Facebook, ಫೇಸ್‌ಬುಕ್ ಪ್ರಿಯನಿಗಾಗಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ !
Facebook Lover, ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪತ್ನಿಯೇ ಪತಿಯನ್ನು ಕೊಲೆ ಮಾಡಿಸಿದ್ದಾಳೆ
ನವದೆಹಲಿ: ಫೇಸ್‌ಬುಕ್‌ನಲ್ಲಿ (Facebook Lover) ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪತ್ನಿಯೇ ಪತಿಯನ್ನು ಕೊಲೆ ಮಾಡಿಸಿದ್ದಾಳೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ದುಷ್ಕೃತ್ಯ ನಡೆದಿದೆ.
40 ವರ್ಷದ ಜೀಬಾ ಖುರೇಷಿ ಅವರು ಮಧ್ಯ ದೆಹಲಿಯ ದರಿಯಾಗಂಜ್‌ನ ರಿಯಲ್ ಎಸ್ಟೇಟ್ ಡೀಲರ್ ಮೊಯಿನುದ್ದೀನ್ ಖುರೇಷಿ (47) ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.
ಈ ನಡುವೆ ಆಕೆಗೆ ಉತ್ತರ ಪ್ರದೇಶದ ಮೀರತ್ ಮೂಲದ 29 ವರ್ಷದ ಶೋಯೆಬ್ ಎಂಬಾತ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಾನೆ. ಇಬ್ಬರೂ ಹಲವಾರು ಬಾರಿ ಭೇಟಿಯಾಗಿದ್ದಾರೆ. ಅವರ ನಡುವೆ ವಿವಾಹೇತರ ಸಂಬಂಧ ಏರ್ಪಟ್ಟಿತ್ತು. ನಂತರ ಆಕೆ ತನ್ನ ಪತಿಯನ್ನು ಕೊಂದು ಮದುವೆಯಾಗುವಂತೆ ಶೋಯೆಬ್‌ಗೆ ಒತ್ತಾಯಿಸಿದಳು.
ಜಿಬಾ ಮತ್ತು ಶೋಯೆಬ್ ತನ್ನ ಪತಿ ಮೊಯಿನುದ್ದೀನ್ ಖುರೇಷಿಯನ್ನು ಹತ್ಯೆ ಮಾಡಲು ಐದು ತಿಂಗಳಿನಿಂದ ಸಂಚು ರೂಪಿಸಿದ್ದರು. ಇದಕ್ಕಾಗಿ ಉತ್ತರ ಪ್ರದೇಶದ ಗಾಜಿಯಾಬಾದ್ ನ 29 ವರ್ಷದ ವಿನೀತ್ ಗೋಸ್ವಾಮಿ ಜತೆ ಶೋಯೆಬ್ 6 ಲಕ್ಷ ರೂಪಾಯಿ ಒಪ್ಪಂದ ಮಾಡಿಕೊಂಡಿದ್ದ. ಜೀಬಾ ತನ್ನ ಪತಿ ಎಲ್ಲಿದ್ದಾನೆ ಎಂದು ವಾಟ್ಸಾಪ್ ಮೂಲಕ ಶೋಯೆಬ್‌ಗೆ ಮಾಹಿತಿ ನೀಡುತ್ತಿದ್ದಳು. ಆಕೆಯಿಂದ ಮಾಹಿತಿ ಪಡೆದ ಗೋಸ್ವಾಮಿ ಜಿಬಾಳ ಪತಿ ಮೊಯಿನುದ್ದೀನ್ ನನ್ನು ಹತ್ಯೆ ಮಾಡಲು ಹಲವು ಬಾರಿ ವಿಫಲ ಯತ್ನ ನಡೆಸಿದ್ದ.
ಮತ್ತೊಂದೆಡೆ, ಜೀಬಾ ತನ್ನ ಪತಿಯನ್ನು ಕೊಂದು ಬೇಗನೆ ಮದುವೆಯಾಗುವಂತೆ ಶೋಯೆಬ್‌ಗೆ ಮತ್ತಷ್ಟು ಒತ್ತಡ ಹೇರಿದಳು. ಇದರೊಂದಿಗೆ ಶೋಯೆಬ್ ಮತ್ತು ಗೋಸ್ವಾಮಿ ಪ್ಲಾನ್ ಮಾಡಿದರು. ಇಬ್ಬರೂ ಮೀರತ್‌ಗೆ ಹೋಗಿ ಬೈಕ್ ಕಳವು ಮಾಡಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರೂ ಬೈಕ್ ನಲ್ಲಿ ಜೀಬಾ ಪತಿ ಮೊಯಿನುದ್ದೀನ್ ಖುರೇಷಿ ಇದ್ದ ಪ್ರದೇಶಕ್ಕೆ ತೆರಳಿದ್ದರು.
ಶಾಲೆಯೊಂದರ ಬಳಿ ಮೂತ್ರ ಮಾಡಲು ಹೋಗಿದ್ದ ವರ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಇಬ್ಬರು ಕದ್ದ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ದರಿಯಾಗಂಜ್ ಪ್ರದೇಶದ ಹೋಟೆಲ್‌ವೊಂದರಲ್ಲಿ ಬೈಕ್ ಬಿಟ್ಟು ತೆರಳಿದ್ದರು.
ಮೊಯಿನುದ್ದೀನ್ ಖುರೇಷಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದರು. ಕದ್ದ ಬೈಕ್ ಅನ್ನು ಸಿಸಿಟಿವಿ ದೃಶ್ಯಗಳ ಮೂಲಕ ಗುರುತಿಸಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ವಿನೀತ್ ಗೋಸ್ವಾಮಿಯನ್ನು ಬಂಧಿಸಿದ್ದಾರೆ, ಜೊತೆಗೆ ಆಕೆಯ ಪ್ರಿಯಕರ ಶೋಯೆಬ್ ನನ್ನ ಬಂಧಿಸಿ… ಆರೋಪಿಯಿಂದ ಕಳವು ಮಾಡಿದ ಬೈಕ್, ಮಾರಕಾಸ್ತ್ರ ಹಾಗೂ 3 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.
ಶೋಯೆಬ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳಿರುವುದು ಕೂಡ ಬಹಿರಂಗವಾಗಿದೆ.
Wife Lover Arrested For Killing Husband In Delhi