ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವ ಎಲ್ಲರಿಗೂ ಕೇಂದ್ರ ಸರ್ಕಾರದ ಹೊಸ ನಿಯಮ
ಸರ್ಕಾರ ಹೊರಡಿಸಿರುವ ಈ ನಿಯಮದ ಅನುಸಾರ ಇದೊಂದು ಕೆಲಸ ಮಾಡದೆ ಇದ್ದಲ್ಲಿ ನಿಮ್ಮ ಗ್ಯಾಸ್ ಕನೆಕ್ಷನ್ (Gas Connection) ನಕಲಿ ಎಂದು ಘೋಷಿಸಿ ರದ್ದುಪಡಿಸುವ ಸಾಧ್ಯತೆ ಇದೆ.
ನೀವು ಕೂಡ ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದರೆ, ಕೇಂದ್ರ ಸರ್ಕಾರದ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಲೇಬೇಕು. ಸರ್ಕಾರ ಹೊರಡಿಸಿರುವ ಈ ನಿಯಮದ ಅನುಸಾರ ಇದೊಂದು ಕೆಲಸ ಮಾಡದೆ ಇದ್ದಲ್ಲಿ ನಿಮ್ಮ ಗ್ಯಾಸ್ ಕನೆಕ್ಷನ್ (Gas Connection) ನಕಲಿ ಎಂದು ಘೋಷಿಸಿ ರದ್ದುಪಡಿಸುವ ಸಾಧ್ಯತೆ ಇದೆ.
ಮೋದಿ ಸರ್ಕಾರ ಉಚಿತ ಎಲ್ಪಿಜಿ ಗ್ಯಾಸ್ (LPG gas) ಅನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಆರಂಭಿಸಿದಾಗ ಭಾರತದಲ್ಲಿ ಬಳಸುವವರ ಸಂಖ್ಯೆಯು ಜಾಸ್ತಿಯಾಗಿದೆ. ಆದರೆ ಗ್ಯಾಸ್ ಸಿಲಿಂಡರ್ ಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳು ಕೂಡ ಇರುತ್ತವೆ
ಆದರೆ ಅದರ ಬಗ್ಗೆ ಯಾರಿಗೂ ಗಮನ ಇರುವುದಿಲ್ಲ, ಗ್ಯಾಸ್ ಸಿಲಿಂಡರ್ ಎಷ್ಟು ಸುರಕ್ಷಿತವಾಗಿರುತ್ತದೆಯೋ ಅಷ್ಟು ಒಳ್ಳೆಯದು, ಒಂದು ವೇಳೆ ನಿಮ್ಮ ಗ್ಯಾಸ್ ಕನೆಕ್ಷನ್ ಅಥವಾ ಗ್ಯಾಸ್ ಸಿಲಿಂಡರ್ (Gas Cylinder) ಫೇಕ್ ಆಗಿದ್ದರೆ ಅದರಿಂದ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಈ ಹೊಸ ನಿಯಮವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು.
ಸರ್ಕಾರದಿಂದ ಪ್ರತಿ ಬಿಪಿಎಲ್ ಕುಟುಂಬದ ಹೆಣ್ಣು ಮಕ್ಕಳಿಗೆ ಸಿಗುತ್ತೆ ₹1,50,000 ರೂಪಾಯಿ
ಎರಡು ವರ್ಷಕ್ಕೊಮ್ಮೆ ತಪಾಸಣೆ!
ಗ್ಯಾಸ್ ಸಿಲೆಂಡರ್ ಮೂಲಕ ಗ್ಯಾಸ್ ಸ್ಟವ್ ಗೆ ಸಂಪರ್ಕ ಪಡೆದು ಪ್ರತಿನಿತ್ಯ ಅದರಲ್ಲೇ ಅಡುಗೆ ಮಾಡಲಾಗುತ್ತದೆ, ಆದರೆ ನೀವು ಮನೆಯಲ್ಲಿ ಸಿಲಿಂಡರ್ ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಈಗಾಗಲೇ ದೇಶದಲ್ಲಿ ಸಿಲಿಂಡರ್ ಸ್ಫೋಟದ ಹಲವು ಕೇಸ್ ಗಳನ್ನು ನೀವು ನೋಡಿರಬಹುದು.
ಆದ್ದರಿಂದ ಕೇಂದ್ರ ಸರ್ಕಾರ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮ ಜಾರಿಗೆ ತಂದಿದೆ. ಪ್ರತಿ ಸಿಲೆಂಡರ್ ಗು ಪಂಚವಾರ್ಷಿಕ ಅನಿಲ ತಪಾಸಣಾ ಪತ್ರ ಹೊಂದಿರುವುದು ಕಡ್ಡಾಯ. ಗ್ರಾಹಕರ ಅನಿಲ ಸಿಲಿಂಡರ್ ಸುರಕ್ಷತೆಯ ದೃಷ್ಟಿಯಿಂದ ಪಂಚವಾರ್ಷಿಕ ಅನಿಲ ತಪಾಸಣೆ ಮಾಡಿಕೊಳ್ಳುವುದು ಬಹಳ ಮುಖ್ಯ.
ಕೇಂದ್ರ ಸರ್ಕಾರ ಸುರಕ್ಷಿತ ಅನಿಲ ಸಿಲಿಂಡರ್ ಗೆ ಮಾತ್ರ ಅನುಮತಿ ನೀಡಿದೆ. ಒಂದು ವೇಳೆ ನೀವು ಬಳಸುವ ಅನಿಲ ಸಿಲಿಂಡರ್ ಸುರಕ್ಷಿತವಾಗಿ ಇಲ್ಲದಿದ್ದರೆ ಭಾರತ್ ಗ್ಯಾಸ್ ಕಂಪನಿಯ ಗ್ಯಾಸ್ ಸಿಲಿಂಡರ್ ನಿಯಮದ ಪ್ರಕಾರ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ರದ್ದುಪಡಿಸಲಾಗುತ್ತದೆ.
ಕೇಂದ್ರ ಸರ್ಕಾರದ ಮಹತ್ತರ ಯೋಜನೆ, ಪ್ರತಿ ತಿಂಗಳು ಪಡೆದುಕೊಳ್ಳಿ 36,000 ಪಿಂಚಣಿ
ಪಂಚವಾರ್ಷಿಕ ತಪಾಸಣೆ ಕಡ್ಡಾಯ!
ಗ್ಯಾಸ್ ಸಿಲೆಂಡರ್ ನ ಪಂಚವಾರ್ಷಿಕ ತಪಾಸಣೆಗಾಗಿ ಭಾರತ್ ಗ್ಯಾಸ್ (Bharat Gas) ಸಿಬ್ಬಂದಿಗಳನ್ನು ನೇಮಿಸುತ್ತದೆ. ಈ ಸಿಬ್ಬಂದಿಗಳು ನಿಮ್ಮ ಮನೆಗೆ ಬಂದು ನಿಮ್ಮ ಕೆಲಸ ಸಿಲೆಂಡರ್ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಪರಿಶೀಲಿಸುತ್ತಾರೆ.
ಹಾಗೂ ಈ ಸಿಬ್ಬಂದಿಗಳು ಪ್ರತಿ ಮನೆಗೆ ಬಂದಾಗ ಗ್ಯಾಸ್ ಸಿಲೆಂಡರ್ ನ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು ಕಡ್ಡಾಯ. ಇನ್ನು ತಪಾಸಣೆ ನಡೆಸಿ ನಿಮ್ಮ ಮನೆಯಲ್ಲಿ ಇರುವ ಗ್ಯಾಸ್ ಸಿಲೆಂಡರ್ ಸುರಕ್ಷಿತವೋ ಅಥವಾ ಅಸುರಕ್ಷಿತವೋ ಎಂಬುದನ್ನು ನೋಡಿ ವರದಿ ನೀಡುತ್ತಾರೆ.
ವ್ಯಕ್ತಿ ಸತ್ತ ನಂತರ ಅವನ ಆಧಾರ್ ಕಾರ್ಡ್ ಏನಾಗುತ್ತೆ ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ
ಇನ್ನು ಕೇವಲ 150 ರೂಪಾಯಿಗಳನ್ನು ಸಿಬ್ಬಂದಿಗಳಿಗೆ ಕೊಟ್ಟು ನಿಮ್ಮ ಗ್ಯಾಸ್ ಸಿಲಿಂಡರ್ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಅವರು ಕೊಡುವ ರಶೀದಿಯೊಂದನ್ನು ಪಡೆಯಬೇಕು. ಅಷ್ಟೇ ಅಲ್ಲದೆ ಸಿಬ್ಬಂದಿಗಳು ಗ್ಯಾಸ್ ಸ್ಟವ್ (gas stove) ಹಾಗೂ ಸಿಲಿಂಡರ್ ಗೆ ಕನೆಕ್ಷನ್ ಕೊಡಲಾಗುವ ಪೈಪುಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು.
ರಬ್ಬರ್ ಟಬ್ ಗಳನ್ನು ಚೆಕ್ ಮಾಡಬೇಕು. ನಂತರ ನೀವು ಬಳಸುವ lpg ಸಿಲೆಂಡರ್ ಗಳು ಸುರಕ್ಷಿವೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಈ ರೀತಿ ನೀವು ತಪಾಸಣೆ ಮಾಡಿಸಿಕೊಂಡಾಗ ಮಾತ್ರ ನಿಮ್ಮ ಬಳಿ ಇರುವ ಸಿಲಿಂಡರ್ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ.
Central government’s new rule for all gas cylinder users
Follow us On
Google News |