ಉಡುಪಿ: ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಾಯ

ಉಡುಪಿ: ಕೊಡವೂರು ಸಮೀಪದ ಮೂಡಬೆಟ್ಟುವಿನ ಮನೆಯೊಂದರಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ಜೂ.13ರ ಸೋಮವಾರ ನಡೆದಿದೆ. ಗೋಪಾಲ ಎಂಬುವರಿಗೆ ಸೇರಿದ ಮನೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.
ಸ್ಫೋಟದ ನಂತರ, ಬೆಂಕಿ ಇಡೀ ಅಡುಗೆಮನೆಗೆ ವ್ಯಾಪಿಸಿದ್ದು, ಕುಟುಂಬವು ಸುರಕ್ಷತೆಗಾಗಿ ಹೊರಗಡೆಗೆ ಓಡಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
Three injured in LPG cylinder blast in Udupi



