ನೀವು ತಿಳಿಯಲೇ ಬೇಕು ಎಳನೀರು ಆರೋಗ್ಯ ಪ್ರಯೋಜನಗಳು

Major health benefits of coconut water

ನೀವು ತಿಳಿಯಲೇ ಬೇಕು ಎಳನೀರು ಆರೋಗ್ಯ ಪ್ರಯೋಜನಗಳು

Amazing Natural Health Benefits of Coconut Water

ಎಳನೀರು (ತೆಂಗಿನಕಾಯಿ ನೀರು ಅಥವಾ  ತೆಂಗಿನನೀರು) ಆಯುರ್ವೇದ ಔಷಧಿಗಳಲ್ಲಿಯೂ ಸಹ ಪ್ರಮುಖ ಪಾತ್ರವಹಿಸುತ್ತದೆ, ಎಳನೀರು, ಜೀರ್ಣಕ್ರಿಯೆ, ಮೂತ್ರ ವಿಸರ್ಜನೆ ಮತ್ತು ವೀರ್ಯ ಉತ್ಪಾದನೆಗೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಅಲ್ಲದೆ ಎಳನೀರು ನೈಸರ್ಗಿಕ ವಿಟಮಿನ್ಗಳು, ಮತ್ತು ಖನಿಜಾಂಶಗಳನ್ನು ಹೊಂದಿದೆ, ಇದರ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನಾವು ಪಡೆಯಬಹುದು.

ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ. ಎಳನೀರು ಸ್ನಾಯುಗಳ ಬಲವರ್ಧನೆಗೆ ಸಹಾಯ ಮಾಡುತ್ತದೆ.ಶಕ್ತಿ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಅಂಗಗಳ ಕಾರ್ಯವನ್ನು ಬೆಂಬಲಿಸುತ್ತದೆ. ತೆಂಗಿನ ನೀರು ಹೃದಯರಕ್ತನಾಳದ ಪರಿಣಾಮಗಳನ್ನು ಸಹ ತಡೆಯುತ್ತದೆ. ಕೊಲೆಸ್ಟರಾಲ್ ಅನ್ನು ಕಡಿಮೆಗೊಳಿಸಲು ಸಹಾಯಮಾಡುತ್ತದೆ.

ಎಳನೀರು ಮೂತ್ರಪಿಂಡ, ಮಧುಮೇಹ, ರಕ್ತದೊತ್ತಡ ನಿವಾರಣೆಗೂ ಸಹಕಾರಿ.

ಎಳನೀರು ಮೂತ್ರಪಿಂಡ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುವ ಪರಿಣಾಮಕಾರಿ ಆಯ್ಕೆ. ಇದು ಮೂತ್ರದಲ್ಲಿ ಕಲ್ಲುಗಳ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸುತ್ತದೆ.

type="adsense" data-ad-client="ca-pub-4577160196132345" data-ad-slot="4977565719" data-auto-format="rspv" data-full-width="">
ನೀವು ತಿಳಿಯಲೇ ಬೇಕು ಎಳನೀರು ಆರೋಗ್ಯ ಪ್ರಯೋಜನಗಳು - Kannada News

ತೆಂಗಿನನೀರು ಮಧುಮೇಹ ನಿರ್ವಹಣೆ ಮಾಡುವ ಶಕ್ತಿ ಹೊಂದಿದೆ. ತೆಂಗಿನಕಾಯಿ ನೀರಿನಲ್ಲಿ ಹೈಪೋಗ್ಲೈಸೆಮಿಕ್ ಮತ್ತು ನೆಫ್ರಾಪ್ರೊಟೆಕ್ಟಿವ್ ಚಟುವಟಿಕೆಗಳು ಕಂಡುಬರುತ್ತವೆ. ಇವು ರಕ್ತದ ಗ್ಲೂಕೋಸ್ ನಿರ್ವಹಣೆಗೆ ಹೆಚ್ಚು ಸಹಕಾರಿಯಾಗಿದೆ.

ಅಧಿಕ ರಕ್ತದೊತ್ತಡ ಹೊಂದಿದ್ದರೆ, ಆರೋಗ್ಯಕರ ರಕ್ತದೊತ್ತಡ ಮಟ್ಟವನ್ನು ಕಾಪಾಡಿಕೊಳ್ಳಲು ಎಳನೀರು ಸಹಾಯ ಮಾಡುತ್ತದೆ. ತೆಂಗಿನ ನೀರಿನಲ್ಲಿನ ಪೊಟಾಷಿಯಂನ ಹೆಚ್ಚಿನ ಮಟ್ಟಗಳು ಈ ಪ್ರಯೋಜನಕ್ಕೆ ಕಾರಣವಾಗುತ್ತದೆ.

ಇನ್ನಷ್ಟು ಎಳನೀರು ಆರೋಗ್ಯ ಪ್ರಯೋಜನಗಳು

೧. ನಿಶಕ್ತಿಗೆ ಎಳನೀರು ಅತ್ಯುತ್ತಮ ಆಯ್ಕೆ, ಪ್ರತಿದಿನ ಎಳನೀರನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದಲ್ಲದೆ, ನವ ಚೈತನ್ಯ ಇರುತ್ತದೆ.

೨. ಅಜೀರ್ಣ ಮತ್ತು ಹೊಟ್ಟೆನೋವು ಸಂಬಂದಿತ ಸಮಸ್ಯೆಗಳಿಗೆ ಎಳನೀರು ಒಳ್ಳೆಯ ಆರೋಗ್ಯ ಪರಿಣಾಮ ನೀಡುತ್ತದೆ. ಪ್ರತಿದಿನ ಎಳನೀರು ಸೇವಿಸಿದರೆ ಅಜೀರ್ಣ ಸಮಸ್ಯೆ ಮತ್ತು ಹೊಟ್ಟೆ ನೋವು ನಿವಾರಣೆ ಆಗುತ್ತದೆ.

೩. ಎಳನೀರು ಕೇವಲ ಆರೋಗ್ಯ ಪ್ರಯೋಜನೆಗಳನ್ನು ಮಾತ್ರ ಹೊಂದಿಲ್ಲ, ಇದು ಚರ್ಮಕ್ಕೂ ಅಷ್ಟೇ ಉತ್ತಮ ಪರಿಹಾರಗಳನ್ನು ನೀಡುತ್ತದೆ, ಸುಕ್ಕುಗಟ್ಟಿದ ಚರ್ಮವನ್ನು ಎಳನೀರಿನಿಂದ ತೊಳೆದರೆ ಚರ್ಮದ ಸುಕ್ಕು ನಿವಾರಣೆಯಾಗುತ್ತದೆ.////

Web Title : Major health benefits of coconut water
(Kannada News Live Alerts @ kannadanews.today)

Summary : Coconut Water health benefits includes supporting weight loss, managing diabetes, promoting digestion, managing high blood pressure drink fresh coconut water anytime of the day.

Follow us On

FaceBook Google News