ಫ್ರೀ ಕರೆಂಟ್ ಜೀರೋ ಬಿಲ್! 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಬಿಲ್ ನಲ್ಲಿ ಏನು ತೋರಿಸುತ್ತದೆ ಗೊತ್ತಾ?

ಸರ್ಕಾರದ ಗೃಹಜ್ಯೋತಿ ಯೋಜನೆಯನ್ನು ಇದೇ ಆಗಸ್ಟ್ 1ರಿಂದ ಚಾಲ್ತಿಗೆ ತರಲಾಗಿದ್ದು, ಈಗಾಗಲೇ ಅನೇಕರು ಜೀರೋ ವಿದ್ಯುತ್ ಬಿಲ್ (Zero Electricity Bill) ಪಡೆದು ಬಹಳ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಅನೇಕರು ಕೆಲವು ಸಮಸ್ಯೆಗಳ ಕಾರಣ ಗೃಹಜ್ಯೋತಿ ಯೋಜನೆಗೆ (Gruha Jyothi Scheme)ಅರ್ಜಿಯನ್ನು ಸಹ ಸಲ್ಲಿಸಲು ಸಾಧ್ಯವಾಗಿರಲಿಲ್ಲ.
ಇನ್ನು ಅಂತವರಿಗೆ ಸರ್ಕಾರವು ಆಗಸ್ಟ್ 22ನೇ ತಾರೀಖಿನವರೆಗೂ ಅರ್ಜಿಯನ್ನು ಸಲ್ಲಿಸಲು ಸಮಯ ನೀಡಿದೆ. ಇನ್ನು ಅನೇಕ ಮಂದಿ ಅರ್ಜಿಯನ್ನು ಸಲ್ಲಿಸಿದರೂ ಸಹ ತಮಗೆ ವಿದ್ಯುತ್ ಬಿಲ್ ಬಂದಿರುವುದಾಗಿ ಇದೀಗ ಸರ್ಕಾರಕ್ಕೆ ದೂರು ನೀಡಿದ್ದಾರೆ.
ಈಗಾಗಲೇ ಗೃಹಜ್ಯೋತಿ ಯೋಜನೆಗೆ (Gruha Jyothi Yojane) ಸುಮಾರು 1.42 ಕೋಟಿಗೂ ಹೆಚ್ಚು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳಲ್ಲಿ ಕೇವಲ ಕೆಲವು ಅರ್ಜಿಗಳಿಗೆ ಮಾತ್ರ ಗೃಹಜ್ಯೋತಿ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.
5 ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಮತ್ತೊಂದು ಹೊಸ ಸೇವೆ
ಇನ್ನು ಎಲ್ಲರಲ್ಲಿ ಮೂಡುತ್ತಿರುವ ಪ್ರಶ್ನೆ ಏನೆಂದರೆ ಸರ್ಕಾರವು ಗೃಹಜ್ಯೋತಿ ಯೋಜನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಬರವಸೆ ನೀಡಿತ್ತು. ಆದರೆ ಅನೇಕರಿಗೆ ಈಗಲೂ ಸಹ ವಿದ್ಯುತ್ ಬಿಲ್ (Electricity Bill) ಬರುತ್ತಿದ್ದು, ವಿದ್ಯುತ್ ಸರಾಸರಿಯನ್ನು ಸರ್ಕಾರ ಹೇಗೆ ಲೆಕ್ಕಿಸುತ್ತಿದೆ ಎನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.
ಹಾಗಾದರೆ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ ಈ ಪುಟವನ್ನು ಪೂರ್ತಿಯಾಗಿ ಓದಿ.

ಇನ್ನು ಸರ್ಕಾರವು ನೀವು 2022 ಹಾಗೂ 23ರ ವಿದ್ಯುತ್ ಅನ್ನು ಎಷ್ಟು ಬಳಸಿರುತ್ತೀರಿ ಎನ್ನುವುದರ ಮೇಲೆ ನಿಮ್ಮ ವಿದ್ಯುತ್ ಸರಾಸರಿಯನ್ನು ಲೆಕ್ಕಿಸಲಾಗುತ್ತದೆ. ಅದು ನೀವು ಕಳೆದ 12 ತಿಂಗಳುಗಳಲ್ಲಿ ಬಳಸಿರುವ ವಿದ್ಯುತ್ ಅನ್ನು ಗಮನಿಸಿ ಅದರ ಸರಾಸರಿಯನ್ನು ತಯಾರಿಸಲಾಗುತ್ತದೆ.
ಹೊಸ ಅಪ್ಡೇಟ್! ಬಾಡಿಗೆ ಮನೆಯಲ್ಲಿದ್ದು ಗೃಹಜ್ಯೋತಿ ಯೋಜನೆಗಾಗಿ ಅರ್ಜಿ ಹಾಕಿದವರಿಗೆ ವಿಶೇಷ ಸೂಚನೆ
ಉದಾಹರಣೆಗೆ ನೀವು 2022-23 ರಲ್ಲಿ ಸುಮಾರು 110 ಯೂನಿಟ್ ವಿದ್ಯುತ್ ಬಳಸಿದ್ದರೆ ನಿಮಗೆ ಇದರ ಜೊತೆಗೆ 10 ಯೂನಿಟ್ ಉಚಿತವಾಗಿ ನೀಡಲಾಗುವುದು. ಅಂದರೆ ನಿಮಗೆ 120 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಬಳಸುವ (Free Electricity) ಅವಕಾಶ ನೀಡಲಾಗುತ್ತದೆ. ನೀವು 120 ಯೂನಿಟ್ ಮೀರಿ ಬಳಸಿದರೆ ಆ ಸಂದರ್ಭದಲ್ಲಿ ನೀವು ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ.
ಇನ್ನು ಸರ್ಕಾರವು ಕೇವಲ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. ನೀವು 200 ಯೂನಿಟ್ ಗಳವರೆಗೆ ವಿದ್ಯುತ್ ಬಳಸಿದರೆ ನೀವು ಯಾವುದೇ ಹಣ ಪಾವತಿಸಬೇಕಾಗಿಲ್ಲ.
ಒಂದು ವೇಳೆ ನೀವು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ನೀವು ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ವಿದ್ಯುತ್ ಅನ್ನು ಮಿತಿಯಿಂದ ಬಳಸಲು ಪ್ರಯತ್ನಿಸಿ.
what will be shown in the bill if you use more than 200 units of electricity



