ಚೆನ್ನೈ: ತಮಿಳುನಾಡಿನಲ್ಲಿ ದಾರುಣ ಘಟನೆಯೊಂದು ನಡೆದಿದೆ. ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನಾಲ್ವರು ಬಾಲಕಿಯರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಕಡಲೂರು ಜಿಲ್ಲೆಯ ನೆಲ್ಲಿಕುಪ್ಪಂ ಬಳಿ ಭಾನುವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ.
ನೆಲ್ಲಿಕುಪ್ಪಂ ಸಮೀಪದ ಗ್ರಾಮಗಳ ಮಹಿಳೆಯರು ಮತ್ತು ಬಾಲಕಿಯರು ಭಾನುವಾರ ಮಧ್ಯಾಹ್ನ ಕೆದಿಲಂ ನದಿ ಅಣೆಕಟ್ಟಿನ ಬಳಿ ಈಜಲು ತೆರಳಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ.
ಘಟನೆಯನ್ನು ಕಂಡ ಹಲವಾರು ಸ್ಥಳೀಯರು ನೀರಿನಲ್ಲಿ ಮುಳುಗಿದ ಎಲ್ಲರನ್ನೂ ರಕ್ಷಿಸಿ ಕಡಲೂರು ಆಸ್ಪತ್ರೆಗೆ ಸಾಗಿಸಿದರು. ಆದರೆ, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಮೃತರಲ್ಲಿ ಐವರು ಕೂಚಿಪಾಳ್ಯಂ ಮೂಲದವರಾಗಿದ್ದರೆ, ಇಬ್ಬರು ಅಕ್ಕ ಆಯಂಕುರಿಂಜಿಪಾಡಿ ಗ್ರಾಮದವರು. ಈ ಘಟನೆ ಸ್ಥಳೀಯವಾಗಿ ತೀವ್ರ ದುರಂತಕ್ಕೆ ಕಾರಣವಾಗಿತ್ತು.
ಮಾಹಿತಿ ಪಡೆದ ಮೃತರ ಸಂಬಂಧಿಕರು ಹಾಗೂ ಕುಟುಂಬಸ್ಥರು ಕೂಡ್ಲೂರು ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Seven Drown In River Near Nellikuppam In Cuddalore
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.