ಶಾಲೆಗೆ ಡುಮ್ಕಿ ಹೊಡೆದು ಟ್ರ್ಯಾಕ್ಟರ್ ಸವಾರಿಗೆ ಹೋದ ಮೂವರು ಬಾಲಕರು ಸಾವು
ಚತ್ತೀಸ್ಗಢದಲ್ಲಿ ಶಾಲೆಗೆ ಹಾಜರಾಗದೇ ಟ್ರ್ಯಾಕ್ಟರ್ ಸವಾರಿಗೆ ಹೋದ ನಾಲ್ವರು ಬಾಲಕರ ಪೈಕಿ ಮೂವರು ಮೃತಪಟ್ಟು, ಒಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ
- ಶಾಲೆಗೆ ಡುಮ್ಮಿ ಹೊಡೆದು ಟ್ರ್ಯಾಕ್ಟರ್ ಸವಾರಿಗೆ ಹೋದ ಬಾಲಕರು
- ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಉರುಳಿಬಿದ್ದು ಮೂವರು ಸ್ಥಳದಲ್ಲೇ ಸಾವು
- ಗಾಯಗೊಂಡ ಇನ್ನೊಬ್ಬ ಬಾಲಕನನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಗ್ರಾಮಸ್ಥರು
ಚತ್ತೀಸ್ಗಢದ (Chhattisgarh) ಧಮ್ತಾರಿ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದೆ. ನಾಲ್ವರು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದೆ ಮನೆಯಿಂದ ಶಾಲೆಗೆ ಅಂತ ಹೋದವರು ಟ್ರ್ಯಾಕ್ಟರ್ ಸವಾರಿ ಮಾಡಲು ಹೋಗಿದ್ದರು. ಈ ವೇಳೆ ಅವರ ಪೈಕಿ ಒಬ್ಬನು ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ.
ಆದರೆ, ಮಧ್ಯದಲ್ಲಿಯೇ ರಸ್ತೆ ಪಕ್ಕದ ಗುಂಡಿ ಗಮನಿಸದೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ (tractor overturns) ತೀವ್ರ ವೇಗದಲ್ಲಿ ಉರುಳಿಬಿದ್ದು, ಮೂವರು ಬಾಲಕರು ಅದರ ಕೆಳಗೆ ಸಿಲುಕಿ ದುರ್ಮರಣಕ್ಕೀಡಾಗಿದ್ದಾರೆ. ಇನ್ನೊಬ್ಬ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕುಡಿಯುವ ನೀರಿಗೆ ವಿಷ ಬೆರೆಸಿ 10 ವರ್ಷದ ಮಗನನ್ನು ಕೊಂದ ತಂದೆ
ಸ್ಥಳೀಯ ಗ್ರಾಮಸ್ಥರು ಈ ದುರ್ಘಟನೆಯನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತರನ್ನು ಗುರುತಿಸಿದ್ದಾರೆ. ಮೃತ ಬಾಲಕರನ್ನು 16 ವರ್ಷದ ಪ್ರೀತಮ್ ಚಂದ್ರಕರ್, 16 ವರ್ಷದ ಮಯಾಂಕ್ ಮತ್ತು 14 ವರ್ಷದ ಹೋನೇಂದ್ರ ಎಂದು ಗುರುತಿಸಲಾಗಿದೆ. ಗಾಯಗೊಂಡ ಬಾಲಕನನ್ನ 14 ವರ್ಷದ ಅರ್ಜುನ್ ಯಾದವ್ ಗುರುತಿಸಲಾಗಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮೃತ ಬಾಲಕನಾದ ಚಂದ್ರಕರ್ ಅವರ ಕುಟುಂಬದ ಟ್ರ್ಯಾಕ್ಟರ್ ಅನ್ನು ಚಾಲನೆ ಮಾಡುತ್ತಿದ್ದನು. ಈ ಬಾಲಕರು ಶಾಲೆ ಬಿಟ್ಟು ಟ್ರ್ಯಾಕ್ಟರ್‌ನಲ್ಲಿ ಕುರೂದ್‌ಗೆ ತೆರಳಿದ್ದರು. ಹಿಂತಿರುಗುವ ವೇಳೆ ಚರ್ರಾ ಪ್ರದೇಶದ ಕೃಷಿ ಕಾಲೇಜಿನ ಸಮೀಪ ಈ ಅಪಘಾತ ಸಂಭವಿಸಿದೆ.
ಮದುವೆಯಾದ ಕೆಲವೇ ಗಂಟೆಗಳಲ್ಲಿ ಹಣ, ಆಭರಣದೊಂದಿಗೆ ಹುಡುಗಿ ಎಸ್ಕೇಪ್
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.
Three School Boys Die as Tractor Ride Turns Tragic
Our Whatsapp Channel is Live Now 👇