ಪುಣೆಗೆ ತೆರಳುತ್ತಿದ್ದ ಏರ್ ಏಷ್ಯಾ ವಿಮಾನ ಹಕ್ಕಿಗೆ ಡಿಕ್ಕಿ ಹೊಡೆದು ಭುವನೇಶ್ವರದಲ್ಲಿ ತುರ್ತು ಭೂಸ್ಪರ್ಶ
Air Asia Emergency Landing: ಒಡಿಶಾದಲ್ಲಿ ಭಾರೀ ಅವಘಡವೊಂದು ತಪ್ಪಿದೆ. ಗುರುವಾರ ಭುವನೇಶ್ವರದಿಂದ ಪುಣೆಗೆ ತೆರಳುತ್ತಿದ್ದ ಏರ್ ಏಷ್ಯಾ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದ್ದು ನಂತರ ವಿಮಾನವನ್ನು ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
Air Asia Emergency Landing: ಭುವನೇಶ್ವರ – ಒಡಿಶಾದಲ್ಲಿ ಭಾರೀ ಅವಘಡವೊಂದು ತಪ್ಪಿದೆ. ಗುರುವಾರ ಭುವನೇಶ್ವರದಿಂದ ಪುಣೆಗೆ ತೆರಳುತ್ತಿದ್ದ ಏರ್ ಏಷ್ಯಾ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದ್ದು ನಂತರ ವಿಮಾನವನ್ನು ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಾರ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪ್ರಸ್ತುತ, ವಿಮಾನವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ.
ಇಡೀ ಘಟನೆಯ ಬಗ್ಗೆ ಏರ್ ಏಷ್ಯಾ ಹೇಳಿಕೆ ನೀಡಿದ್ದು, “ಭುವನೇಶ್ವರದಿಂದ ಪುಣೆಗೆ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ನಂತರ ಹಕ್ಕಿಗೆ ಡಿಕ್ಕಿ ಹೊಡೆದಿದೆ ಮತ್ತು ವಿವರವಾದ ತಪಾಸಣೆಗಾಗಿ ಭುವನೇಶ್ವರಕ್ಕೆ ಮರಳಿದೆ. ನಾವು ಇತರ ನಿಗದಿತ ಕಾರ್ಯಾಚರಣೆಗಳ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.” ಎಂದು ತಿಳಿಸಿದ್ದಾರೆ.
ಫೆಬ್ರವರಿ 26 ರಂದು ಸೂರತ್‌ನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನವು ಟೇಕ್ ಆಫ್ ಆಗುವಾಗ ಹಕ್ಕಿಯೊಂದು ಡಿಕ್ಕಿ ಹೊಡೆದಿತ್ತು. ನಂತರ ವಿಮಾನವನ್ನು ಅಹಮದಾಬಾದ್‌ಗೆ ತಿರುಗಿಸಲಾಯಿತು ಮತ್ತು ಸುರಕ್ಷಿತವಾಗಿ ಇಳಿಸಲಾಯಿತು. ತಪಾಸಣೆ ವೇಳೆ ಇಂಜಿನ್‌ನ ಫ್ಯಾನ್ ಬ್ಲೇಡ್‌ಗಳು ಮುರಿದಿರುವುದು ಕಂಡುಬಂದಿತ್ತು.
Air Asia flight going to Pune collided with bird, emergency landing in Bhubaneswar
Odisha | Pune bound Air Asia flight made an emergency landing at Biju Patnaik International Airport in Bhubaneswar after a bird-hit incident, soon after the take off. Aircraft being assessed, all passengers safe: Airport Authority pic.twitter.com/4PyNPHsYx7
— ANI (@ANI) March 2, 2023
Follow us On
Google News |
Advertisement