Crime News: ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು 5.52 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ
ಧಾರವಾಡದಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ದುಷ್ಕರ್ಮಿಗಳು 5.52 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಧಾರವಾಡದಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ದುಷ್ಕರ್ಮಿಗಳು 5.52 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಶಕುಂತಲಾ ಅವರು ಧಾರವಾಡ ಜಿಲ್ಲೆಯ ಹಳೇ ಹುಬ್ಬಳ್ಳಿಯ ನಗರದ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕಿ. ಕಳೆದ 2 ದಿನಗಳ ಹಿಂದೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದರು.
ಈ ವೇಳೆ ನಿಗೂಢ ವ್ಯಕ್ತಿಗಳು ಮಧ್ಯರಾತ್ರಿ ಮನೆಯ ಬಾಗಿಲು ಮುರಿದು ಬ್ಯೂರೋದಲ್ಲಿದ್ದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ನಿನ್ನೆ ರಾತ್ರಿ ಶಕುಂತಲಾ ಮನೆಗೆ ಬಂದಾಗ ಬೀಗ ಮುರಿದಿತ್ತು.
ಗಾಬರಿಯಿಂದ ಒಳಗೆ ಹೋದರು. ಬ್ಯೂರೋದಲ್ಲಿದ್ದ 4.92 ಲಕ್ಷ ರೂಪಾಯಿ ಚಿನ್ನಾಭರಣ, 44 ಸಾವಿರ ಬೆಳ್ಳಿ ವಸ್ತುಗಳು ಹಾಗೂ 10 ಸಾವಿರ ನಗದು ದೋಚಿರುವುದು ಬೆಳಕಿಗೆ ಬಂದಿದೆ, ಈ ಬಗ್ಗೆ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಕಳ್ಳತನ ಆಗಿರುವ ಆಭರಣಗಳ ಒಟ್ಟು ಮೌಲ್ಯ 5.52 ಲಕ್ಷ ಎಂದು ಹೇಳಲಾಗಿದೆ. ಶಕುಂತಲಾ ನೀಡಿದ ದೂರಿನ ಮೇರೆಗೆ ಹಳೇ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Theft of jewelery worth Rs 5 lakh after breaking the door of the locked house in Dharwad
Follow us On
Google News |
Advertisement