Pubg ಆಡಬೇಡ ಎಂದ ತಾಯಿಯನ್ನೇ ಕೊಂದ ಮಗ, ಮೂರು ದಿನ ಶವ ಮುಚ್ಚಿಟ್ಟಿದ್ದ !
ಉತ್ತರ ಪ್ರದೇಶದ ಲಕ್ನೋದಲ್ಲಿ ಧಾರುಣ ಹತ್ಯೆ ನಡೆದಿದೆ. PUBG ಆಡಬೇಡ ಎಂದಿದ್ದಕ್ಕೆ ಹೆತ್ತ ತಾಯಿಯನ್ನೇ ಗುಂಡಿಕ್ಕಿ ಕೊಂದಿದ್ದಾನೆ ಬಾಲಕ
ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಧಾರುಣ ಹತ್ಯೆ ನಡೆದಿದೆ. PUBG ಆಡಬೇಡ ಎಂದಿದ್ದಕ್ಕೆ ಹೆತ್ತ ತಾಯಿಯನ್ನೇ ಗುಂಡಿಕ್ಕಿ ಕೊಂದಿದ್ದಾನೆ ಬಾಲಕ. ಜೊತೆಗೆ ತಾಯಿ ಶವದೊಂದಿಗೆ ಎರಡು ದಿನ ಮನೆಯಲ್ಲಿಯೇ ಇದ್ದಾನೆ. ಕೊಲೆಯನ್ನು ಮುಚ್ಚಿಹಾಕಲು ಪೊಲೀಸರಿಗೆ ಕಟ್ಟುಕಥೆಗಳನ್ನು ಹೇಳಿದ್ದಾನೆ. ಆದರೆ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ನಿಜ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ.
ಸಾಧನಾ ಎಂಬ ಮಹಿಳೆ ತನ್ನ 16 ವರ್ಷದ ಮಗ ಮತ್ತು 10 ವರ್ಷದ ಮಗಳೊಂದಿಗೆ ಲಕ್ನೋದ ಪಿಜಿಐ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಪತಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕೋಲ್ಕತ್ತಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದರೊಂದಿಗೆ ಸಂಸಾರದ ಎಲ್ಲ ಜವಾಬ್ದಾರಿಯನ್ನು ಆಕೆಯೇ ನಿಭಾಯಿಸುತ್ತಿದ್ದಳು. ಸಾಧನಾ ಮಗ PubG ಆಟಕ್ಕೆ ದಾಸನಾಗಿದ್ದ… ಈ ಅಭ್ಯಾಸ ಬಿಡಿಸಲು ತಾಯಿ ಆಗಾಗ ಮಗನನ್ನು ಆಡದಂತೆ ತಾಕೀತು ಮಾಡುತ್ತಿದ್ದಳು… ಆದರೆ, ಶನಿವಾರ ರಾತ್ರಿ ಆಕೆ ಮಲಗಿದ್ದಾಗ ಆಕೆಯ ಮಗ, ತಂದೆ ಲೈಸನ್ಸ್ ಪಡೆದಿದ್ದ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾನೆ. ಆ ಬಳಿಕ ಮೂರು ದಿನಗಳ ಕಾಲ ತಾಯಿ ಶವವನ್ನು ಮನೆಯಲ್ಲಿ ಬಚ್ಚಿಟ್ಟಿದ್ದ… ಶವ ದುರ್ವಾಸನೆ ಬೀರದಂತೆ ಕೊಠಡಿಗಳಲ್ಲಿ ಪ್ರತಿದಿನ ರೂಮ್ ಫ್ರೆಶ್ ನರ್ ಗಳನ್ನು ಸಿಂಪಡಿಸುತ್ತಿದ್ದ.
ಈ ನಡುವೆ, ಮಂಗಳವಾರ ರಾತ್ರಿ ತಂದೆಗೆ ಕರೆ ಮಾಡಿದ ಬಾಲಕ, ಮನೆ ದುರಸ್ತಿಗೆ ಬಂದ ಎಲೆಕ್ಟ್ರಿಷಿಯನ್ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಹೇಳಿದ್ದಾನೆ. ಅದೇ ರೀತಿ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಕೊಳೆತ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ, ಆಕೆಯ ಮಗಳು ನಿಜವಾದ ವಿಷಯವನ್ನು ಹೇಳಿದ್ದಾಳೆ. ಕೊಲೆಯ ವಿಚಾರವನ್ನು ಯಾರಿಗಾದರೂ ಹೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಗಿ ಆಕೆ ಬಹಿರಂಗಪಡಿಸಿದ್ದಾಳೆ. ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಸತ್ಯ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Up Teen Shot Mother Over Pubg Used Air Freshener To Cover Stench
Follow us On
Google News |