8ನೇ ತರಗತಿ ಪಾಸ್ ಆದವರಿಗೂ ಸಿಗಲಿದೆ ಸರ್ಕಾರಿ ಉದ್ಯೋಗ; 63,000 ಸಂಬಳ

ಭಾರತೀಯ ಅಂಚೆ ಇಲಾಖೆ (India post office recruitment) ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

Bengaluru, Karnataka, India
Edited By: Satish Raj Goravigere

ಕೇಂದ್ರ ಸರ್ಕಾರದ ಉದ್ಯೋಗ (government job) ಹುಡುಕುತ್ತಿರುವವರಿಗೆ ಸದಾ ಅವಕಾಶ, ನೀವು ಕಡಿಮೆ ಕಲಿತಿದ್ರು ಸರಿ ನಿಮಗೆ ಸಿಗುತ್ತೆ ಆಕರ್ಷಕ ಸಂಬಳವನ್ನು ಹೊಂದಿರುವ ಸರ್ಕಾರದ ಕೆಲಸ.

ಈ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ತಕ್ಷಣ ಅರ್ಜಿ ಸಲ್ಲಿಸಿ, ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಿ.

Government Job

ಭಾರತೀಯ ಅಂಚೆ ಇಲಾಖೆ (India post office recruitment) ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಸದ್ಯ ಮೋಟಾರ್ ವೆಹಿಕಲ್ ಮೆಕಾನಿಕ್ (Motor vehicle mechanic) ಹುದ್ದೆ ಖಾಲಿ ಇದ್ದು 8ನೇ ತರಗತಿ ಪಾಸ್ ಆಗಿರುವವರು ಕೂಡ ಅರ್ಜಿ ಸಲ್ಲಿಸಬಹುದು

ಇದಕ್ಕೆ ಆಯ್ಕೆಯಾದರೆ ಅತ್ಯುತ್ತಮ ಸಂಬಳವನ್ನು ಕೂಡ ಪಡೆಯುತ್ತೀರಿ. ಈ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು ? ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ? ಮೊದಲಾದವುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ರದ್ದಾಗುತ್ತ 10 ವರ್ಷದ ಹಳೆಯ ಆಧಾರ್ ಕಾರ್ಡ್! ರಾತ್ರೋ-ರಾತ್ರಿ ಏನಿದು ಹೊಸ ಆದೇಶ

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ!

ಮೋಟಾರ್ ವೆಹಿಕಲ್ ಮೆಕ್ಯಾನಿಕ್ (ಸ್ಕಿಲ್ಡ್ ಆರ್ಟಿಸನ್ ಗ್ರೇಡ್-3) 1 ಹುದ್ದೆ.

ಅರ್ಜಿದಾರರ ಶಿಕ್ಷಣ ಮತ್ತು ವಯೋಮಿತಿ! (Qualification and age limit)

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಜನವರಿ 1 2023ಕ್ಕೆ ಕನಿಷ್ಠ 18 ಹಾಗೂ ಗರಿಷ್ಠ 30 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆದರೆ ಓ ಬಿ ಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುವುದು.

Govt job opportunities in postal departmentಅರ್ಜಿ ಶುಲ್ಕ; (application fees)

SC ST/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವ ಅಗತ್ಯವಲ್ಲ ಇತರ ಅಭ್ಯರ್ಥಿಗಳು 400 ರೂಪಾಯಿ ಅರ್ಜಿ ಶುಲ್ಕ ಹಾಗೂ 100 ರೂಪಾಯಿ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು.

ತಿಂಗಳ ವೇತನ! (Salary)

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗೆ ₹19,900-63,200 ತಿಂಗಳು ಸಂಬಳ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿ ಛತ್ತೀಸ್ಗಡದ ದುರ್ಗ ಪ್ರದೇಶದ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 10 2023

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಪೋಸ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು ಅರ್ಜಿಯ ಜೊತೆಗೆ ನಿಮ್ಮ ಎಲ್ಲಾ ದಾಖಲೆಗಳನ್ನು ಕೂಡ ನೀಡಬೇಕು ಆಧಾರ್ ಕಾರ್ಡ್ ಮಾರ್ಕ್ಸ್ ಕಾರ್ಡ್ ಒದಗಿಸುವುದನ್ನು ಮರೆಯಬೇಡಿ.

ಪೋಸ್ಟಲ್ ಮೂಲಕ ಅರ್ಜಿ ಕಳುಹಿಸಬೇಕಾದ ವಿಳಾಸ
ಮ್ಯಾನೇಜರ್ (ಗ್ರೂಪ್-A),
ಮೇಲ್ ಮೋಟಾರ್ ಸೇವೆಗಳು
GPO ಕಾಂಪೌಂಡ್, ಸುಲ್ತಾನಿಯಾ ರಸ್ತೆ, ಭೋಪಾಲ್-462001

8th class passers will also get government job, 63,000 salary