ರೇಷನ್ ಕಾರ್ಡ್ ಹೊಂದಿರುವವರಿಗೆ ರಾತ್ರೋ ರಾತ್ರಿ ಹೊಸ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ
ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಪ್ಯಾನ್ ಕಾರ್ಡ್ ಇಂತಹ ಎಲ್ಲ ಗುರುತಿನ ಚೀಟಿ ಹೊಂದಿರುವುದು ಎಷ್ಟು ಮುಖ್ಯವೋ ಹಾಗೆ ಸರ್ಕಾರದಿಂದ ಸಿಗುವ ಪ್ರತಿಯೊಂದು ಯೋಜನೆಯ ಪ್ರಯೋಜನ (Government scheme benefits) ಪಡೆದುಕೊಳ್ಳಲು ಪಡಿತರ ಚೀಟಿ ಹೊಂದಿರುವುದು ಕೂಡ ಅಷ್ಟೇ ಮುಖ್ಯ.
ಅದರಲ್ಲೂ ನೀವು ಬಿಪಿಎಲ್ ಕಾರ್ಡ್ ಹೋಲ್ಡರ್ (BPL ration Card holders) ಆಗಿದ್ದರೆ ನಿಮಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ ಕೇಂದ್ರ ಸರ್ಕಾರ.
ಈಗಾಗಲೇ ರಾಜ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಯೋಜನೆಯ (Annabhagya Scheme) ಹಣ ಅಥವಾ ಗೃಹಲಕ್ಷ್ಮಿ ಯೋಜನೆಯ (Gruha lakshmi Scheme) ಹಣ ನಿಮಗೆ ಸಿಗಬೇಕು ಅಂದ್ರೆ ನಿಮ್ಮ ಬಳಿ ರೇಷನ್ ಕಾರ್ಡ್, ಅದರಲ್ಲೂ ಬಿಪಿಎಲ್ ಕಾರ್ಡ್ ಇರುವುದು ಕಡ್ಡಾಯವಾಗಿದೆ.
ಬಡತನ ರೇಖೆಗಿಂತ ಕೆಳಗಿನವರಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗುತ್ತದೆ, ದೇಶದಲ್ಲಿ ಕೋಟ್ಯಾಂತರ ಜನ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ದೇಶದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಗಿಫ್ಟ್! ಅನ್ನದಾತರಿಗಾಗಿ ಹೊಸ ಸೇವೆ ಶುರು
ಬಿಪಿಎಲ್ ಕಾರ್ಡ್ ಇದ್ರೆ ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್!
ಕೇಂದ್ರ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಹೊಸ ಯೋಜನೆಯನ್ನು ಘೋಷಿಸಿದೆ. ಅದುವೇ ಆರೋಗ್ಯ ಯೋಜನೆ (Health Scheme). ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಆಯುಷ್ಮಾನ್ ಭವ ಯೋಜನೆ (Ayushman Bhava Scheme)
ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗಾಗಿ ಸಪ್ಟೆಂಬರ್ 17ರಿಂದ ಆಯುಷ್ಮಾನ್ ಭವ ಎನ್ನುವ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಹೊಂದಿರುವ ಯೋಜನೆಯನ್ನು ಸರ್ಕಾರ ಆರಂಭಿಸಿದೆ. ಸದ್ಯ ಆರೋಗ್ಯ ಕಾರ್ಯಕ್ರಮಗಳನ್ನು ಹೊಂದಿರುವ ಅಭಿಯಾನ ದೇಶದಾದ್ಯಂತ ಆರಂಭವಾಗಿದೆ. ಇದರ ಅಡಿಯಲ್ಲಿ ಪ್ರತಿಯೊಬ್ಬರಿಗೂ ಉತ್ತಮವಾದ ಆರೋಗ್ಯ ರಕ್ಷಣೆ ಸಿಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ.
2019ಕ್ಕೂ ಮೊದಲ ಹಳೆಯ ವಾಹನಗಳಿಗೆ ಹೊಸ ರೂಲ್ಸ್! ನಂಬರ್ ಪ್ಲೇಟ್ ಬದಲಾಯಿಸಲು ಆದೇಶ
ಅಕ್ಟೋಬರ್ 2 ಕೊನೆಯ ದಿನಾಂಕ
ಆರೋಗ್ಯ ರಕ್ಷಣೆ ನೀಡುವ ಅಭಿಯಾನ, ಆಯುಷ್ಮಾನ್ ಭವ ಯೋಜನೆ ಆರಂಭವಾಗಿದ್ದು ಸಪ್ಟೆಂಬರ್ 17ರಂದು. ಆಯುಷ್ಮಾನ್ ಭವ (aayushman bhava) ಎನ್ನುವುದು ಆಯುಷ್ಮಾನ್ ಅಪ್ಕೆ ದ್ವಾರ (aayushman aapke dwara) ಟ್ಯಾಗ್ಲೈನ್ ಅಡಿಯಲ್ಲಿ ಆರಂಭವಾಗಿರುವ ಅಭಿಯಾನವಾಗಿದೆ.
ಇದರ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು. ಅಕ್ಟೋಬರ್ 2ರ ವರೆಗೆ ಮಾತ್ರ ಈ ಯೋಜನೆ ಚಾಲ್ತಿಯಲ್ಲಿ ಇರುತ್ತದೆ. ಅದರ ಒಳಗೆ ಅರ್ಹ ಜನರು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಬಹುದು.
5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ – Health Insurance
ನೀವು ಬಿಪಿಎಲ್ ಕಾರ್ಡ್ ಹೊಂದಿದ್ದು ಆಯುಷ್ಮಾನ್ ಕಾರ್ಡ್ ನಿಮ್ಮ ಬಳಿ ಇದ್ದರೆ, ವಾರ್ಷಿಕವಾಗಿ ಒಂದು ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ಗಳ ವರೆಗೆ, ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ವಾರ್ಷಿಕವಾಗಿ 1.5 ಲಕ್ಷಗಳ ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.
ಯಾವುದೇ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕಾರ್ಡ್ ಅನ್ನು ಕೊಟ್ಟು ಉಚಿತ ಚಿಕಿತ್ಸೆ (Health Insurance) ಪಡೆಯಬಹುದು. ಹಾಗಾಗಿ ಯಾರಿಲ್ಲ ಈ ಯೋಜನೆ ಪ್ರಯೋಜನವನ್ನು ಇನ್ನೂ ಪಡೆದುಕೊಂಡಿಲ್ಲವೋ ಅಂತವರು ತಕ್ಷಣವೇ ಅರ್ಜಿ ಸಲ್ಲಿಸಿ. ಅಕ್ಟೋಬರ್ 2 ಅಂದರೆ ಇನ್ನೂ 10 ದಿನಗಳ ವರೆಗೆ ಈ ಅಭಿಯಾನ ನಡೆಯಲಿದ್ದು, ಸುಲಭವಾಗಿ ಆಯುಷ್ಮಾನ್ ಕಾರ್ಡ್ ಮಾಡಿಕೊಳ್ಳಬಹುದಾಗಿದೆ.
Central government has announced a new scheme for ration card holders