ಮಿಜೋರಾಂನಲ್ಲಿ ಭಾರೀ ಹೆರಾಯಿನ್ ವಶ
ಮಿಜೋರಾಂನಲ್ಲಿ 222 ಗ್ರಾಂ ತೂಕದ ಹೆರಾಯಿನ್‌ನೊಂದಿಗೆ ಇಬ್ಬರ ಬಂಧನ
ಮಿಜೋರಾಂನಲ್ಲಿ ಭಾರೀ ಪ್ರಮಾಣದ ಹೆರಾಯಿನ್ ವಶ. ಲಾಂಗ್ಲಿ ಜಿಲ್ಲೆಯ ಸತಿಕ್ ಬಳಿ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಮಿಜೋರಾಂ ಪೊಲೀಸರು ಬಂಧಿಸಿದ್ದಾರೆ. ಅವರಿಂದ 222 ಗ್ರಾಂ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಇದರ ಮೌಲ್ಯ 1.11 ಕೋಟಿ ರೂ.
ಸೋಪ್ ಬಾಕ್ಸ್ ಗಳಲ್ಲಿ ಹೆರಾಯಿನ್ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಒಟ್ಟು 17 ಸೋಪ್ ಬಾಕ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಿಜೋರಾಂನಲ್ಲಿ ಮಾದಕವಸ್ತು ಕಳ್ಳಸಾಗಣೆ ತಡೆಯಲು ಸಾಕಷ್ಟು ನಿಗಾವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಶುಕ್ರವಾರ ನಹ್ತಿಯಾಲ್ ಜಿಲ್ಲೆಯಲ್ಲಿ 502.46 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಅದರ ಅಂದಾಜು ಮೌಲ್ಯ 25 ಲಕ್ಷ ರೂ.
Two Apprehended With Over 222 Grams Heroin In Mizoram
Follow us On
Google News |