ಗೃಹಜ್ಯೋತಿ ಆಯ್ತು, ಈಗ ಕೇಂದ್ರದಿಂದ ಉಚಿತ ವಿದ್ಯುತ್ ಕೊಡುವ ಮತ್ತೊಂದು ಯೋಜನೆ, 25 ವರ್ಷ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ
ಇದು ಸರ್ಕಾರ ಹೊರತಂದಿರುವ ಸೋಲಾರ್ ರೂಫ್ ಟಾಪ್ ಪ್ಯಾನೆಲ್ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ನೀವು 25 ವರ್ಷಗಳ ಕಾಲ ವಿದ್ಯುತ್ ಬಿಲ್ ಕಟ್ಟಬೇಕಾದ ಪರಿಸ್ಥಿತಿಯೆ ಬರುವುದಿಲ್ಲ.
ವಿಶ್ವದಲ್ಲಿ ಹಣದುಬ್ಬರ ಹೆಚ್ಚಾಗುತ್ತಲೇ ಇದೆ. ಇದರಿಂದ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗಿದ್ದು, ಇದರಿಂದ ತೊಂದರೆ ಆಗುತ್ತಿರುವುದು ರಾಜ್ಯದ ಸಾಮಾನ್ಯ ಜನರಿಗೆ. ಹಾಗಾಗಿ ಜನರ ಮೇಲಿರುವ ಹಣದುಬ್ಬರದ ಒತ್ತಡ ಕಡಿಮೆ ಮಾಡಲು ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ.
ಅದೇ ರೀತಿ ಈಗ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದು ಉಚಿತ ವಿದ್ಯುತ್ (Free Electricity Scheme) ಕೊಡುವ ಯೋಜನೆ ಆಗಿದೆ. ಈ ಯೋಜನೆಯ ಫಲ ಪಡೆಯುವವರಿಗೆ 25 ವರ್ಷಗಳ ಕಾಲ ವಿದ್ಯುತ್ ಬಿಲ್ (Electricity Bill) ಇಂದ ಮುಕ್ತಿ ಸಿಗುತ್ತದೆ.
ವಿದ್ಯುತ್ ದರ ಏರಿಕೆ ಹಣದುಬ್ಬರ ಈ ಎಲ್ಲಾ ಕಾರಣಗಳಿಂದ ಜನಸಾಮಾನ್ಯರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹಾಗಾಗಿ ಜನರಿಗೆ ಇದರಿಂದ ಹೆಚ್ಚಿನ ಸಮಸ್ಯೆ ಆಗಬಾರದು.. ಜನರ ಕಷ್ಟಗಳು ಕಡಿಮೆ ಆಗಬೇಕು ಎಂದು ಜನರ ಹಿತದೃಷ್ಟಿಯಿಂದ ಸರ್ಕಾರವು ಕೆಲವು ಯೋಜನೆಗಳನ್ನು ಜಾರಿಗೆ ತರುತ್ತದೆ.
ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು, ಇಲ್ಲವಾದರೆ ಕಾರ್ಡ್ ಅಮಾನ್ಯವಾಗಬಹುದು
ಆ ಯೋಜನೆಗಳಿಗೆ ಅರ್ಜಿ ಸಲ್ಲಿಸಿ, ಜನರು ಸೌಲಭ್ಯ ಪಡೆದುಕೊಳ್ಳಬಹುದು. ಇದೀಗ ಸರ್ಕಾರ ವಿದ್ಯುತ್ ಬಿಲ್ ಇಲ್ಲದ ಹಾಗೆ ಮಾಡಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಇದು ಸರ್ಕಾರ ಹೊರತಂದಿರುವ ಸೋಲಾರ್ ರೂಫ್ ಟಾಪ್ ಪ್ಯಾನೆಲ್ ಯೋಜನೆ (Solar Rooftop Panel Scheme) ಆಗಿದೆ. ಈ ಯೋಜನೆಯ ಮೂಲಕ ನೀವು 25 ವರ್ಷಗಳ ಕಾಲ ವಿದ್ಯುತ್ ಬಿಲ್ ಕಟ್ಟಬೇಕಾದ ಪರಿಸ್ಥಿತಿಯೆ ಬರುವುದಿಲ್ಲ.
ಹಾಗಾಗಿ ಈ ಯೋಜನೆಯ ಸೌಲಭ್ಯವನ್ನು ಮೀವು ಪಡೆಯಬೇಕು ಎಂದರೆ, ಈ ಯೋಜನೆಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಸೋಲಾರ್ ಪ್ಯಾನೆಲ್ ಅನ್ನು ಸ್ಥಾಪಿಸಿಕೊಳ್ಳಲು ನೀವು ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ನೀವು ಸ್ಮಾರ್ಟ್ ವಿದ್ಯುತ್ ಆಪ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಕೆ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.
ಈ ಸೋಲಾರ್ ರೂಫ್ ಟಾಪ್ ಯೋಜನೆಯಲ್ಲಿ ವಿದ್ಯುತ್ ಕಂಪನಿಗಳು ನಿಮ್ಮ ಮನೆಯ ಮೇಲ್ಚಾವಣಿ ಮೇಲೆ ವಿದ್ಯುತ್ ಸೌರವನ್ನು ಸ್ಥಾಪಿಸುತ್ತದೆ. ಈ ಪ್ರಯೋಜನವನ್ನು ನಮ್ಮ ದೇಶದ ಜನರು ಪಡೆಯಬಹುದು.
ಒಂದು ವೇಳೆ ನಿಮ್ಮ ಮನೆಯಲ್ಲಿ 2-3 ಫ್ಯಾನ್, ಫ್ರಿಡ್ಜ್, 6-8 LED ಬಲ್ಬ್, ವಾಟರ್ ಮೋಟರ್ ಇದೆಲ್ಲವು ಇದ್ದರೆ, ಜೊತೆಗೆ ಟಿವಿ ಬಳಸಲು ಮತ್ತು ಇನ್ನಿತರ ಕಾರಣಕ್ಕೆ ವಿದ್ಯುತ್ ಬಳಸಬೇಕಾಗುತ್ತದೆ. ಈ ಕೆಲಸಕ್ಕಾಗಿ 6 ರಿಂದ 8 ಯೂನಿಟ್ ಕರೆಂಟ್ ಬೇಕು. ಇದಕ್ಕಾಗಿ ಹೆಚ್ಚು ವಿದ್ಯುತ್ ಅವಶ್ಯಕತೆಗಿಂತ ಮನೆಯಲ್ಲಿ ಸೋಲಾರ್ ಪ್ಯಾನೆಲ್ ಹಾಕಿಸಿಕೊಳ್ಳುವುದು ಒಳ್ಳೆಯ ಆಯ್ಕೆ ಆಗಿದೆ.
Monopark bifacial ಸೋಲಾರ್ ಸಂಸ್ಥೆಯಲ್ಲಿ ವಿಶೇಷ ಸೋಲಾರ್ ಪ್ಯಾನೆಲ್ ಇದ್ದು, ಇದರ ಎರಡು ಭಾಗದಿಂದ ಸೋಲಾರ್ ಉತ್ಪಾದನೆ ಆಗುತ್ತದೆ. ಮನೆಯ ವಿದ್ಯುತ್ ಗೆ ಈ ಸೌರಫಲಕಗಳು ಸಾಕು. ಹಾಗಾಗಿ ಸರ್ಕಾರದ ಯೋಜನೆಯಿಂದ ನೀವು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಒಂದು ಸಾರಿ ಸೋಲಾರ್ ಪ್ಯಾನೆಲ್ ಹಾಕಿಸಿಕೊಂಡರೆ, 25 ವರ್ಷಗಳ ಕಾಲ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ.
Free Electricity by Solar Rooftop Scheme
Follow us On
Google News |