ದಿನ ಭವಿಷ್ಯ 02 ನವೆಂಬರ್ 2026, ಸೋಮವಾರ

Today Horoscope: ನವೆಂಬರ್ 2ರ ದಿನ ಭವಿಷ್ಯದಲ್ಲಿ ಮೇಷದಿಂದ ಮೀನದವರೆಗೆ ಯಾವ ರಾಶಿಗೆ ಶುಭಫಲ, ಧನಲಾಭ, ಉದ್ಯೋಗದಲ್ಲಿ ಪ್ರಗತಿ ಸಿಗಲಿದೆ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ಸಂಪೂರ್ಣ ರಾಶಿಫಲ ಮಾಹಿತಿ.

ನವೆಂಬರ್ 2ರ ರಾಶಿ ಭವಿಷ್ಯದ ಸಂಪೂರ್ಣ ರಾಶಿ ಫಲ ನೋಡಲು ಕ್ಲಿಕ್ಕಿಸಿ: ದಿನ ಭವಿಷ್ಯ 02-11-2026: ಉದ್ಯೋಗ, ವಿವಾಹ ಪ್ರಯತ್ನಗಳು ಯಶಸ್ವಿ! ಈ ರಾಶಿಗಳಿಗೆ ಅಧಿಕಾರ ಯೋಗ

ಮೇಷ ರಾಶಿ: ಕುಟುಂಬದಲ್ಲಿ ಸಂತೋಷವಿದ್ದರೂ ಅನಿರೀಕ್ಷಿತ ಹಣಕಾಸಿನ ನಷ್ಟ ಸಾಧ್ಯತೆ ಇದೆ. ಅನಗತ್ಯ ಪ್ರಯಾಣ ಮತ್ತು ಬಂಧುಮಿತ್ರರೊಂದಿಗಿನ ವಾಗ್ವಾದಗಳಿಂದ ದೂರವಿರಿ.

ವೃಷಭ ರಾಶಿ: ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹೊಸ ಕೆಲಸಗಳಲ್ಲಿ ಅಡೆತಡೆ ಎದುರಾದರೂ ಯಶಸ್ಸು ಸಿಗಲಿದೆ, ಪ್ರಯಾಣ ಮತ್ತು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಮಿಥುನ ರಾಶಿ: ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು ಕುಟುಂಬದಲ್ಲಿ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಕೆಲಸಗಳಲ್ಲಿ ಯಶಸ್ಸು ಹಾಗೂ ಸ್ನೇಹಿತರ ಭೇಟಿಯಿಂದ ಸಂತೋಷ ಸಿಗಲಿದೆ.

ಕರ್ಕಾಟಕ ರಾಶಿ: ಹೊಸ ವಸ್ತು, ಬಟ್ಟೆ, ವಾಹನ ಹಾಗೂ ಆಭರಣ ಖರೀದಿಸುವ ಯೋಗವಿದೆ. ಅನಿರೀಕ್ಷಿತ ಧನಲಾಭ, ಶುಭ ಸುದ್ದಿ ಮತ್ತು ಬಾಕಿ ಕೆಲಸಗಳ ಪೂರ್ಣಗೊಳ್ಳುವಿಕೆ ಸಂತೋಷ ತರಲಿದೆ.

ಸಿಂಹ ರಾಶಿ: ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಮತ್ತು ಅನಿರೀಕ್ಷಿತ ಧನಲಾಭ ದೊರೆಯಲಿದೆ. ಆರೋಗ್ಯ ಉತ್ತಮವಾಗಿದ್ದು ಕುಟುಂಬದಲ್ಲಿ ನೆಮ್ಮದಿ, ಸಾಲದ ಸಮಸ್ಯೆಗಳಿಂದಲೂ ಪರಿಹಾರ ಸಿಗುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಪ್ರಮುಖ ಕೆಲಸಗಳಿಗೆ ಅಡೆತಡೆ ಎದುರಾಗಬಹುದು, ಬಂಧುಮಿತ್ರರೊಂದಿಗೆ ಮನಸ್ತಾಪ ಉಂಟಾಗಬಹುದು. ಮಕ್ಕಳ ವಿಚಾರದಲ್ಲಿ ಹಠ ಮಾಡದೆ ಹಳೆಯ ದ್ವೇಷಗಳನ್ನು ಮರೆತು ಮುಂದುವರಿಯಿರಿ.

ತುಲಾ ರಾಶಿ: ಹೊಸ ಕೆಲಸಗಳಿಗೆ ಯೋಜನೆ ರೂಪಿಸಲಿದ್ದು ಅನಿರೀಕ್ಷಿತ ಹಣಕಾಸಿನ ಲಾಭ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ, ಸ್ನೇಹಿತರ ಒಡನಾಟ ಮತ್ತು ಶುಭ ಸುದ್ದಿಗಳಿಂದ ದಿನ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ: ಕಲಾವಿದರು ಮತ್ತು ಮಾಧ್ಯಮ ಕ್ಷೇತ್ರದವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಕುಟುಂಬದಲ್ಲಿ ಸಂತೋಷ, ಸಮಾಜದಲ್ಲಿ ಗೌರವ ಹಾಗೂ ಹೊಸ ವಸ್ತು, ಬಟ್ಟೆ, ಆಭರಣ ಪಡೆಯುವ ಯೋಗವಿದೆ.

ಧನು ರಾಶಿ: ಶುಭ ಕಾರ್ಯಗಳ ಪ್ರಯತ್ನಗಳು ಯಶಸ್ವಿಯಾಗಲಿದ್ದು ಉತ್ತಮ ಸುದ್ದಿಗಳು ಕೇಳಿಬರಲಿವೆ. ಆತ್ಮೀಯರ ಸಹಕಾರ, ಅನಿರೀಕ್ಷಿತ ಧನಲಾಭ ಮತ್ತು ಹೊಸ ವಸ್ತುಗಳ ಖರೀದಿ ಸಾಧ್ಯತೆ ಇದೆ.

ಮಕರ ರಾಶಿ: ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿ ಕಂಡರೂ ವಿಳಂಬವಾಗಬಹುದು. ಹಣಕಾಸಿನ ನಷ್ಟ, ನಿರ್ಧಾರಗಳಲ್ಲಿ ಗೊಂದಲ ಹಾಗೂ ಗೌರವಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ವರ್ತಿಸಿ.

ಕುಂಭ ರಾಶಿ: ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷ ಇರಲಿದ್ದು ವೃತ್ತಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ಸಿಗಲಿದೆ. ಮುಂದೂಡಿದ್ದ ಪ್ರಮುಖ ಕೆಲಸಗಳು ಪೂರ್ಣಗೊಳ್ಳಲಿದ್ದು ಪ್ರಭಾವಿಗಳ ಭೇಟಿಯಿಂದ ಅವಕಾಶಗಳು ಸಿಗಬಹುದು.

ಮೀನ ರಾಶಿ: ಆತ್ಮೀಯರ ಸಹಕಾರ ದೊರೆತರೂ ಅನಿರೀಕ್ಷಿತ ಖರ್ಚು ಮತ್ತು ಹಣಕಾಸಿನ ನಷ್ಟದ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಅನಗತ್ಯ ಪ್ರಯಾಣಗಳನ್ನು ಮುಂದೂಡುವುದು ಉತ್ತಮ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories