ರಾಜಸ್ಥಾನದಲ್ಲಿ ಧಾರುಣ, ಎಂಟು ವರ್ಷದ ಬಾಲಕಿ ಹತ್ಯೆ!

ರಾಜಸ್ಥಾನದ ಅಮೇರ್‌ನಲ್ಲಿ ನಾಪತ್ತೆಯಾಗಿದ್ದ ಬಾಲಕಿ ಕತ್ತು ಸೀಳಿ ಶವವಾಗಿ ಪತ್ತೆಯಾಗಿದ್ದಾಳೆ

Bengaluru, Karnataka, India
Edited By: Satish Raj Goravigere

ಜೈಪುರ: ರಾಜಸ್ಥಾನದಲ್ಲಿ ಧಾರುಣ ಘಟನೆ ನಡೆದಿದೆ. ರಾಜ್ಯದ ಅಮೇರ್ ಪ್ರದೇಶದಲ್ಲಿ ಎಂಟು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಕತ್ತು ಸೀಳಿ ಕೊಂದಿದ್ದಾರೆ. ಶನಿವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಬಾಲಕಿ ಭಾನುವಾರ ಬೆಳಗ್ಗೆ ದಾದಾಬಾದಿ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಜನನಿಬಿಡ ಪ್ರದೇಶದಲ್ಲಿ ಬಾಲಕಿಯ ಶವ ಬೆತ್ತಲೆಯಾಗಿ ಪತ್ತೆಯಾಗಿದೆ ಎಂದು ಜೈಪುರ ಹೆಚ್ಚುವರಿ ಜಿಸಿಪಿ ಸುಮನ್ ಚೌಧರಿ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಧಾರುಣ, ಎಂಟು ವರ್ಷದ ಬಾಲಕಿ ಹತ್ಯೆ! Kannada News

ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ವಿಷಯ ತಿಳಿಯಲಿದೆ ಎಂದರು.

ರಾಜಸ್ಥಾನದ ಅಮೇರ್‌ನಲ್ಲಿ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ

ಘಟನಾ ಸ್ಥಳಕ್ಕೆ ಆಗಮಿಸಿದ ವಿಧಿವಿಜ್ಞಾನ ತಜ್ಞರು ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Missing Girl Found Dead Her Throat Slit In Rajasthan’s Amer