Army Dog Zoom Dies: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಸೇನಾ ಶ್ವಾನ ‘ಜೂಮ್’ ಇನ್ನಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಮೃತಪಟ್ಟಿದ್ದಾಳೆ.
25 ತಿಂಗಳ ವಯಸ್ಸಿನ ‘ಜೂಮ್’ 8 ತಿಂಗಳಿನಿಂದ ಅತ್ಯಂತ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದೆ ಮತ್ತು ಈ ಬೆಲ್ಜಿಯನ್ ಶೆಫರ್ಡ್ ತಳಿಯು ಭಯೋತ್ಪಾದಕರನ್ನು ಗುರುತಿಸುವಲ್ಲಿ ಕಠಿಣ ತರಬೇತಿಯನ್ನು ಪಡೆದಿದೆ ಎಂದು ವಿವರಿಸಲಾಗಿದೆ. ಸೋಮವಾರ ಟ್ಯಾಂಗ್ಪೋವಾ ಪ್ರದೇಶದಲ್ಲಿ ಎರಡು ಗುಂಡುಗಳು ‘ಜೂಮ್’ ದೇಹ ಹೊಕ್ಕವು ಮತ್ತು ಅದು ಮನೆಯೊಂದರಲ್ಲಿ ಭಯೋತ್ಪಾದಕರನ್ನು ಗುರುತಿಸಿತ್ತು, ಸೇವೆಯಲ್ಲಿದ್ದ ಸೈನಿಕ ಶ್ವಾನ ವೀರ ಮರಣ ಹೊಂದಿದೆ..
Army Dog Zoom Dies After Getting Shot In Jammu And Kashmir Encounter
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019