ಬಿಪಿಎಲ್ ಕಾರ್ಡ್ ಇದ್ರೆ ಉಚಿತ ಗ್ಯಾಸ್ ಸಿಲಿಂಡರ್! ಈ ಯೋಜನೆಗೆ ಅರ್ಜಿ ಸಲ್ಲಿಸಿ

ಪಿಎಂ ಉಜ್ವಲ ಯೋಜನೆಯಡಿ ಪಡಿತರ ಕಾರ್ಡ್ ಹೊಂದಿರುವ ಬಿಪಿಎಲ್ ಮಹಿಳೆಯರಿಗೆ ಉಚಿತ ಎಲ್ಪಿಜಿ (LPG) ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸೌಲಭ್ಯ ಲಭ್ಯವಿದೆ. ಅರ್ಜಿ ಹಾಕುವ ವಿಧಾನ ಇಲ್ಲಿದೆ.

  • ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಗೆ ಉಚಿತ ಎಲ್ಪಿಜಿ ಗ್ಯಾಸ್ ಸೌಲಭ್ಯ
  • ಆನ್‌ಲೈನ್ ಅಥವಾ ಗ್ಯಾಸ್ಎಜೆನ್ಸಿಗೆ ಹೋಗಿ ಅರ್ಜಿ ಸಲ್ಲಿಸಲು ಸಾಧ್ಯ
  • ಮಹಿಳೆಯರ ಆರೋಗ್ಯ ಹಾಗೂ ಸೌಕರ್ಯ ಯೋಜನೆಯ ಗುರಿ

ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಇನ್ನೂ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ ಮಾಡುತ್ತಿದ್ದು, ಇದರಿಂದ ಆರೋಗ್ಯಕ್ಕೂ, ಪರಿಸರಕ್ಕೂ ಹಾನಿಯಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಕೈಗೆತ್ತಿಕೊಳ್ಳಲಾಗಿದೆ. ಇದರಿಂದ (clean cooking fuel) ಶುದ್ಧವಾದ ಎಲ್ಪಿಜಿ ಉಪಯೋಗಿಸುವತ್ತ ಬದಲಾವಣೆಯಾಗಿದೆ.

ಈ ಯೋಜನೆಯಡಿ, ಬಿಪಿಎಲ್ ಕುಟುಂಬದ ಮಹಿಳೆಯರು ಎಲ್ಪಿಜಿ ಸಿಲಿಂಡರ್‌ಗಾಗಿ ಸಬ್ಸಿಡಿ ಮೊತ್ತದಲ್ಲಿ ಅಥವಾ ಸಂಪೂರ್ಣ ಉಚಿತವಾಗಿ ಸಂಪರ್ಕ ಪಡೆಯಬಹುದು.

ಅರ್ಹ ಮಹಿಳೆಯರು ಕನಿಷ್ಠ 18 ವರ್ಷದವರಾಗಿದ್ದು, (BPL Ration card) ಬಿಪಿಎಲ್ ಪಡಿತರ ಕಾರ್ಡ್ ಹೊಂದಿರಬೇಕು. ಅವರು ಯಾವುದೇ ಇತರೆ ಎಲ್ಪಿಜಿ ಸಂಪರ್ಕ ಹೊಂದಿರಬಾರದು ಎಂಬುದು ಪ್ರಮುಖ ಅಂಶವಾಗಿದೆ.

ಈ ಯೋಜನೆಯ ಮುಖ್ಯ ಗುರಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆರೋಗ್ಯವಂತ ಹಾಗೂ ಸುರಕ್ಷಿತ ಅಡುಗೆ ವ್ಯವಸ್ಥೆ ಒದಗಿಸುವುದು. ಯೋಜನೆಯಡಿ ಈಗಾಗಲೇ 10 ಕೋಟಿ ಜನ ಲಾಭ ಪಡೆದಿದ್ದಾರೆ.

ಅರ್ಜಿಯ ವಿಧಾನ ಸರಳವಾಗಿದೆ. ಆಫ್‌ಲೈನ್‌ನಲ್ಲಿ, ಬಳಿಯ ಎಲ್ಪಿಜಿ ಗ್ಯಾಸ್ ಏಜೆನ್ಸಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳೊಂದಿಗೆ ಫಾರ್ಮ್ ಸಲ್ಲಿಸಬೇಕು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು www.pmuy.gov.in ವೆಬ್‌ಸೈಟ್‌ಗೆ ಹೋಗಿ, ನಿಮ್ಮ ವಿವರಗಳು ಹಾಗೂ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೈಸ್ ಫೋಟೋ ಮತ್ತು ಮೊಬೈಲ್ ನಂಬರ್ ಹೊಂದಿರಬೇಕು. ಅರ್ಜಿ ಸ್ವೀಕೃತವಾದರೆ, ಸಿಲಿಂಡರ್ ನೇರವಾಗಿ ನಿಮ್ಮ ಮನೆಗೆ ತಲುಪುತ್ತದೆ. (Free Gas Connection)

ಪಿಎಂ ಉಜ್ವಲ ಯೋಜನೆಯು ಬರೋಬ್ಬರಿ 32.94 ಕೋಟಿ ಎಲ್ಪಿಜಿ ಬಳಕೆದಾರರಲ್ಲಿ 10.33 ಕೋಟಿ ಜನರ ಮೇಲೆ ಪ್ರಭಾವ ಬೀರಿದ್ದು, ಇದು (women empowerment) ಮಹಿಳಾ ಸಬಲೀಕರಣದತ್ತ ಪ್ರಮುಖ ಹೆಜ್ಜೆ ಆಗಿದೆ.

ಪಿಎಂ ಉಜ್ವಲ ಯೋಜನೆ

ಆನ್‌ಲೈನ್ ಅರ್ಜಿ:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ನೀವು www.pmuy.gov.in ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು:

  1. ಮೊದಲು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ (www.pmuy.gov.in) ಹೋಗಿ.
  2. ಅಲ್ಲಿ ಕಾಣಿಸಿಕೊಳ್ಳುವ “ಹೊಸ ಉಜ್ವಲ ಸಂಪರ್ಕ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  3. ಕ್ಲಿಕ್ ಮಾಡಿದಾಗ, 3 ಗ್ಯಾಸ್ ಏಜೆನ್ಸಿಗಳ (ಇಂಡಿಯನ್, ಭಾರತ್ ಗ್ಯಾಸ್ ಮತ್ತು ಹೆಚ್‌ಪಿ ಗ್ಯಾಸ್) ಹೆಸರುಗಳು ಕಾಣಿಸಿಕೊಳ್ಳುತ್ತವೆ. ನಿಮಗೆ ಯಾವುದು ಬೇಕೋ ಅದನ್ನು ಆರಿಸಿ.
  4. ಅದಾದ ನಂತರ ನೀವು ಇನ್ನೊಂದು ಹೊಸ ಪುಟಕ್ಕೆ ಹೋಗುತ್ತೀರಿ. ಆ ಪುಟದಲ್ಲಿ, ನಿಮ್ಮ ಹೆಸರು, ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯ ಹೆಸರು, ಮೊಬೈಲ್ ಸಂಖ್ಯೆ ಮತ್ತು ಪಿನ್ ಕೋಡ್‌ನಂತಹ ಮಾಹಿತಿಯನ್ನು ಭರ್ತಿ ಮಾಡಿ.
  5. ನಂತರ ಅಲ್ಲಿ ಕೇಳಲಾದ ದಾಖಲೆಗಳ ನಕಲು ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  6. ಅಂತಿಮವಾಗಿ, ಅರ್ಜಿ ನಮೂನೆಯನ್ನು ಸಲ್ಲಿಸಿ.

ಎಲ್ಲಾ ವಿವರಗಳು ಸರಿಯಾಗಿದ್ದರೆ, ನಿಮ್ಮ ಅರ್ಜಿ ನಮೂನೆ ಯಶಸ್ವಿಯಾಗಿ ಪೂರ್ಣಗೊಂಡಿರುವುದನ್ನು ನೀವು ನೋಡುತ್ತೀರಿ. ನಿಮ್ಮ ಅರ್ಜಿಯನ್ನು ಅನುಮೋದಿಸಿದರೆ, ಸಬ್ಸಿಡಿ ಸಿಲಿಂಡರ್ ಅನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

Free LPG Cylinder via PM Ujjwala Yojana

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories