ಹೊಸ ಅಪ್ಡೇಟ್! ಬಾಡಿಗೆ ಮನೆಯಲ್ಲಿದ್ದು ಗೃಹಜ್ಯೋತಿ ಯೋಜನೆಗಾಗಿ ಅರ್ಜಿ ಹಾಕಿದವರಿಗೆ ವಿಶೇಷ ಸೂಚನೆ
ಗೃಹಜೋತಿ ಯೋಜನೆಗಾಗಿ ಈಗಾಗಲೇ ನಮ್ಮ ಬಳಿ ಲಕ್ಷಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿದೆ. ಆದರೆ ಉಚಿತ ವಿದ್ಯುತ್ ಎಲ್ಲರಿಗೂ ಸಿಗುವುದಿಲ್ಲ. ಅರ್ಜಿಗಳು ಆಯ್ಕೆಯಾದವರಿಗೆ ಮಾತ್ರ 200 ಯೂನಿಟ್ ಉಚಿತ ವಿದ್ಯುತ್ ದೊರೆಯಲಿದೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ತಾವು ಭರವಸೆ ನೀಡಿದ ಹಾಗೆ ಹೊಸ ಯೋಜನೆಗಳನ್ನು ಜಾರಿಗೆ ತರಲು ಭರ್ಜರಿ ತಯಾರಿ ನಡೆಸುತ್ತಿದೆ. ಇನ್ನು ಕಳೆದ ಕೆಲವು ದಿನಗಳಿಂದ ಗೃಹ ಜ್ಯೋತಿ ಯೋಜನೆಯ (Gruha Jyothi Scheme) ಕುರಿತು ಹಲವಾರು ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಜನರ ಮನದಲ್ಲಿ ಈ ಯೋಜನೆಯ ಕುರಿತು ಹಲವಾರು ಪ್ರಶ್ನೆಗಳು ಮನೆ ಮಾಡಿವೆ, ಅನೇಕರು ಈಗಾಗಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು, ಸರ್ಕಾರವು ಇದೀಗ ಗೃಹ ಜ್ಯೋತಿ ಯೋಜನೆಯ ಅರ್ಜಿ (Gruha Jyothi Scheme Application) ಸಲ್ಲಿಸುವ ದಿನಾಂಕವನ್ನು ಆಗಸ್ಟ್ 22 ರವರೆಗೆ ವಿಸ್ತರಿಸಿದೆ.
ಈಗಾಗಲೇ ರಾಜ್ಯದಲ್ಲಿ 40% ರಷ್ಟು ಜನರು ಗೃಹ ಜ್ಯೋತಿ ಯೋಜನೆಯ ಲಾಭವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇನ್ನು ಅನೇಕರು ಕೆಲವು ಸರ್ವರ್ ತೊಂದರೆಗಳ ಕಾರಣದಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.
ಸಿಹಿ ಸುದ್ದಿ! ಬಡ್ಡಿ ಇಲ್ಲದೆ 5 ಲಕ್ಷದವರೆಗೆ ಹಣ, ರೈತರಿಗಾಗಿ ಧಿಡೀರ್ ಹೊಸ ಯೋಜನೆ ಜಾರಿಗೆ ತಂದ ರಾಜ್ಯ ಸರ್ಕಾರ
ಇದೀಗ ಇದೆ ಕಾರಣಕ್ಕೆ ಸರ್ಕಾರ ಅರ್ಜಿ ಸಲ್ಲಿಸುವ ದಿನಾಂಕವನ್ನು ಆಗಸ್ಟ್ 22 ರವರೆಗೆ ವಿಸ್ತರಿಸಿದೆ. ಅಲ್ಲದೆ ರಾಜ್ಯದ ಇಂಧನ ಸಚಿವರು ಇತ್ತೀಚೆಗೆ ಮಾಧ್ಯಮಗಳ ಬಳಿ ಮಾತನಾಡಿದ್ದು, ಜನರ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಇದೇ ಆಗಸ್ಟ್ ಐದರಂದು ಕಲಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಸಿಎಂ ಸಿದ್ದರಾಮಯ್ಯ ಅವರು ಗೃಹಜೋತಿ ಯೋಜನೆಗೆ ಚಾಲ್ತಿ ನೀಡಲಿದ್ದಾರೆ ಎಂದು ಇಂಧನ ಸಚಿವ ಕೆ ಜೇ ಜಾರ್ಜ್ ಮಾಹಿತಿ ನೀಡಿದ್ದಾರೆ.
ಈ ಕಾರ್ಡ್ ಇರೋರಿಗೆ ಸರ್ಕಾರವೇ ಕೊಡುತ್ತೆ ಉಚಿತ ಮನೆ, ವಸತಿ ಸೌಕರ್ಯಕ್ಕೆ ಇಂದೇ ಅರ್ಜಿ ಹಾಕಿ! ಇಲ್ಲಿದೆ ಇನ್ನಷ್ಟು ವಿವರ
ಇನ್ನು ಬಾಡಿಗೆ ಮನೆಯವರು (Rented Houses) ಈ ಉಚಿತ ವಿದ್ಯುತ್ ಲಾಭವನ್ನು ಪಡೆಯಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು ಬಾಡಿಗೆ ಮನೆಯವರು ಸಹ ಈ ಉಚಿತ ವಿದ್ಯುತ್ ಲಾಭವನ್ನು ಪಡೆಯಬಹುದು ಎಂದಿದ್ದಾರೆ. ತಾವು ಅರ್ಜಿ ಸಲ್ಲಿಸುವ ವೇಳೆ ಬಾಡಿಗೆ ಮನೆ ಎಂದು ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ ಎಂದು ಇಂಧನ ಸಚಿವರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಬಾಡಿಗೆ ಮನೆಯವರು ಸಹ ನಿಗದಿ ಪಡಿಸಿದ ವಿದ್ಯುತ್ ಬಳುಸುತ್ತಿದ್ದರೆ ಅವರು ಕೂಡ ಯೋಜನೆಯ ಲಾಭ ಪಡೆಯಲು ಅರ್ಹರು ಎನ್ನಲಾಗಿದೆ. ಅಕಸ್ಮಾತ್ ಹೊಸದಾಗಿ ಬಾಡಿಗೆಗೆ ಬಂದಿದ್ದು, ಈ ಹಿಂದೆ ಇದ್ದ ಬಾಡಿಗೆ ದಾರರು ಮಿತಿಯಲ್ಲಿ ವಿದ್ಯುತ್ ಬಳಸಿಲ್ಲವಾದರೆ ಹೊಸ ಬಾಡಿಗೆದಾರರ ಪರಿಸ್ಥಿತಿ ಏನು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಎಲ್ಲಾ ದಾಖಲೆ ಕೊಟ್ಟು ಆಸ್ತಿ ರಿಜಿಸ್ಟರ್ ಮಾಡಿಸಿದ್ರು ಕ್ಯಾನ್ಸಲ್! ರಿಜಿಸ್ಟ್ರೇಶನ್ ನಿಯಮ ಬದಲಿಸಿದ ರಾಜ್ಯ ಸರ್ಕಾರ
ಇನ್ನು ಹೊಸ ಮನೆ ನಿರ್ಮಾಣ (New House) ಮಾಡಿದವರು ಸಹ ಈ ಲಾಭವನ್ನು ಪಡೆಯಬಹುದಾಗಿದೆ ಎನ್ನಲಾಗುತ್ತಿದೆ. ಹೊಸ ಮನೆ ನಿರ್ಮಾಣ ಮಾಡಿದವರ ಬಳಿ ಯಾವುದೇ ದಾಖಲೆಗಳು ಇರುವುದಿಲ್ಲ ಆದ ಕಾರಣ ಅವರಿಗೆ 58 ಯೂನಿಟ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
New Update on Gruha Jyothi Scheme For Rented Houses
Follow us On
Google News |