ಕೌಟುಂಬಿಕ ಕಲಹ, ತಂದೆಯನ್ನು ಕೊಂದ ಮಗ

Story Highlights

ಕೌಟುಂಬಿಕ ಕಲಹದಿಂದ ಮಗನೇ ತಂದೆಯನ್ನು ಕೊಂದ ಘಟನೆ ನೆರೆ ರಾಜ್ಯ ತೆಲಂಗಾಣದಲ್ಲಿ ನಡೆದಿದೆ

ತೆಲಂಗಾಣ: ಕೌಟುಂಬಿಕ ಕಲಹದಿಂದ ಮಗನ ಕೈಯಲ್ಲೇ ತಂದೆ ಧಾರುಣವಾಗಿ ಹತ್ಯೆಯಾಗಿರುವ ಘಟನೆ ನಡೆದಿದೆ. ಗ್ರಾಮದ ಶನಿಗಾಲ ರವಿ ಮದ್ಯ ಸೇವಿಸಿ ಪತ್ನಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ. ಗುರುವಾರ ರಾತ್ರಿ ಸಹ ಕುಡಿದ ಅಮಲಿನಲ್ಲಿ ಪತ್ನಿ ಜೊತೆ ರವಿ ಜಗಳವಾಡಿದ್ದಾನೆ.

ಈ ವೇಳೆ ಮಗ ಶಿವ ಇಬ್ಬರನ್ನೂ ಒಂದುಗೂಡಿಸಲು ಯತ್ನಿಸಿದ. ಆದರೂ ತಂದೆ ಮಗನ ಮಾತು ಕೇಳದಿದ್ದಾಗ ಕೋಪದಿಂದ ಮಗ ಶಿವ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Son Kills Father With Family Disputes In Telangana

Related Stories