5 ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಮತ್ತೊಂದು ಹೊಸ ಸೇವೆ

ಒಂದು ವೇಳೆ ನೀವು ನಿಮ್ಮ ರೇಶನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಬೇಕು ಎಂದರೆ ಆನ್ಲೈನ್ ಮೂಲಕ ಸುಲಭವಾಗಿ ಮಾಡಬಹುದು.

Bengaluru, Karnataka, India
Edited By: Satish Raj Goravigere

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಹಳಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ಸರ್ಕಾರ ಈಗಾಗಲೇ 5 ಗ್ಯಾರಂಟಿ ಯೋಜನೆಗಳನ್ನು (GOVT Schemes) ಜಾರಿಗೆ ತರುವ ಕೆಲಸದಲ್ಲಿದೆ. ಈ ಯೋಜನೆಗಳ ಬಗ್ಗೆ ಹೊಸ ಹೊಸ ವಿಚಾರಗಳು, ನಿಯಮಗಳನ್ನು ಸರ್ಕಾರ ಹೊರತರುತ್ತಲೇ ಇದೆ.

ಸರ್ಕಾರದ ಈ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ರೇಷನ್ ಕಾರ್ಡ್ (BPL Ration Card). ಹೌದು ಸ್ನೇಹಿತರೆ ರೇಷನ್ ಕಾರ್ಡ್ ಇಲ್ಲದೆ ಹೋದರೆ ಯಾವುದೇ ಯೋಜನೆಯ ಫಲ ಸಿಗುವುದಿಲ್ಲ.

If the name is left out or canceled in the ration card, add it like this

ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಇರುವವರು ಸರ್ಕಾರದ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಬಹುದು. ಆದರೆ ಕೆಲ ಸಮಯದಿಂದ ಬಿಪಿಎಲ್ ರೇಶನ್ ಕಾರ್ಡ್ (Ration Card) ಹೊಂದಿರುವವರಿಗೆ ಒಂದು ಸಮಸ್ಯೆ ಎದುರಾಗಿತ್ತು, ಅದೇನು ಎಂದರೆ ರೇಷನ್ ಕಾರ್ಡ್ ಇರುವವರು ತಿದ್ದುಪಡಿ ಮಾಡಿಸಲು ಸಾಧ್ಯವಾಗದೆ ಕಷ್ಟಪಡುತ್ತಿದ್ದರು.

ಹೊಸ ಅಪ್ಡೇಟ್! ಬಾಡಿಗೆ ಮನೆಯಲ್ಲಿದ್ದು ಗೃಹಜ್ಯೋತಿ ಯೋಜನೆಗಾಗಿ ಅರ್ಜಿ ಹಾಕಿದವರಿಗೆ ವಿಶೇಷ ಸೂಚನೆ

ಆದರೆ ಈಗ ಸರ್ಕಾರವು ಈ ಸಮಸ್ಯೆಗೆ ಪರಿಹಾರ ನೀಡಿದೆ. ರೇಷನ್ ಕಾರ್ಡ್ ಬಳಕೆ ದಾರರಿಗಾಗಿ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ..

ಸರ್ಕಾರ ಈಗ ಕೊಟ್ಟಿರುವ ಗುಡ್ ನ್ಯೂಸ್ ಏನು ಎಂದರೆ, ಒಂದು ವೇಳೆ ನೀವು ನಿಮ್ಮ ರೇಶನ್ ಕಾರ್ಡ್ ನಲ್ಲಿ ತಿದ್ದುಪಡಿ (Ration Card Correction Online) ಮಾಡಬೇಕು ಎಂದರೆ ಆನ್ಲೈನ್ ಮೂಲಕ ಸುಲಭವಾಗಿ ಮಾಡಬಹುದು.

BPL Ration Cardಆನ್ಲೈನ್ ಮೂಲಕ ರೇಷನ್ ಕಾರ್ಡ್ ನಲ್ಲಿ ಏನೇ ತಿದ್ದುಪಡಿ ಮಾಡುವುದಕ್ಕೂ ಸಹ ಮೊದಲಿಗೆ ನಿಮ್ಮ ರೇಷನ್ ಕಾರ್ಡ್ ಮಾನ್ಯವಾಗಿರಬೇಕು, ನಿಮ್ಮ ರೇಷನ್ ಕಾರ್ಡ್ ಮಾನ್ಯವಾಗಿದೆಯೇ ಎಂದು ಸೈಬರ್ ಸೆಂಟರ್ ಗೆ ಹೋಗಿ ಚೆಕ್ ಮಾಡಿಸಬಹುದು. ನಿಮ್ಮ ರೇಷನ್ ಕಾರ್ಡ್ ಅಮಾನ್ಯವಾಗಿದೆ ಎಂದರೆ, ಆನ್ಲೈನ್ ಮೂಲಕ ಸರಿಪಡಿಸಿಕೊಳ್ಳಲಾಗುವುದಿಲ್ಲ.

ಸಿಹಿ ಸುದ್ದಿ! ಬಡ್ಡಿ ಇಲ್ಲದೆ 5 ಲಕ್ಷದವರೆಗೆ ಹಣ, ರೈತರಿಗಾಗಿ ಧಿಡೀರ್ ಹೊಸ ಯೋಜನೆ ಜಾರಿಗೆ ತಂದ ರಾಜ್ಯ ಸರ್ಕಾರ

ಆನ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲೆಗಳು

*ನಿಮ್ಮ ಅಡ್ರೆಸ್ ಪ್ರೂಫ್ (Address Proof)
*ಆಧಾರ್ ಕಾರ್ಡ್ (Aadhaar Card)
*ಕರೆಂಟ್ ಬಿಲ್ (Electricity Bill)

ಆನ್ಲೈನ್ ನಲ್ಲಿ ತಿದ್ದುಪಡಿ ಮಾಡುವ ಪ್ರಕ್ರಿಯೆ

*ನಿಮ್ಮ ಹತ್ತಿರದ ಜನಸೇವಾ ಕೇಂದ್ರಕ್ಕೆ ಮೊದಲು ಭೇಟಿ ನೀಡಿ
*ನಿಮಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಕೊಂಡೊಯ್ಯಬೇಕು
*ಇದಕ್ಕಾಗಿ ನಿಮಗೆ ಕೊಡುವ ಅರ್ಜಿಯನ್ನು ಭರ್ತಿ ಮಾಡಬೇಕು
*ಅಪ್ಲಿಕೇಶನ್ ಫಿಲ್ ಮಾಡಿ, ಎಲ್ಲಾ ಡಾಕ್ಯುಮೆಂಟ್ಸ್ ಗಳನ್ನು ಅಟ್ಯಾಚ್ ಮಾಡಬೇಕು
*ಅರ್ಜಿಯನ್ನು ಸಲ್ಲಿಸಿದ ನಂತರ, ಅದರ ಒಂದು ಕಾಪಿಯನ್ನು ನಿಮಗೆ ಕೊಡುತ್ತಾರೆ.

BPL Ration card correction through online