ರಾಮನಗರದಲ್ಲಿ ಈಜಲು ಕೃಷಿ ಹೊಂಡಕ್ಕೆ ಇಳಿದಿದ್ದ ಇಬ್ಬರ ದುರ್ಮರಣ

ಬೆಂಗಳೂರು (Bengaluru): ಬಿಡದಿ (Bidadi) ಬಳಿಯ ಕೃಷಿ ಹೊಂಡಕ್ಕೆ ಸ್ನೇಹಿತನ ಜತೆ ಈಜಲು ಹೋಗಿದ್ದ ಎಚ್ಎಸ್ಆರ್ ಲೇಔಟ್ (HSR Layout) ನಿವಾಸಿ 29 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು ಎಚ್.ಎಸ್.ಆರ್. ಲೇಔಟ್ ನಿವಾಸಿಗಳಾದ ಶ್ರುತಿ ಕುಮಾರ್ (30) ಮತ್ತು ಹರೀಶ್ (22) Shruti Kumar (30) and Harish (22) ಮೃತರು ಎಂದು ಗುರುತಿಸಲಾಗಿದೆ. ಶೃತಿ ಕುಮಾರ್ ತನ್ನ ನಾಲ್ವರು ಸ್ನೇಹಿತರೊಂದಿಗೆ ತೌಟನಹಳ್ಳಿಯಲ್ಲಿರುವ ಚಿಕ್ಕಪ್ಪನ ಮನೆಗೆ ಬಂದಿದ್ದರು. ಮಧ್ಯಾಹ್ನ ಊಟದ ನಂತರ ಸ್ನೇಹಿತರೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಚಿಕ್ಕಪ್ಪನವರ ತೋಟದಲ್ಲಿರುವ ಕೃಷಿ ಹೊಂಡದಲ್ಲಿ ಈಜಲು ಹೋದಾಗ ಅವಘಡ ಸಂಭವಿಸಿದೆ. ಭಾನುವಾರದ ರಜೆ ಕಳೆಯಲು ಬೆಂಗಳೂರಿನಿಂದ ಬಂದಿದ್ದರು ಎನ್ನಲಾಗಿದೆ. ಇವರೆಲ್ಲರೂ ಮದ್ಯ ಸೇವಿಸಿದ್ದರು ಎನ್ನಲಾಗಿದೆ.



