Crime News, ದೇವಸ್ಥಾನದ ಆವರಣದಲ್ಲಿ ಮಾಂಸದ ಜತೆಗೆ ಮದ್ಯ ಸೇವಿಸಿದ ಅರ್ಚಕನ ಹತ್ಯೆ
ದೇವಸ್ಥಾನದ ಆವರಣದಲ್ಲಿ ಮಾಂಸದ ಜತೆಗೆ ಮದ್ಯ ಸೇವಿಸಿದ ಆರೋಪದ ಮೇಲೆ ಅರ್ಚಕನನ್ನು ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಫಿಲಿಭಿತ್‌ನಲ್ಲಿ ಬೆಳಕಿಗೆ ಬಂದಿದೆ.
ಲಖನೌ: ದೇವಸ್ಥಾನದ ಆವರಣದಲ್ಲಿ ಮಾಂಸದ ಜತೆಗೆ ಮದ್ಯ ಸೇವಿಸಿದ ಆರೋಪದ ಮೇಲೆ ಅರ್ಚಕನನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಫಿಲಿಭಿತ್‌ನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನವಾಡಿಯ ಜಿತಿನಿಯಾ ಗ್ರಾಮದ ಮಹಾದೇವ ಸ್ಧಾನ ದೇವಾಲಯದ ಅರ್ಚಕ ಬಾಬಾ ಋಷಿಗಿರಿ ಅಲಿಯಾಸ್ ಮದನ್‌ಲಾಲ್ ಕಾಣಿಸುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಜುಲೈ 7 ರಂದು ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಪೂಜಾರಿಗಾಗಿ ಹುಡುಕಾಟ ನಡೆಸಿದ್ದು, ರಸೂಲಾ ಗ್ರಾಮದ ಕಾಲುವೆಯಲ್ಲಿ ಆತನ ಮೃತ ದೇಹ ಪತ್ತೆಯಾಗಿದೆ.
ಅರ್ಚಕನ ಪತ್ನಿ ಕಲಾವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಮದನ್‌ಲಾಲ್‌ನೊಂದಿಗೆ ನಾನ್ಹೆ ಅಲಿಯಾಸ್ ಲಾಲಾ ರಾಮ್ ಕೊನೆಯದಾಗಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸರು ಕಂಡುಕೊಂಡರು.
ಪೋಲೀಸ್ ತನಿಖೆಯ ಸಮಯದಲ್ಲಿ, ನನ್ಹೆ ಇತರ ಇಬ್ಬರು ಆರೋಪಿಗಳ ಸಹಾಯದಿಂದ ಕೊಂದಿರುವುದಾಗಿ ಅಪರಾಧವನ್ನು ಒಪ್ಪಿಕೊಂಡರು. ಅರ್ಚಕ ಬಾಬಾ ಋಷಿಗಿರಿ ದೇವಸ್ಥಾನದ ಆವರಣದಲ್ಲಿ ಮದ್ಯ ಸೇವಿಸುತ್ತಾರೆ ಮತ್ತು ಮಾಂಸ ತಿನ್ನುತ್ತಾರೆ ಈ ಬಗ್ಗೆ ಹಲವಾರು ಬಾರಿ ಹೇಳಿದರೂ ಕೇಳಲಿಲ್ಲ.. ಅದಕ್ಕೆ ಕೊಂದಿರುವುದಾಗಿ ಹೇಳಿದರು.
ಅವರೇ ಅಂದು ಸ್ವತಃ ಮಾಂಸ ಮತ್ತು ಮದ್ಯವನ್ನು ತಂದು ಕುಡಿಸಿ, ಜಗಳವಾಡಿದ್ದಾರೆ, ನಂತರ ದೊಣ್ಣೆಗಳಿಂದ ತೀವ್ರವಾಗಿ ಹೊಡೆದಿದ್ದಾರೆ. ಪ್ರಾಣವನ್ನು ಉಳಿಸಿಕೊಳ್ಳಲು ಹೊಲಕ್ಕೆ ಓಡಿಹೋದರೂ ಬಿಡದೆ ಹಿಂಬಾಲಿಸಿದಾಗ ಗ್ರಾಮದ ಬಳಿಯ ಕಾಲುವೆಯ ಬಳಿ ರಕ್ತಸಿಕ್ತವಾಗಿ ಬಿದ್ದಿದ್ದ…
ಗಾಬರಿಗೊಂಡು ಅಲ್ಲಿದ್ದ ಮರಗಳ ಪೊದೆಯಲ್ಲಿ ದೊಣ್ಣೆ ಎಸೆದು ಓಡಿಹೋಗಿರುವುದಾಗಿ ಹೇಳಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಹೊಡೆಯಲು ಬಳಸಿದ ದೊಣ್ಣೆಗಳನ್ನು ವಶಪಡಿಸಿಕೊಂಡಿದ್ದಾರೆ.
priest killed over allegations of having meat on temple premises
Follow us On
Google News |