ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕವೇ ವೋಟರ್ ಐಡಿ ಪಡೆದುಕೊಳ್ಳಿ! ಸುಲಭ ವಿಧಾನ

ವೋಟರ್ ಐಡಿ ಪಡೆದುಕೊಳ್ಳುವವರು ಯಾವುದೇ ಸರ್ಕಾರಿ ಕಚೇರಿಗೂ ಹೋಗಬೇಕಾಗಿಲ್ಲ. ಆನ್ಲೈನ್ (apply Voter ID Online) ನಲ್ಲಿ ಅರ್ಜಿ ಸಲ್ಲಿಸಿ ಪೋಸ್ಟ್ (post) ಮೂಲಕ ಹೊಸ ವೋಟರ್ ಐಡಿ ಮನೆ ಬಾಗಿಲಿಗೆ ಬರುವಂತೆ ಮಾಡಿಕೊಳ್ಳಬಹುದು

Bengaluru, Karnataka, India
Edited By: Satish Raj Goravigere

ಇನ್ನೇನು ಸದ್ಯದಲ್ಲಿ 2024ರ ಲೋಕಸಭಾ ಎಲೆಕ್ಷನ್ (lok sabha election 2024) ನಡೆಯಲಿದೆ, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕು (right to vote) ಚಲಾಯಿಸಬೇಕು ಅಂದ್ರೆ ಅವರ ಬಳಿ ವೋಟರ್ ಐಡಿ (voter ID) ಬೇಕೇ ಬೇಕು

ವೋಟರ್ ಐಡಿ ಅಥವಾ ಮತದಾರರ ಗುರುತಿನ ಚೀಟಿ ಇಲ್ಲದೆ ಯಾವೊಬ್ಬ ವ್ಯಕ್ತಿಯು ಕೂಡ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಿಲ್ಲ, ನಿಮ್ಮ ಬಳಿ ಆಧಾರ್ ಕಾರ್ಡ್ (Aadhaar card) ಇದ್ದರೂ ಕೂಡ ವೋಟರ್ ಐಡಿ ಮಾತ್ರ ಮತದಾನ ಮಾಡಲು ಅಗತ್ಯವಾಗಿ ಬೇಕೇ ಬೇಕು.

Link your phone number to Voter ID, Follow this easy method

ಇದೀಗ ಹೊಸದಾಗಿ ವೋಟರ್ ಐಡಿ ಪಡೆದುಕೊಳ್ಳುವವರು ಯಾವುದೇ ಸರ್ಕಾರಿ ಕಚೇರಿಗೂ ಹೋಗಬೇಕಾಗಿಲ್ಲ. ಆನ್ಲೈನ್ (apply Voter ID Online) ನಲ್ಲಿ ಅರ್ಜಿ ಸಲ್ಲಿಸಿ ಪೋಸ್ಟ್ (post) ಮೂಲಕ ಹೊಸ ವೋಟರ್ ಐಡಿ ಮನೆ ಬಾಗಿಲಿಗೆ ಬರುವಂತೆ ಮಾಡಿಕೊಳ್ಳಬಹುದು.

ರೈತರ ಆದಾಯ ಡಬಲ್ ಮಾಡೋ ಕೇಂದ್ರದ ಯೋಜನೆ; ರಾಜ್ಯ ಸರ್ಕಾರವೂ ಕೊಡುತ್ತೆ ಸಬ್ಸಿಡಿ

ಅಷ್ಟೇ ಅಲ್ಲದೆ ವೋಟರ್ ಐಡಿನಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು (Voter ID Corrections) ಅಥವಾ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಕೂಡ ಸರ್ಕಾರ ಅವಕಾಶ ನೀಡಿದೆ. ಇದನ್ನು ನೀವು ಆನ್ಲೈನ್ ನಲ್ಲಿ ಮಾಡಬಹುದಾಗಿದೆ. ಹಾಗಾದ್ರೆ ವೋಟರ್ ಐಡಿ ಪಡೆದುಕೊಳ್ಳಲು ಏನು ಮಾಡಬೇಕು ಎಂಬುದನ್ನು ನೋಡೋಣ.

ಆನ್ಲೈನ್ ಮೂಲಕವೇ ವೋಟರ್ ಐಡಿ ಅರ್ಜಿ ಸಲ್ಲಿಸಿ (apply online)

ಸಾಮಾನ್ಯವಾಗಿ ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಮನೆ ಬಾಗಿಲಿಗೆ ಸಂಬಂಧಪಟ್ಟ ಸಿಬ್ಬಂದಿಗಳು ಬಂದು ಯಾರ ವೋಟರ್ ಐಡಿ ಸರಿ ಇಲ್ಲ ಯಾರ ಬಳಿ ವೋಟರ್ ಐಡಿ ಇಲ್ಲ ಎಂಬುದನ್ನು ಪರಿಶೀಲಿಸಿ ತಕ್ಷಣವೇ ವ್ಯವಸ್ಥೆ ಮಾಡಿಕೊಡುತ್ತಾರೆ.

ಆದರೆ ಈಗ ನೀವು ಎಲೆಕ್ಷನ್ ವರೆಗೂ ಕಾಯಬೇಕಿಲ್ಲ. ಯಾವಾಗ ಬೇಕಿದ್ದರೂ ಕುಳಿತಲ್ಲಿಯೇ ಮೊಬೈಲ್ನಲ್ಲಿಯೇ ವೋಟರ್ ಐಡಿ (get your voter id through mobile) ಪಡೆದುಕೊಳ್ಳಬಹುದು ಹಾಗೂ ವೋಟರ್ ಐಡಿ ಕರೆಕ್ಷನ್ (voter ID correction) ಕೂಡ ಮಾಡಿಕೊಳ್ಳಬಹುದು. ಮತದಾರರ ಗುರುತಿನ ಚೀಟಿಯಲ್ಲಿ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ತಿದ್ದುಪಡಿ ಅಗತ್ಯವಾಗಿದ್ದಲ್ಲಿ ಈ ಸಂದರ್ಭದಲ್ಲಿ ಮಾಡಿಕೊಳ್ಳಿ.

ಗೃಹಲಕ್ಷ್ಮಿ 3ನೇ ಕಂತಿನ ಹಣ 26 ಜಿಲ್ಲೆಗಳಿಗೆ ಒಮ್ಮೆಲೇ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

Voter IDhttps://voters.eci.gov.in/ ಮೊದಲು ಈ ವೆಬ್ಸೈಟ್ಗೆ ಭೇಟಿ ನೀಡಿ. ಮುಖಪುಟದಲ್ಲಿ ನಿಮಗೆ ಹೊಸ ವೋಟರ್ ಐಡಿ ಪಡೆದುಕೊಳ್ಳಲು ರಿಜಿಸ್ಟ್ರೇಷನ್ (registration for new voter ID) ಮಾಡಲು ಆಯ್ಕೆ ಇರುತ್ತದೆ.

ಜೊತೆಗೆ ನಿಮ್ಮ ಬಳಿ ಇರುವ ವೋಟರ್ ಐಡಿ ಕರೆಕ್ಷನ್ ಮಾಡಿಕೊಳ್ಳಲು ಕೂಡ ಇಲ್ಲಿ ಅವಕಾಶ ನೀಡಲಾಗಿದೆ. ನಿಮ್ಮ ಆಧಾರ್ ಸಂಖ್ಯೆ ಹಾಗೂ ಇತರ ಮಾಹಿತಿಗಳನ್ನು ನೀಡುವುದರ ಮೂಲಕ ಹೊಸ ವೋಟರ್ ಐಡಿ ಪಡೆದುಕೊಳ್ಳಬಹುದು ಅಥವಾ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಬಹುದು.

ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ! ಅರ್ಜಿಗೆ ಇಲ್ಲ ಅವಕಾಶ

ಫಾರಂ ನಂಬರ್ 6 ಡೌನ್ಲೋಡ್ (application download ) ಮಾಡಿಕೊಳ್ಳುವುದರ ಮೂಲಕ ಅಗತ್ಯ ಇರುವ ದಾಖಲೆಗಳನ್ನು ನೀಡಿ ಭರ್ತಿ ಮಾಡಿ ಮತ್ತೆ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು.

18 ವರ್ಷ ಮೇಲ್ಪಟ್ಟ ಯಾವುದೇ ಯುವಕ ಯುವತಿಯರು ಹೊಸ ವೋಟರ್ ಐಡಿ ಪಡೆದುಕೊಳ್ಳಲು ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯ ಇರುವವರು ತಕ್ಷಣವೇ ಈ ಕೆಲಸ ಮಾಡಿಕೊಳ್ಳಿ. ಚುನಾವಣೆಯಲ್ಲಿ ನಿಮ್ಮ ಹಕ್ಕನ್ನು ತಪ್ಪದೇ ಚಲಾಯಿಸಿ. ನೀವು ಫಾರಂ ಭರ್ತಿ ಮಾಡಿದ ನಂತರ ವೋಟರ್ ಐಡಿ ನಿಮ್ಮ ಮನೆ ಬಾಗಿಲಿಗೆ ಪೋಸ್ಟ್ ಮೂಲಕ ಬರುತ್ತದೆ.

Get Voter ID online, Easy method