ಪುಸಲಾಯಿಸಿ 6 ಮಕ್ಕಳ ಮೇಲೆ ಅತ್ಯಾಚಾರ, ನಾಗ್ಪುರದಲ್ಲಿ ಘಟನೆ
ಯುವಕನ ಕಾಮಕ್ಕೆ ಆರು ಮಕ್ಕಳು ಬಲಿಯಾಗಿವೆ. ಮರದಿಂದ ಮಾವು, ಹುಣಸೆ ಹಣ್ಣು ಕೀಳುವ ನೆಪದಲ್ಲಿ ಯುವಕ ಕೊಳಗೇರಿಯ ಮಕ್ಕಳನ್ನು ಮಹಾರಾಜಬಾಗ್ ಆವರಣಕ್ಕೆ ಕರೆದುಕೊಂಡು ಹೋಗುತ್ತಿದ್ದನು.
ನಾಗ್ಪುರ: ಸೀತಾಬರ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನವೀಯತೆ ತಲೆತಗ್ಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ವಸಂತರಾವ್ ನಾಯ್ಕ್ ಕೊಳೆಗೇರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಯುವಕನ ಕಾಮಕ್ಕೆ ಆರು ಮಕ್ಕಳು ಬಲಿಯಾಗಿವೆ. ಮರದಿಂದ ಮಾವು, ಹುಣಸೆ ಹಣ್ಣು ಕೀಳುವ ನೆಪದಲ್ಲಿ ಯುವಕ ಕೊಳಗೇರಿಯ ಮಕ್ಕಳನ್ನು ಮಹಾರಾಜಬಾಗ್ ಆವರಣಕ್ಕೆ ಕರೆದುಕೊಂಡು ಹೋಗುತ್ತಿದ್ದನು, ಈ ವೇಳೆ ನಿರ್ಜನ ಸ್ಥಳದಲ್ಲಿ ಅವರನ್ನು ಕಾಮಕ್ಕೆ ಬಳಸಿಕೊಳ್ಳುತ್ತಿದ್ದನು.
ಯಾರಿಗೂ ಏನನ್ನೂ ಹೇಳಬೇಡಿ ಎಂದು ಬೆದರಿಸಿದ್ದ ಎನ್ನಲಾಗಿದೆ. ಈ ಮೂಲಕ ಕ್ಯಾಂಪಸ್‌ನ ಒಂದಲ್ಲ ಎರಡಲ್ಲ, 6 ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಕೊನೆಗೆ ಒಂದು ಮಗುವಿನಿಂದ ಬಹಿರಂಗವಾದ ಬಳಿಕ ಆರೋಪಿ ಯುವಕನ ದುಷ್ಕೃತ್ಯದ ಬಗ್ಗೆ ಎಲ್ಲ ಮಕ್ಕಳು ಹೇಳಿದ್ದಾರೆ.
9 ವರ್ಷದ ಮಗುವಿನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಧರಂಪೇಟ್‌ನ ಗಡ್ಗೆನಗರ ನಿವಾಸಿ ಮಯೂರ್ ಮೋದಕ್ (28) ಎಂದು ಹೇಳಲಾಗಿದೆ. ಆತನ ಕಾಮಕ್ಕೆ ಬಲಿಯಾದ ಮಕ್ಕಳು 7 ರಿಂದ 11 ವರ್ಷದವರಾಗಿದ್ದಾರೆ. ಸದ್ಯ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
Follow us On
Google News |