Mobile Game: ಮೊಬೈಲ್ ಗೇಮ್ ಆಡಬೇಡ ಅಂದದಕ್ಕೆ ಮುಂಬೈ ಬಾಲಕ ಆತ್ಮಹತ್ಯೆ

ಮುಂಬೈ: ಮೊಬೈಲ್ ನಲ್ಲಿ ಗೇಮ್ (Mobile Game) ಆಡುವುದು ಮಕ್ಕಳಿಗೆ ಚಟವಾಗಿ ಪರಿಣಮಿಸಿದೆ. ಇತ್ತೀಚೆಗೆ ಒಬ್ಬ ಬಾಲಕ ಇದೆ ಮೊಬೈಲ್ ಗೇಮ್ ಹುಚ್ಚಿನಿಂದ ತನ್ನ ತಾಯಿಯನ್ನು ಕೊಂದನು ಮತ್ತು ಇತ್ತೀಚೆಗೆ ಇನ್ನೊಬ್ಬ ಹುಡುಗ ಅದೇ ಚಟದಿಂದ ಅವನೇ ಪ್ರಾಣ ಬಿಟ್ಟಿದ್ದಾನೆ. ಮೊಬೈಲ್ ನಲ್ಲಿ ಗೇಮ್ ಆಡದಂತೆ ತಾಯಿ ತಡೆದಿದ್ದಕ್ಕೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಈ ಘಟನೆ ನಡೆದಿದೆ.
ದಿಂಡೋಶಿ ಪೊಲೀಸ್ ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕ ತನ್ನ ಮೊಬೈಲ್ ಫೋನ್ನಲ್ಲಿ ಆಟವಾಡುತ್ತಿದ್ದಾಗ ಆತನ ತಾಯಿ ಬುಧವಾರ ಸಂಜೆ ಬೈದಿದ್ದಾರೆ… ಅವನಿಂದ ಮೊಬೈಲ್ ಕಿತ್ತುಕೊಂಡು…. ಓದು ಎಂದು ಹೇಳಿ ಹೊರಗೆ ಹೋಗಿದ್ದಾರೆ. ಆದರೆ ಅಷ್ಟಕ್ಕೇ ಮನನೊಂದ ಬಾಲಕ ಕಠಿಣ ನಿರ್ಧಾರ ಕೈಗೊಂಡಿದ್ದಾನೆ.
ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸೂಸೈಡ್ ನೋಟ್ ಬರೆದಿಟ್ಟು ಮನೆಯಿಂದ ಹೊರ ಹೋಗಿದ್ದಾನೆ…. ನಂತರ ಹಳಿಗಳ ಮೇಲೆ ಹೋಗಿ ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಗೆ ಮರಳಿದ ತಾಯಿ, ಮಗ ಬರೆದಿರುವ ಸೂಸೈಡ್ ನೋಟ್ ನೋಡಿ ಗಾಬರಿಗೊಂಡಿದ್ದಾಳೆ. ತಕ್ಷಣ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಬಾಲಕನೊಬ್ಬ ರೈಲಿನ ಮುಂದೆ ಹಾರಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಇದರೊಂದಿಗೆ ಆ ತಾಯಿಯನ್ನು ಕರೆದುಕೊಂಡು ಅಲ್ಲಿಗೆ ಹೋದಾಗ…. ಮೃತ ಬಾಲಕನನ್ನು ತನ್ನ ಮಗನೆ ಎಂದು ಕುಟುಂಬದ ಸದಸ್ಯರು ಗುರುತಿಸಿದ್ದಾರೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Mumbai Boy Dies By Suicide After Mother Stopped Him From Playing Mobile Games



