ರೈತರಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸಲು ಶೇ.80ರಷ್ಟು ನೆರವು! ಅರ್ಜಿ ಆಹ್ವಾನ
ಪ್ರಧಾನ ಮಂತ್ರಿ ಕುಸುಮ್ ಯೋಜನೆಯಡಿ ರೈತರು ಶೇ.80ರಷ್ಟು ಸಬ್ಸಿಡಿ ಸಹಾಯಧನದೊಂದಿಗೆ ಸೌರ ಪಂಪ್ ಅಳವಡಿಸಬಹುದು. ಇದರಿಂದ ಕೃಷಿ ಸುಧಾರಣೆಗೂ, ಆದಾಯ ಹೆಚ್ಚಳಕ್ಕೂ ಮಾರ್ಗ ಸಿದ್ಧವಾಗಲಿದೆ.

- ರೈತರಿಗೆ ಶೇ.80ರಷ್ಟು ಪಂಪ್ ಅಳವಡಿಕೆ ಸಬ್ಸಿಡಿ
- ಡೀಸೆಲ್ ಪಂಪ್‌ಗೆ ಬದಲಾಗಿ ಸೋಲಾರ್ ಪಂಪ್ ಉಪಯೋಗ
- ಅಧಿಕ ವಿದ್ಯುತ್ ಉತ್ಪಾದನೆ ಮಾಡಿ ಸರ್ಕಾರಕ್ಕೆ ಮಾರಾಟ ಅವಕಾಶ
solar pump set : ಕೃಷಿಯಲ್ಲಿ ನವೀನ ತಂತ್ರಜ್ಞಾನ ಉಪಯೋಗಿಸುವ ಮೂಲಕ ರೈತರು ಹೆಚ್ಚು ಲಾಭ ಪಡೆಯುವ ಕಾಲದಲ್ಲಿದ್ದೇವೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು (solar pump set subsidy) ಪ್ರಧಾನ ಮಂತ್ರಿ ಕುಸುಮ್ ಯೋಜನೆ ಮೂಲಕ ರೈತರಿಗೆ ಶೇ.80ರಷ್ಟು ಸಹಾಯಧನದೊಂದಿಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಲು ಅವಕಾಶ ನೀಡುತ್ತಿದೆ.
ಈ ಯೋಜನೆಯು ರೈತರಿಗೆ ನೀರಾವರಿ ಪಂಪ್‌ಗಳನ್ನು ಡೀಸೆಲ್ (Diesel) ಅಥವಾ ಪೆಟ್ರೋಲ್‌ನಲ್ಲಿ (Petrol) ಆಧಾರಿತವಾಗಿರುವ ಬದಲು, ಸೌರ ಶಕ್ತಿಯಿಂದ ಚಾಲಿತವಾಗುವಂತೆ ರೂಪಾಂತರ ಮಾಡುವುದೇ ಮುಖ್ಯ ಉದ್ದೇಶ. ಇದರಿಂದ ಇಂಧನ ವೆಚ್ಚ ಕಡಿಮೆಯಾಗುತ್ತದೆ ಮತ್ತು ಪರಿಸರಕ್ಕೆ ಸಹ ಹಾನಿಕಾರಿಯಾಗುವುದಿಲ್ಲ.
ಇದನ್ನೂ ಓದಿ: 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 20 ಸಾವಿರ ಸಿಗುವ ಬಂಪರ್ ಯೋಜನೆ
ಈ ಯೋಜನೆಯ ಅಡಿಯಲ್ಲಿ ರೈತರು ಪಂಪ್ ಅಳವಡಿಕೆಗೆ ಕೇವಲ ಶೇ.10ರಷ್ಟು ಮೊತ್ತ ಮಾತ್ರವೇ ಖರ್ಚು ಮಾಡಬೇಕಾಗುತ್ತದೆ. ಉಳಿದ ಶೇ.30ರಷ್ಟು ಬ್ಯಾಂಕ್ ಸಾಲ (Bank Loan) ರೂಪದಲ್ಲಿ, ಮತ್ತು ಶೇ.60ರಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯಧನವಾಗಿ ಒದಗಿಸಲಾಗುತ್ತದೆ. ಒಟ್ಟಿನಲ್ಲಿ ಶೇ.80ರಷ್ಟು ರೈತರಿಗೆ ನರವು ಸಿಗಲಿದೆ.
ರಾಜ್ಯಗಳಲ್ಲಿ ಬರಗಾಲದ ಸಮಸ್ಯೆ ಎದುರಿಸುತ್ತಿರುವ ರೈತರು ಈ ಯೋಜನೆಯಿಂದ (government scheme for farmers) ಬಹುಪಾಲು ಪ್ರಯೋಜನ ಪಡೆಯಬಹುದು. ನಿರ್ದಿಷ್ಟ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡುವ ಕೊಳವೆಬಾವಿಗಳನ್ನು ಕೂಡಾ ಈ ಯೋಜನೆಯ ಭಾಗವಾಗಿ ಅಳವಡಿಸಲಾಗುತ್ತದೆ.
ಈ ಯೋಜನೆಯಡಿಯಲ್ಲಿ 3 ಕೋಟಿ ಸೌರ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಗುರಿಯಿದೆ. ಇದರಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾದರೆ, ರೈತರು ಅದನ್ನು ಪವರ್ ಗ್ರಿಡ್‌ಗೆ ಸರಬರಾಜು ಮಾಡುವ ಮೂಲಕ ಹೆಚ್ಚುವರಿ ಆದಾಯವೂ ಗಳಿಸಬಹುದು. ಇದು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರಿಯಾಗುತ್ತದೆ.
ಯೋಜನೆಯು ವಿಶೇಷವಾಗಿ ರೈತರ ಉತ್ಪಾದನಾ ಕಂಪನಿಗಳು, ಸಹಕಾರ ಸಂಘಗಳು, ಪಂಚಾಯತ್ ಸಂಸ್ಥೆಗಳು ಮತ್ತು ನೀರಿನ ಗ್ರಾಹಕರ ಸಂಘಗಳಿಗೂ ಲಭ್ಯವಿದೆ. ಅರ್ಜಿ ಸಲ್ಲಿಸಲು ರೈತರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು, ಆದಾಯ ಪ್ರಮಾಣ ಪತ್ರ, ಫೋಟೋ ಮತ್ತು ವಿಳಾಸ ಪುರಾವೆಗಳನ್ನು ಹೊಂದಿರಬೇಕು.
ಸೌಲಭ್ಯ ಪಡೆಯಲು ಅರ್ಜಿದಾರರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಿದ ನಂತರ ರೈತರಿಗೆ ಯೋಜನೆ ಅಡಿಯಲ್ಲಿ ನೋಂದಣಿ ಮಾಡಲಾಗುತ್ತದೆ.
ಇದನ್ನೂ ಓದಿ: ಮನೆ ಭಾಗ್ಯ ಯೋಜನೆ, ಮನೆ ಕಟ್ಟಲು ಬಡವರಿಗೆ ₹2.67 ಲಕ್ಷ ಸಬ್ಸಿಡಿ ಸಾಲ
ಅರ್ಜಿಗೆ ನೋಂದಣಿ ಶುಲ್ಕ ಪ್ರತಿ ಮೆಗಾವ್ಯಾಟ್‌ಗೆ ₹5,000 ಮತ್ತು ಜಿಎಸ್‌ಟಿ ಇರುತ್ತದೆ. 0.5MW, 1MW, 1.5MW, 2MW ತನಕ ಬೇರೆ ಬೇರೆ ಶುಲ್ಕಗಳಿದ್ದು, ಅರ್ಜಿದಾರರು ಅವುಗಳನ್ನು ಪಾವತಿಸಬೇಕು.
ಈ ಯೋಜನೆಯ ಯಶಸ್ಸು ನವೀಕರಿಸಬಹುದಾದ ಶಕ್ತಿಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಹಳೆಯ ಪಂಪ್‌ಗಳನ್ನು ಸೌರ ಪಂಪ್‌ಗಳೊಂದಿಗೆ ಬದಲಾಯಿಸುವ ಮೂಲಕ ಕೃಷಿಯಲ್ಲಿ ಶಾಶ್ವತ ಬದಲಾವಣೆ ತರಲು ಇದು ಸಹಾಯಕವಾಗಲಿದೆ.
80 Percent Subsidy on Solar Pumps for Farmers under PM Kusum Scheme




