ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲರಿಗೂ ಬರೋದಿಲ್ಲ! ಹಣಕಾಸಿನ ಇಲಾಖೆಯಿಂದ ಧಿಡೀರ್ ಹೊಸ ಸೂಚನೆ ಜಾರಿ

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ 2,000ಗಳನ್ನು ನೀಡುವುದಾಗಿ ಸರ್ಕಾರವು ಈ ಹಿಂದೆ ಘೋಷಿಸಿತ್ತು. ಇದೀಗ ಈ ಯೋಜನೆಯ ಲಾಭವನ್ನು ಪಡೆಯಲು ಅನೇಕರು ಬಹಳ ಕಾತುರದಿಂದ ಕಾದು ಕುಳಿತಿದ್ದಾರೆ.

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದ ನಂತರ ಮಹಿಳೆಯರಿಗಾಗಿ ಉಚಿತ ಬಸ್ (Free Bus) ಪ್ರಯಾಣ ಮಾಡುವ ಯೋಜನೆಯನ್ನು ಜಾರಿಗೆ ತಂದು, ಜನರಿಂದ ಬಾರಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು. ನಂತರ ರೈತರಿಗಾಗಿ ಅನೇಕ ಯೋಜನೆಗಳನ್ನು ಸಹ ಜಾರಿಗೆ ತರಲು ಸರ್ಕಾರ ನಿರ್ಧರಿಸಿತು.

ಸರ್ಕಾರದ ಮತ್ತೊಂದು ಯೋಜನೆ, ಗೃಹಲಕ್ಷ್ಮೀ ಯೋಜನೆಯ (Gruha Lakshmi Yojane) ಬಗ್ಗೆ ಪ್ರಾರಂಭದಲ್ಲಿಯೇ ಎಲ್ಲೆಡೆ ಚರ್ಚೆಗಳು ಶುರುವಾಗಿದ್ದವು. ಈ ಯೋಜನೆ ಯಶಸ್ವಿಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಸಹ ಮಾಡಿದ್ದರು.

ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಜಾರಿಗೆ ತಂದಿದೆ, ಅದಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ, ಮಹಿಳೆಯರು ಸಹ ಬಹಳಷ್ಟು ಸಂತೋಷದಿಂದ ಯೋಜನೆಯ ಫಲ ಪಡೆಯಲು ಅರ್ಜಿ ಹಾಕುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲರಿಗೂ ಬರೋದಿಲ್ಲ! ಹಣಕಾಸಿನ ಇಲಾಖೆಯಿಂದ ಧಿಡೀರ್ ಹೊಸ ಸೂಚನೆ ಜಾರಿ - Kannada News

ಫ್ರೀ ಕರೆಂಟ್ ಜೀರೋ ಬಿಲ್! 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಬಿಲ್ ನಲ್ಲಿ ಏನು ತೋರಿಸುತ್ತದೆ ಗೊತ್ತಾ?

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ 2,000ಗಳನ್ನು ನೀಡುವುದಾಗಿ ಸರ್ಕಾರವು ಈ ಹಿಂದೆ ಘೋಷಿಸಿತ್ತು. ಇದೀಗ ಈ ಯೋಜನೆಯ ಲಾಭವನ್ನು ಪಡೆಯಲು ಅನೇಕರು ಬಹಳ ಕಾತುರದಿಂದ ಕಾದು ಕುಳಿತಿದ್ದಾರೆ.

ಇದೇ ವೇಳೆ ಈ ಯೋಜನೆಯ ಬಗ್ಗೆ ಹೊಸ ಅಪ್ಡೇಟ್ ಒಂದು ದೊರೆಕಿದೆ. ಇದೀಗ ಯೋಜನೆಯ ಲಾಭವನ್ನು ಎಲ್ಲರೂ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಹೌದು, ಸರ್ಕಾರವು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಶುರು ಮಾಡುವ ಮುನ್ನ ಕೆಲವು ತಜ್ಞರು ಹಾಗೂ ಹಣಕಾಸಿನ ಇಲಾಖೆ ಸಲಹೆಗಳನ್ನು ಪಡೆದುಕೊಳ್ಳುತ್ತದೆ.

gruha lakshmi yojaneಇನ್ನು ಗೃಹಲಕ್ಷ್ಮಿ ಯೋಜನೆ ಚಾಲ್ತಿಗಾಗಿ ಸರ್ಕಾರವು ಹಣಕಾಸಿನ ಇಲಾಖೆಯ ಜೊತೆ ಮಾತುಕತೆ ನಡೆಸಿದಾಗ, ಹಣಕಾಸಿನ ಇಲಾಖೆಯು ಕೆಲವು ಷರತ್ತುಗಳನ್ನು ವಿಧಿಸಿದೆ ಎನ್ನಲಾಗುತ್ತದೆ.

5 ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಮತ್ತೊಂದು ಹೊಸ ಸೇವೆ

ಗೃಹಲಕ್ಷ್ಮಿ ಯೋಜನೆಗೆ ಪ್ರತಿ ವರ್ಷ ಸುಮಾರು 31 ಸಾವಿರ ಕೋಟಿ ರೂಪಾಯಿಗಳ ಅಗತ್ಯವಾಗುತ್ತದೆ. ಇನ್ನು ಅಷ್ಟು ಹಣವನ್ನು ಸ್ಯಾಂಕ್ಷನ್ ಮಾಡಲು ಸಾಧ್ಯವಿಲ್ಲ ಎಂದು ಇದೀಗ ಹಣಕಾಸಿನ ಇಲಾಖೆ ತಿಳಿಸಿದೆ. ಈ ಯೋಜನೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಈ ಯೋಜನೆಯ ಲಾಭವನ್ನು ಎಲ್ಲರೂ ಸಹ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಯಾರೆಲ್ಲಾ ಈ ಯೋಜನೆಗೆ ಅನರ್ಹರು ಎಂದು ತಿಳಿಯೋಣ ಬನ್ನಿ,

ಸರ್ಕಾರಿ ನೌಕರಿ (Government Employees) ಇರುವವರು, GST ಪಾವತಿದಾರರು, ಇನ್ ಕಮ್ ಟ್ಯಾಕ್ಸ್ (Income Tax) ಪಾವತಿದಾರರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಮೊದಲೇ ಸರ್ಕಾರದಿಂದ ಪೆನ್ಶನ್ (GOVT Pension) ಪಡೆಯುತ್ತಿರುವವರು, 5 ಎಕ್ಕರೆ ಮೀರಿ ಭೂಮಿ ಇರುವವರು, ಇನ್ನು ಮನೆಯವರ ವಾರ್ಷಿಕ ಆದಾಯ 1.2 ಲಕ್ಷ ಮೀರಿದವರು, ಕಾರು ಅಥವಾ ವಾಹನ ಪಡೆದುಕೊಂಡ ಇಂತವರು ಈ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಹೊಸ ಅಪ್ಡೇಟ್! ಬಾಡಿಗೆ ಮನೆಯಲ್ಲಿದ್ದು ಗೃಹಜ್ಯೋತಿ ಯೋಜನೆಗಾಗಿ ಅರ್ಜಿ ಹಾಕಿದವರಿಗೆ ವಿಶೇಷ ಸೂಚನೆ

ಕೇವಲ ಬಿಪಿಎಲ್ (BPL Ration Card) ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಗೃಹಲಕ್ಷ್ಮಿ ಲಾಭವನ್ನು ನೀಡುವಂತೆ ಇದೀಗ ಹಣಕಾಸಿನ ಇಲಾಖೆ ಸರ್ಕಾರಕ್ಕೆ ಸೂಚನೆ ಹೊರಡಿಸಿದೆ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ಘೋಷಣೆಯಾಗಲಿ ಅಥವಾ ಹೇಳಿಕೆಯಾಗಲಿ ನೀಡಿಲ್ಲ. ಆದರೆ ಕೆಲ ಮುಖಂಡರ ಹೇಳಿಕೆಯನ್ನು ನೋಡುವುದಾದ್ರೆ ಎಲ್ಲರಿಗೂ ಯೋಜನೆಯ ಫಲ ಸಿಗಲಿದೆ ಎನ್ನಲಾಗಿದೆ.

Follow us On

FaceBook Google News

Gruha Lakshmi Yojana money is not given to everyone