ಭಿಕ್ಷುಕಿಯ ಮನೆ ಮೇಲೆ ಪೊಲೀಸರು ದಾಳಿ! ಚಿನ್ನ, ಬೆಳ್ಳಿ, ದುಬಾರಿ ಮೊಬೈಲ್‌ಗಳು ಪತ್ತೆ
ಭಿಕ್ಷುಕಿಯ ನಾಟಕ ಮಾಡುತ್ತಾ, ಮನೆಗಳ ಬೀಗಗಳನ್ನು ಗಮನಿಸುತ್ತಾ ಹೊಂಚು ಹಾಕುತ್ತಿದ್ದಳು. ಈ ಬಗ್ಗೆ ಆಕೆಯ ಅಳಿಯ ಚುತುಕ್ ಲಾಲ್ ಮಾಹಿತಿ ನೀಡಿದ ಬಳಿಕ ಆತ ತನ್ನ ಸಹಚರರೊಂದಿಗೆ ಆ ಮನೆಗಳಿಗೆ ನುಗ್ಗಿ ಚೋರಿ ಮಾಡುತ್ತಿದ್ದ.

- ಭಿಕ್ಷುಕಿಯ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ಮೊಬೈಲ್‌ಗಳು ಪತ್ತೆ
- ಬಿಗ ಹಾಕಿರುವ ಮನೆಗಳ ಬಗ್ಗೆ ಅಳಿಯನಿಗೆ ಮಾಹಿತಿ ನೀಡುತ್ತಿದ್ದ ಭಿಕ್ಷುಕಿ
- ಮಹಿಳೆ ಬಂಧನ, ಪರಾರಿಯಾದ ಅಳಿಯನಿಗಾಗಿ ಪೊಲೀಸರ ಶೋಧ
ಬಿಹಾರದ ಮುಜಫರ್‌ಪುರ ಜಿಲ್ಲೆಯಲ್ಲಿ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ದಿನನಿತ್ಯ ಮನೆಗೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿದ್ದ ನೀಲಂ ದೇವಿ ಎಂಬ ಮಹಿಳೆ ವಾಸ್ತವದಲ್ಲಿ ಕಳ್ಳರ ಸಹಾಯಕಳಾಗಿದ್ದಳು.
ತಾನು ಭಿಕ್ಷುಕಿಯ ನಾಟಕ ಮಾಡುತ್ತಾ, ಮನೆಗಳ ಬೀಗಗಳನ್ನು ಗಮನಿಸುತ್ತಾ ಹೊಂಚು ಹಾಕುತ್ತಿದ್ದಳು. ಈ ಬಗ್ಗೆ ಆಕೆಯ ಅಳಿಯ ಚುತುಕ್ ಲಾಲ್ ಮಾಹಿತಿ ನೀಡಿದ ಬಳಿಕ ಆತ ತನ್ನ ಸಹಚರರೊಂದಿಗೆ ಆ ಮನೆಗಳಿಗೆ ನುಗ್ಗಿ ಚೋರಿ ಮಾಡುತ್ತಿದ್ದ.
ಕುಡಿಯುವ ನೀರಿಗೆ ವಿಷ ಬೆರೆಸಿ 10 ವರ್ಷದ ಮಗನನ್ನು ಕೊಂದ ತಂದೆ
ಇತ್ತೀಚೆಗೆ ಈ ಪ್ರದೇಶದಲ್ಲಿ ನಿರಂತರ ಕಳ್ಳತನಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ನೀಲಂ ದೇವಿ ನಿರಂತರವಾಗಿ ಈ ಮನೆಗಳ ಬಳಿಯಲ್ಲಿ ಸುತ್ತಾಡುತ್ತಿದ್ದಾಳೆ ಎಂಬುದು ಗಮನಕ್ಕೆ ಬಂತು.
ಶಾಲೆಗೆ ಡುಮ್ಕಿ ಹೊಡೆದು ಟ್ರ್ಯಾಕ್ಟರ್ ಸವಾರಿಗೆ ಹೋದ ಮೂವರು ಬಾಲಕರು ಸಾವು
ಶಂಕೆಯಿಂದ ಪೊಲೀಸರು ಆಕೆಯ ಮನೆಯ ಮೇಲೆ ದಾಳಿ ನಡೆಸಿದಾಗ, ಬೆಳ್ಳಿ ಮತ್ತು ಚಿನ್ನಾಭರಣಗಳು, 12 ದುಬಾರಿ ಮೊಬೈಲ್‌ಗಳು, ನೇಪಾಳ, ಆಫ್ಘಾನಿಸ್ತಾನ, ಕುವೈತ್ ಮುಂತಾದ ದೇಶಗಳ ನಾಣ್ಯಗಳು ಹಾಗೂ ಬ್ರಿಟಿಷ್ ಕಾಲದ ನಾಣ್ಯಗಳು ಪತ್ತೆಯಾಗಿವೆ. ಇದನ್ನು ಕಂಡು ಪೊಲೀಸರು ಒಂದು ಕ್ಷಣ ಆಘಾತಗೊಂಡರು.
ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ನೀಲಂ ದೇವಿಯನ್ನು ಬಂಧಿಸಿದ್ದಾರೆ. ಆದರೆ ಆಕೆಯ ಅಳಿಯ ಚುತುಕ್ ಲಾಲ್ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಆತನ ಬಂಧನವಾದರೆ ಈ ಕಳ್ಳತನಗಳ ಹಿಂದೆ ಇರುವ ಇನ್ನಷ್ಟು ನಿಜಾಂಶ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
Beggar Woman House Raided, Police Find Gold, Silver and Expensive Phones



