ಪ್ಯಾನ್ ಕಾರ್ಡ್‌ಗೆ ಕ್ಯೂಆರ್ ಕೋಡ್ ಅನ್ನು ನಿಯೋಜಿಸಲು ಕೇಂದ್ರ ಸರ್ಕಾರ ಚಿಂತನೆ
ಪ್ಯಾನ್ ಕಾರ್ಡ್ ಗಳನ್ನು (Pan Card) ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಮತ್ತು ಪ್ರತಿ ಪ್ಯಾನ್ ಕಾರ್ಡ್ ಗೆ ಕ್ಯೂಆರ್ ಕೋಡ್ (QR Code) ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟವು 1,435 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಿರುವ ಪ್ಯಾನ್ 2.0 ಯೋಜನೆಗೆ ಸೋಮವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ಯಾನ್ ಕಾರ್ಡ್‌ಗಳನ್ನು ನವೀಕರಿಸಲಾಗುವುದು ಮತ್ತು ಕ್ಯೂಆರ್ ಕೋಡ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದರು.
ಉದ್ದಿಮೆದಾರರ ಬಹುದಿನಗಳ ಬೇಡಿಕೆಯಂತೆ PAN ಮತ್ತು TAN ಸೇವೆಗಳನ್ನು ಒಟ್ಟುಗೂಡಿಸಿ ಸಂಪೂರ್ಣ ಪೇಪರ್‌ಲೆಸ್ ಮತ್ತು ಆನ್‌ಲೈನ್ ರೀತಿಯಲ್ಲಿ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
Central Govt Has Decided To Completely Digitize Pan Cards And Assign A QR Code
Our Whatsapp Channel is Live Now 👇