Health Tips

ತೂಕ ಇಳಿಸಲು ಖಾಲಿ ಹೊಟ್ಟೆಯಲ್ಲಿ ಟೊಮೇಟೋ ಜ್ಯೂಸ್ ಟ್ರೈ ಮಾಡಿ! 7 ದಿನಕ್ಕೆ ರಿಸಲ್ಟ್

ಟೊಮೇಟೋ ಜ್ಯೂಸ್‌ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ, ಹಾಗೆಯೇ ಚರ್ಮ ಮತ್ತು ಹೃದಯದ ಆರೋಗ್ಯಕ್ಕೂ ಉತ್ತಮ

  • ಟೊಮೇಟೋ ಜ್ಯೂಸ್ ಆರೋಗ್ಯಕ್ಕೆ ಹೇಗೆ ಲಾಭದಾಯಕ?
  • ತೂಕ ಇಳಿಸಲು ಸಹಾಯ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ಚರ್ಮ ಮತ್ತು ಹೃದಯದ ಆರೋಗ್ಯ ಸುಧಾರಣೆ

Tomato Juice for Health : ನಾವು ಪ್ರತಿದಿನವೂ ಅಡುಗೆಯಲ್ಲಿ ಬಳಸುವ ಪ್ರಮುಖ ತರಕಾರಿಯೇ ಟೊಮೇಟೋ. ಆದರೆ ಈ ಟೊಮೇಟೋದಿಂದ ತಯಾರಿಸಿದ ಜ್ಯೂಸ್‌ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳಿವೆ.

ಇದು ದೇಹಕ್ಕೆ ಅಗತ್ಯವಿರುವ ವಿಟಮಿನ್‌ ಸಿ (Vitamin C), ಫೋಲೇಟ್‌ (Folate), ಮತ್ತು ಕ್ಯಾಲ್ಸಿಯಂ (Calcium) ಮುಂತಾದ ಪೋಷಕಾಂಶಗಳನ್ನು ನೀಡುತ್ತದೆ. ದಿನಕ್ಕೊಂದು ಗ್ಲಾಸ್‌ ಟೊಮೇಟೋ ಜ್ಯೂಸ್ ಸೇವಿಸಿದರೆ, ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುವ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ತೂಕ ಇಳಿಸಲು ಖಾಲಿ ಹೊಟ್ಟೆಯಲ್ಲಿ ಟೊಮೇಟೋ ಜ್ಯೂಸ್ ಟ್ರೈ ಮಾಡಿ! 7 ದಿನಕ್ಕೆ ರಿಸಲ್ಟ್

ತೂಕ ಇಳಿಸಲು (Weight Loss) ಟೊಮೇಟೋ ಜ್ಯೂಸ್!

ತೂಕ ಹೆಚ್ಚುವುದು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಆದರೆ ಕೇವಲ ಟೊಮೇಟೋ ಜ್ಯೂಸ್ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ನೀವು ಯೋಚಿಸಿದ್ದೀರಾ? ಹೌದು, ಟೊಮೇಟೋದಲ್ಲಿ ಕೇವಲ ಕಡಿಮೆ ಕಲೆರಿಗಳು (Low Calories) ಇರುವುದರಿಂದ, ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ತೂಕ ಇಳಿಸಲು ಸಹಾಯ ಮಾಡುತ್ತದೆ.

ಮೂಳೆಗಳಿಗೆ (Bones) ಬಲ ನೀಡುವ ಟೊಮೇಟೋ ಜ್ಯೂಸ್

ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿಗಳು ಮೂಳೆಗಳ ಬಲಹೀನತೆಗೆ (Weak Bones) ಒಳಗಾಗುತ್ತಾರೆ. ಈ ಸಮಸ್ಯೆಯನ್ನು ತಡೆಗಟ್ಟಲು ಟೊಮೇಟೋ ಜ್ಯೂಸ್ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿ ವಿಟಮಿನ್ ಕೆ (Vitamin K) ಮತ್ತು ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ, ಇದು ಮೂಳೆಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ (Heart Health) ಟೊಮೇಟೋ ಜ್ಯೂಸ್!

ಟೊಮೇಟೋ ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಲ್ಲಿ ಲೈಕೊಪೀನ್ (Lycopene) ಮತ್ತು ಪೋಟ್ಯಾಸಿಯಂ (Potassium) ಇದ್ದು, ಇದು ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ. ಹೃದಯದ ಆರೋಗ್ಯ ಸುಧಾರಿಸಲು, ಪ್ರತಿದಿನ ಟೊಮೇಟೋ ಜ್ಯೂಸ್ ಸೇವನೆ ಒಳ್ಳೆಯದು.

Tomato Juice Weight Loss

ಚರ್ಮ (Skin) ಹೊಳಪಿಗಾಗಿ ಟೊಮೇಟೋ ಜ್ಯೂಸ್!

ಟೊಮೇಟೋದಲ್ಲಿ ಬಾಳೆಹಣ್ಣು, ಮಾವಿನ ಹಣ್ಣುಗಳಿಗೆ ಹೋಲಿಸಿದರೆ ಹೆಚ್ಚು ವಿಟಮಿನ್ ಸಿ ಇರುತ್ತದೆ. ಇದು ಚರ್ಮದ ಹೊಳಪು ಹೆಚ್ಚಿಸುವ ಜೊತೆಗೆ, ಫ್ರೀ ರ್ಯಾಡಿಕಲ್‌ಗಳ (Free Radicals) ವಿರುದ್ಧ ಹೋರಾಡಿ ಚರ್ಮವನ್ನು ಉಜ್ವಲಗೊಳಿಸುತ್ತದೆ. ನಿಯಮಿತವಾಗಿ ಈ ಜ್ಯೂಸ್ ಕುಡಿಯುವುದರಿಂದ ಚರ್ಮ ಆರೋಗ್ಯವಾಗಿ ಕಾಣುತ್ತದೆ.

ಟೊಮೇಟೋ ಜ್ಯೂಸ್ ತಯಾರಿಸುವ ವಿಧಾನ:

1️⃣ ಮಾಗಿದ ಟೊಮೇಟೋಗಳನ್ನು ಚೆನ್ನಾಗಿ ತೊಳೆದು ತುಂಡು ಮಾಡಿ.
2️⃣ ಮಿಕ್ಸಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
3️⃣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ.
4️⃣ ಸ್ವಲ್ಪ ಉಪ್ಪು ಅಥವಾ ನಿಂಬೆಹಣ್ಣು ಸೇರಿಸಿ ರುಚಿ ಹೆಚ್ಚಿಸಿಕೊಳ್ಳಿ.
5️⃣ ತಾಜಾ ಹಾಗೂ ತಂಪಾದ ಜ್ಯೂಸ್‌ನನ್ನು ಕುಡಿಯಿರಿ!

ಮುಖ್ಯವಾಗಿ, ಖಾಲಿ ಹೊಟ್ಟೆಯಲ್ಲಿ ಕುಡಿದ ನಂತರ ಯಾವುದಾದರೂ ಅಸೌಕರ್ಯ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.. ಜೊತೆಗೆ ಯಾವುದೇ ಸಮಯದಲ್ಲಿ ತಜ್ಞ ವೈದ್ಯರ ಸಲಹೆ ಪಡೆಯಿರಿ

Tomato Juice for Health

English Summary

Related Stories