ಸಾಲಬಾಧೆಯಿಂದ ಕುಟುಂಬ ಸಮೇತ ಕಾರಿಗೆ ಬೆಂಕಿ ಹಚ್ಚಿದ ಉದ್ಯಮಿ
ಸಾಲದ ಸುಳಿಯಲ್ಲಿ ಸಿಲುಕಿರುವ ಉದ್ಯಮಿಯೊಬ್ಬರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಕಾರಿನ ಸಮೇತ ಬೆಂಕಿಗೆ ಆಹುತಿಯಾಗಿದ್ದು, ಪತ್ನಿ ಹಾಗೂ ಮಗ ಪಾರಾಗಿದ್ದಾರೆ.
ಮುಂಬೈ: ಸಾಲದ ಸುಳಿಯಲ್ಲಿ ಸಿಲುಕಿರುವ ಉದ್ಯಮಿಯೊಬ್ಬರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಕಾರಿನ ಸಮೇತ ಬೆಂಕಿಗೆ ಆಹುತಿಯಾಗಿದ್ದು, ಪತ್ನಿ ಹಾಗೂ ಮಗ ಪಾರಾಗಿದ್ದಾರೆ. ಆದರೆ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ.
58 ವರ್ಷದ ರಾಮರಾಜ್ ಭಟ್ ಮಂಗಳವಾರ ಮಧ್ಯಾಹ್ನದ ಊಟಕ್ಕೆ ಪತ್ನಿ ಮತ್ತು ಮಗನನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದರು. ಬಳಿಕ ಲಾಂಗ್ ಡ್ರೈವ್‌ಗೆ ತೆರಳಿದರು. ಬಳಿಕ ರಸ್ತೆ ಬದಿ ಕಾರನ್ನು ನಿಲ್ಲಿಸಿದ್ದಾರೆ. ಡ್ರೈವಿಂಗ್ ಸೀಟಿನಲ್ಲಿದ್ದ ರಾಮರಾಜ್ ಭಟ್ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾನೆ. ಕಾರಿನಲ್ಲಿದ್ದ 57 ವರ್ಷದ ಪತ್ನಿ ಸಂಗೀತಾ ಭಟ್ ಹಾಗೂ 25 ವರ್ಷದ ಮಗ ನಂದನ್ ಮೇಲೆಯೂ ಪೆಟ್ರೋಲ್ ಸುರಿದಿದ್ದಾನೆ. ನಂತರ ಮುಂದುವರಿದು ಅವರಿಗೂ ಬೆಂಕಿ ಹಚ್ಚಿದ್ದಾನೆ. ಕಾರು ಹೊತ್ತಿ ಉರಿದ ಸಂದರ್ಭದಲ್ಲಿ ರಾಮರಾಜ್ ಭಟ್ ಸಜೀವ ದಹನವಾಗಿದ್ದರು.
ಅಷ್ಟರಲ್ಲಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಉದ್ಯಮಿಯ ಪತ್ನಿ ಹಾಗೂ ಮಗ ಹೇಗೋ ಬಾಗಿಲು ತೆರೆದು ಹೊರಗೆ ಬಂದರು. ಆದರೆ ಅವರಿಗೂ ತೀವ್ರ ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಕಾರಿನ ಬೆಂಕಿಯನ್ನು ನಿಯಂತ್ರಿಸಲಾಗಿದೆ.
ಮತ್ತೊಂದೆಡೆ ಪೊಲೀಸರಿಗೆ ಸುಟ್ಟ ಕಾರಿನಲ್ಲಿದ್ದ ಬ್ಯಾಗ್‌ನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉದ್ಯಮಿ ಅದರಲ್ಲಿ ಬರೆದಿದ್ದಾರೆ ಎಂದು ತಿಳಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
nagpur businessman dies after setting car with family inside on fire
Follow us On
Google News |
Advertisement