India News

ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ ಯೋಜನೆ! ಇಲ್ಲಿದೆ ಸತ್ಯಾಂಶ

Fact Check : ಸೋಶಿಯಲ್ ಮೀಡಿಯಾದಲ್ಲಿ 'ಒಂದು ಕುಟುಂಬ ಒಂದು ಉದ್ಯೋಗ' ಯೋಜನೆ ಅಸ್ತಿತ್ವದಲ್ಲಿದೆ ಎಂದು ಹಬ್ಬಿಸಲಾಗುತ್ತಿದೆ. ಸರ್ಕಾರ ಪ್ರತಿ ಮನೆಯ ಸದಸ್ಯನಿಗೆ ಉದ್ಯೋಗ ನೀಡಲಿದೆ ಎಂಬ ವದಂತಿ ಹಬ್ಬಿದೆ.

  • ‘ಒಂದು ಕುಟುಂಬ ಒಂದು ಉದ್ಯೋಗ’ ಯೋಜನೆ ಕುರಿತು ವದಂತಿ
  • ಸರ್ಕಾರದ ಯಾವುದೇ ಅಧಿಕೃತ ಘೋಷಣೆ ಇಲ್ಲ
  • ಪಿಐಬಿ (PIB) ತಪಾಸಣೆಯಲ್ಲಿ ಮಾಹಿತಿ ಸುಳ್ಳು ಎಂದು ದೃಢ

Fact Check : ಸೋಶಿಯಲ್ ಮೀಡಿಯಾದಲ್ಲಿ ಹೊಸ ವದಂತಿಯೊಂದು ಹರಿದಾಡುತ್ತಿದೆ. ‘ಒಂದು ಕುಟುಂಬ ಒಂದು ಉದ್ಯೋಗ’ (Ek Kutumb Ek Naukri) ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ಘೋಷಿಸಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

ಈ ಯೋಜನೆಯಡಿ ಪ್ರತಿ ಮನೆಯ ಸದಸ್ಯನಿಗೆ ಉದ್ಯೋಗ ಒದಗಿಸಲಾಗುತ್ತದೆ ಮತ್ತು ತಿಂಗಳಿಗೆ ₹48,000 (Salary) ವರೆಗೆ ವೇತನ ನೀಡಲಾಗುತ್ತದೆ ಎಂದು ಕೆಲವು ಯೂಟ್ಯೂಬ್ ಚಾನೆಲ್‌ಗಳು ವದಂತಿ ಹಬ್ಬಿಸಿವೆ. ಆದರೆ ಇದು ನಿಜವೇ?

ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ ಯೋಜನೆ! ಇಲ್ಲಿದೆ ಸತ್ಯಾಂಶ

ಇದನ್ನೂ ಓದಿ: ನಿಮ್ಮತ್ರ ಪ್ಯಾನ್ ಕಾರ್ಡ್ ಇದ್ಯಾ! ಹಾಗಾದ್ರೆ ಈ ಬೆನಿಫಿಟ್ಸ್ ಬಗ್ಗೆ ನಿಮಗೆ ಗೊತ್ತಾ?

ಸತ್ಯಾಸತ್ಯತೆ ಹೀಗಿದೆ!

ಇಂಟರ್ನೆಟ್ ಬಳಕೆದಾರರು ಈ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದು, ಪಿಐಬಿ (PIB Fact Check) ಇದನ್ನು ಪರಿಶೀಲಿಸಿದೆ. ಆ ಪ್ರಕಾರ, ಕೇಂದ್ರ ಸರ್ಕಾರ ಈ ಯೋಜನೆ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆಧಾರ್ ಕಾರ್ಡ್ ಹೊಂದಿರುವ ಎಲ್ಲರಿಗೂ ಉದ್ಯೋಗ ಸಿಗಲಿದೆ, ಪರೀಕ್ಷೆ ಇಲ್ಲದೆ ಉದ್ಯೋಗ ನೀಡಲಾಗುತ್ತದೆ ಎಂಬುದು ಸಂಪೂರ್ಣ ಸುಳ್ಳು.

ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬುತ್ತಿರುವ ಈ ಸುಳ್ಳು ವದಂತಿಗಳಿಗೆ ಬಲಿಯಾಗಬೇಡಿ. ಸರ್ಕಾರದ ಹೊಸ ಉದ್ಯೋಗ ನೇಮಕಾತಿಯ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ (Official Website) ಗೆ ಭೇಟಿ ನೀಡಿ.

ಸುಳ್ಳು ಲಿಂಕ್‌ಗಳ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಅಪಾಯಕಾರಿಯಾಗಿದೆ. ಈ ರೀತಿ ಮೋಸಗೊಳಿಸಲು ಯತ್ನಿಸುವ ವೆಬ್‌ಸೈಟ್‌ಗಳು ಸೈಬರ್ ಅಪರಾಧದ ಭಾಗವಾಗಿರಬಹುದು.

ಇದನ್ನೂ ಓದಿ: ನಿಮಗೆ ಪ್ರತಿ ತಿಂಗಳು 5 ಸಾವಿರ ಸಿಗುತ್ತೆ! ಬೇಗ ಈ ಪ್ರಧಾನಮಂತ್ರಿ ಯೋಜನೆಗೆ ಸೇರಿಕೊಳ್ಳಿ

ಸೂಚನೆ:

ನಿಮ್ಮ ಹಣ ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ಮೊದಲು ಸರಕಾರದ ಅಧಿಕೃತ ಮೂಲಗಳನ್ನು ಮಾತ್ರ ಪರಿಶೀಲಿಸಿ. ಆನ್‌ಲೈನ್ ವಂಚನೆಗಳಿಗೆ ಎಚ್ಚರ!

Fact Check, Is One Family One Job Scheme Real

Fact Check : False

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories