6 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಜುಲೈ 6 ರಂದು ಸಂಜೆ ತನ್ನ ಸ್ನೇಹಿತೆಯ ಮನೆಯಿಂದ ಬಂದ ನಂತರ ವಸಂತ ವಿಹಾರ್ ಮಾರುಕಟ್ಟೆಯಲ್ಲಿ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ನೋಡಿದ್ದಾಳೆ. ಸ್ವಲ್ಪ ಸಮಯದ ನಂತರ, ಅವರು ಮೂರನೇ ವ್ಯಕ್ತಿಯನ್ನು ಕರೆದರು. ಮೂರನೇ ವ್ಯಕ್ತಿ ಕಾರಿನಲ್ಲಿ ಬಂದು ತನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ ಎಂದು ಆಕೆ ಬಹಿರಂಗಪಡಿಸಿದ್ದಾಳೆ.
ಆರೋಪಿಗಳ ಪೈಕಿ ಒಬ್ಬನ ಜೊತೆ ಬಾಲಕಿಗೆ ಈ ಹಿಂದೆ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ಮಹಿಪಾಲಪುರಕ್ಕೆ ಹೋಗಿ ಅಲ್ಲಿ ಮದ್ಯ ಖರೀದಿಸಿದರು ಎಂದು ವಿವರಿಸಿದರು. ಬಳಿಕ ಆ ಜಾಗದಲ್ಲಿ ಕಾರನ್ನು ಓಡಿಸಿ ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿದ್ದರು. ಕಾರು ಚಲಿಸುತ್ತಿದ್ದ ವೇಳೆ ಮೂವರು ಬಾಲಕಿಯ ಮೇಲೆ ಹಲ್ಲೆ ನಡೆಸಿ, ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ತೀವ್ರವಾಗಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ, ಈ ಸಂಪೂರ್ಣ ದುಷ್ಕೃತ್ಯದ ವಿಡಿಯೋವನ್ನು ತಮ್ಮ ಫೋನ್‌ಗಳಲ್ಲಿ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
minor girl gang raped inside car in delhi vasant vihar
ತಕ್ಷಣ ಈ App ಗಳನ್ನು Uninstall ಮಾಡಿ
Facebook ಖಾತೆಯಲ್ಲಿ ಬಹು ಪ್ರೊಫೈಲ್ ತೆರೆಯುವ ಸೌಲಭ್ಯ
Follow us On
Google News |