ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನೊಮ್ಮೆ ಪ್ರಯತ್ನಿಸಿ

Try it out if you want to lose weight

ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನೊಮ್ಮೆ ಪ್ರಯತ್ನಿಸಿ..

ಅಲೋವೆರಾದ ಬಗ್ಗೆ ನಿಮಗೆ ಈಗಾಗಲೇ ತಿಳಿದಿರುವ ಹಾಗೆ ಇದು ಒಂದು ಉತ್ತಮ ಸೌಂದರ್ಯ ವರ್ಧಕ. ಇದು ಕೇವಲ ನಮ್ಮ ಸೌಂದರ್ಯವನ್ನ ವೃದ್ಧಿಸುವುದು ಮಾತ್ರವಲ್ಲದೆ ನಮ್ಮ ದೇಹದ ಆರೋಗ್ಯಕ್ಕೂ ಉತ್ತಮ. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ತೂಕ ಕಡಿಮೆ ಮಾಡುವುದಕ್ಕೆ ಅಲೋವೆರಾ ರಾಮಬಾಣ.

ಅಲೋವೆರಾ ಸಿಪ್ಪೆ ತೆಗೆದು ಜೆಲ್ ಅನ್ನು ನೀರಿನಲ್ಲಿ ಬೆರೆಸಿ ಅಥವಾ ಹಾಗೆಯೇ ಕುಡಿಯಬಹುದು. ಇದರಲ್ಲಿ ಜೀವಸತ್ವ, ಖನಿಜ, ಕಿಣ್ವ, ಕಾರ್ಬೋ ಹೈಡ್ರೇಟ್, ಅಮೈನೋ ಆಮ್ಲ ಇರುತ್ತವೆ. ಸ್ಯಾಲಿಸಿಲಿಕ್ ಆಮ್ಲ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಇದ್ದು, ಅವು ತೂಕ ಕಳೆದುಕೊಳ್ಳಲು ಸಹಾಯಕವಾಗಿವೆ.

ಅಲೋವೆರಾವನ್ನು ಪ್ರತಿದಿನ ಸೇವಿಸುವುದರಿಂದ ತೂಕವೊಂದೇ ಅಲ್ಲ, ನಮ್ಮ ದೇಹದಲ್ಲಿರುವ ಅನೇಕ ರೋಗಗಳು ವಾಸಿಯಾಗುತ್ತವೆ. ಆದರೆ ಅಲೋವೆರಾವನ್ನು ಯಾವುದರ ಜೊತೆ ಸೇವಿಸುವುದು ಉತ್ತಮ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಜೊತೆಗೆ ಯಾವುದೇ ಪ್ರಯೋಗ ಮಾಡುವ ಮೊದಲು ಡಾಕ್ಟರ್ ಸಲಹೆ ಪಡೆದುಕೊಳ್ಳುವುದು ಅತೀ ಮುಖ್ಯ.

ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನೊಮ್ಮೆ ಪ್ರಯತ್ನಿಸಿ - Kannada News

* ಅಲೋವೆರಾ ಜೆಲ್ ಅನ್ನು ಯಾವುದೇ ಹಣ್ಣಿನ ಜ್ಯೂಸ್ ಜೊತೆ ಸೇರಿಸಿ ಕುಡಿಯಬಹುದು.

* ಅಲೋವೆರಾ ಜೆಲ್ ಅನ್ನು ಹಾಗೇ ಸಿಪ್ಪೆ ತೆಗೆದು ಅಥವಾ ನೀರಿನ ಸಹಾಯದಿಂದ ಕುಡಿಯಬಹುದು.

* ನಿಂಬೆ ರಸದ ಜೊತೆ ಇದನ್ನು ಸೇರಿಸಿ, ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಬಹುದು.

* ತರಕಾರಿ, ಪಾನೀಯದ ಜೊತೆಯಲ್ಲಿಯೂ ಅಲೋವೆರಾವನ್ನು ಸೇವಿಸಬಹುದು.////

Web Title : Try it out if you want to lose weight
(Kannada News Live @ kannadanews.today)

Follow us On

FaceBook Google News

Read More News Today