ಕಾಂಗ್ರೆಸ್ ಫ್ರೀ ಕರೆಂಟ್ ಗೆ ಠಕ್ಕರ್ ಕೊಡಲು ಕೇಂದ್ರದಿಂದ ಇನ್ನೊಂದು ಆಫರ್! ಜೀವನಪರ್ಯಂತ ನೋ ಕರೆಂಟ್ ಬಿಲ್

ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಜನಮನ ಗೆಲ್ಲಲು ಒಂದಾದ ಮೇಲೆ ಮತ್ತೊಂದು ಯೋಜನೆಗಳನ್ನು (Govt Schemes) ಜಾರಿಗೆ ತರುತ್ತಿದೆ. ಯೋಜನೆಗಳ ಮೂಲಕ ಜನರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರವಾಗಿಸಲು ಸರ್ಕಾರವು ದೊಡ್ಡ ನಿರ್ಧಾರವನ್ನೇ ಮಾಡಿದೆ.

ಇನ್ನು ಎಲ್ಲರೂ ಬಹಳ ಕಾತುರದಿಂದ ಕಾಯುತ್ತಿರುವ ಯೋಚನೆ ಎಂದರೆ ಅದು ಗೃಹ ಜ್ಯೋತಿ ಯೋಜನೆ (Gruha Jyothi Yojane). ಗ್ರಹ ಜ್ಯೋತಿ ಯೋಜನೆಯ ಚಾಲ್ತಿಗಾಗಿ ಎಲ್ಲರೂ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಯೋಜನೆಯ ಕುರಿತು ಹಲವಾರು ಅಪ್ಡೇಟ್ಗಳು ದಿನೇ ದಿನೇ ಬರುತ್ತಿದ್ದು, ಇದೀಗ ಈ ಯೋಜನೆಯ ಬಗ್ಗೆ ಮತ್ತೊಂದು ಹೊಸ ಅಪ್ಡೇಟ್ ದೊರಕಿದೆ.

ಗ್ರಹ ಜ್ಯೋತಿ ಯೋಜನೆ ಅಡಿಯಲ್ಲಿ ಜನರಿಗೆ ಉಚಿತ ವಿದ್ಯುತ್ (Free Electricity) ರಾಜ್ಯ ಸರ್ಕಾರವು ಈ ಹಿಂದೆ ಬರವಸೆ ನೀಡಿತ್ತು. ಇದೀಗ ಇದರ ಜೊತೆಗೆ ವಿದ್ಯುತ್ ಬಿಲ್ ನಲ್ಲಿ ಏರಿಕೆಯಾಗಿದ್ದು ಜನರಿಗೆ ಇದು ನಿರಾಸೆ ತಂದುಕೊಟ್ಟಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲರಿಗೂ ಬರೋದಿಲ್ಲ! ಹಣಕಾಸಿನ ಇಲಾಖೆಯಿಂದ ಧಿಡೀರ್ ಹೊಸ ಸೂಚನೆ ಜಾರಿ

ವಿದ್ಯುತ್ ಬಿಲ್ ಏರಿಕೆಯಿಂದಾಗಿ ಸಾಕಷ್ಟು ಮಂದಿ ಈ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇದೆ ವೇಳೆ ಕೇಂದ್ರ ಸರ್ಕಾರವು ಇದೀಗ ಈ ಸಮಸ್ಯೆಗೆ ಪರಿಹಾರವನ್ನು ನೀಡಲು ಮುಂದಾಗಿದೆ.

ಸಾಮಾನ್ಯವಾಗಿ ವಿದ್ಯುತ್ ಕೊರತೆಯ ಸಮಯದಲ್ಲಿ ಸೋಲಾರ್ ಪ್ಯಾನೆಲ್ ಗಳನ್ನು (installing solar panels) ಅಳವಡಿಸಿಕೊಂಡು ನೀವು ಯಾವುದೇ ತಲೆಬಿಸಿ ಇಲ್ಲದೆ ಮನೆಯಲ್ಲಿ ಸುಲಭವಾಗಿ ವಿದ್ಯುತ್ ಬಳಸಬಹುದು.

ಅಷ್ಟು ಮಾತ್ರವಲ್ಲದೆ ನೀವು ಸೋಲಾರ್ (Solar) ಅನ್ನು ಬಳಸುವ ಮೂಲಕ ನಿಮ್ಮ ವಿದ್ಯುತ್ ಬಿಲ್ ನ ಬೆಲೆಯಿಂದಲೂ ಸಹ ಪಾರಾಗಬಹುದು. ನೀವು ಈ ಸೋಲಾರ್ ಲಾಭವನ್ನು ಪಡೆಯಲು ಸರ್ಕಾರದ ಅಧಿಕೃತ ವೆಬ್ ಸೈಟ್ solarroftop.gov.in ಗೆ ಭೇಟಿ ನೀಡಿ ಮೊದಲಿಗೆ ನೋಂದಾಯಿಸಿಕೊಳ್ಳಬೇಕು.

solar panels

ಫ್ರೀ ಕರೆಂಟ್ ಜೀರೋ ಬಿಲ್! 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಬಿಲ್ ನಲ್ಲಿ ಏನು ತೋರಿಸುತ್ತದೆ ಗೊತ್ತಾ?

ನಂತರ ನೀವು ನಿಮ್ಮ ಮನೆಯ ಮೇಲೆ ಸೋಲಾರ್ ಚಾನಲ್ ಗಳನ್ನು ಸ್ಥಾಪಿಸಿಕೊಳ್ಳಬೇಕು. ನೀವು ಸರ್ಕಾರದ ಈ ವೆಬ್ ಸೈಟ್ ಗೆ ಭೇಟಿ ನೀಡಿ, ಆನ್ ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. ಬೇಕಾದ ಎಲ್ಲಾ ಸರಿಯಾದ ಮಾಹಿತಿಯನ್ನು ನೀಡಿ ರಿಜಿಸ್ಟರ್ ಮಾಡಿಕೊಳ್ಳಿ.

ನಂತರ ನಿಮಗೆ ಸರ್ಕಾರದ ಕಡೆಯಿಂದ 40% ಸಬ್ಸಿಡಿ ನೀಡಲಾಗುತ್ತದೆ. ಸೋಲಾರ್ ಚಾನಲ್ ಗಳನ್ನು ಇನ್ಸ್ಟಾಲ್ ಮಾಡಲು ಆಗುವ ಖರ್ಚನ್ನು ನೀವು ಕೇವಲ 2-3 ವರ್ಷಗಳಲ್ಲಿ ಮರಳಿ ಪಡೆಯಬಹುದು. ಇನ್ನು ಒಮ್ಮೆ ನೀವು ಸೋಲಾರ್ ಬಳಸಲು ಶುರು ಮಾಡಿದರೆ, ನೀವು ಸುಮಾರು 80 ರಿಂದ 90 ಪ್ರತಿಶತ ವಿದ್ಯುತ್ ಬಿಲ್ ನಲ್ಲಿ ಕಡಿತ ಕಾಣಬಹುದು.

ಸಿಹಿ ಸುದ್ದಿ! ಇನ್ಮುಂದೆ ಟೋಲ್ ಕಟ್ಟಲು ಕಾಯುವಂತಿಲ್ಲ, ಟೋಲ್ ಸಂಗ್ರಹದ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ ಕೇಂದ್ರ ಸರ್ಕಾರ

ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಇದು ಕೇಂದ್ರ ಸರ್ಕಾರದ ಕಡೆಯಿಂದ ಮತ್ತೊಂದು ಹೆಜ್ಜೆ ಎಂದರೆ ತಪ್ಪಾಗುವುದಿಲ್ಲ.

Get zero electricity bill by installing solar panels

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories