ಕಾರ್ಮಿಕ ವರ್ಗದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಇಂದೇ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆಯಿರಿ

ಕಾರ್ಮಿಕ ವರ್ಗದವರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರವು PMJJBY, PMSBY, ABPMJAY ಮತ್ತು ಇನ್ನಿತರ ಯೋಜನೆಗಳನ್ನು ತಂದಿದೆ. ಅಷ್ಟೇ ಅಲ್ಲದೆ, ಆಯುಶ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯನ್ನು (ABPMJAY) ಜಾರಿಗೆ ತಂದಿದೆ.

ಕಾರ್ಮಿಕ ವರ್ಗದವರು ನಮ್ಮ ದೇಶದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಂಥವರಿಗಾಗಿ ಕೇಂದ್ರ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದ್ದು, ಕಾರ್ಮಿಕರಿಗಾಗಿ, ಅವರ ಹಿತ ದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಆ ಯೋಜನೆಯ ಬಗ್ಗೆ ಇಂದು ನಿಮಗೆ ಮಾಹಿತಿ ತಿಳಿಸುತ್ತೇವೆ, ಇದರ ಉಪಯೋಗವನ್ನು ನೀವು ಪಡೆದುಕೊಳ್ಳಬಹುದು. ಕಾರ್ಮಿಕ ವರ್ಗದವರ ಬದುಕು ಚೆನ್ನಾಗಿರಬೇಕು ಎಂದು ಹೊಸ ಯೋಜನೆಗಳ ಪರಿಚಯ ಮಾಡಿಕೊಡಲಾಗುತ್ತಿದೆ..

ಇದಕ್ಕಾಗಿ ಕಾರ್ಮಿಕ ವರ್ಗದವರ ದಾಖಲೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಇಶ್ರಮ್ ಪೋರ್ಟಲ್ (E-Shram Portal) ಶುರು ಮಾಡಿದೆ. ಈ ಪೋರ್ಟಲ್ ಇಂದಾಗಿ, ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಹಾಗೂ ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು (PMJSBY) ಶುರು ಮಾಡಲಾಗಿದೆ.

ಕಾರ್ಮಿಕ ವರ್ಗದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಇಂದೇ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆಯಿರಿ - Kannada News

ದುಡ್ಡು ಇದೆ ಅಂತ ಸಿಕ್ಕಾಪಟ್ಟೆ ಆಸ್ತಿ ಮಾಡಬಹುದಾ? ಒಬ್ಬ ವ್ಯಕ್ತಿ ಎಷ್ಟು ಆಸ್ತಿ ಖರೀದಿ ಮಾಡಬಹುದು ಗೊತ್ತಾ?

ಈ ಯೋಜನೆಗಳು ಕಾರ್ಮಿಕ ವರ್ಗದವರ, ಬದುಕು ಮತ್ತು ಅಂಗವೈಕಲ್ಯದ ತೊಂದರೆ ಉಂಟಾದರೆ ಅದಕ್ಕೆ ರಕ್ಷಣೆ ಒದಗಿಸುತ್ತದೆ.

ಕಾರ್ಮಿಕ ವರ್ಗದವರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರವು PMJJBY, PMSBY, ABPMJAY ಮತ್ತು ಇನ್ನಿತರ ಯೋಜನೆಗಳನ್ನು ತಂದಿದೆ. ಅಷ್ಟೇ ಅಲ್ಲದೆ, ಆಯುಶ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯನ್ನು (ABPMJAY) ಜಾರಿಗೆ ತಂದಿದೆ.

ಇದು ಕಾರ್ಮಿಕ ವರ್ಗದವರಿಗೆ ಆರೋಗ್ಯ ರಕ್ಷಣೆ ನೀಡುವ ಯೋಜನೆ ಆಗಿದೆ. ಹಾಗೆಯೇ ಕಾರ್ಮಿಕ ವರ್ಗದವರಿಗೆ ವಯಸ್ಸಾದ ಕಾಲದಲ್ಲಿ ಸಹಾಯ ಮಾಡುವ ಯೋಜನೆಯನ್ನು 2019ರಲ್ಲಿ ಕೇಂದ್ರ ಸರ್ಕಾರ ಶುರು ಮಾಡಿತು, ಅದು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ (PMSYMN) ಯೋಜನೆ ಆಗಿದೆ, ಇದು ಪೆನ್ಶನ್ (Pension Scheme) ಬರುವ ಯೋಜನೆ ಆಗಿದೆ.

ಇದಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ಇನ್ನು ಹತ್ತು ಹಲವು ಯೋಜನೆಗಳನ್ನು (Govt Schemes) ಜಾರಿಗೆ ತಂದಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಗರೀಬ್ ಕಲ್ಯಾಣ್ ರೋಜ್ಗರ್ ಇವುಗಳು ಕೂಡ ಕಾರ್ಮಿಕ ವರ್ಗದವರಿಗೆ ಮಾಡಿರುವ ಯೋಜನೆ ಆಗಿದೆ.

ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ! ದೀಪಾವಳಿಗೂ ಮುನ್ನವೇ ಇನ್ನಷ್ಟು ಅಗ್ಗ

ಮಹಾತ್ಮಾ ಗಾಂಧಿ ಬಂಕರ್ ಬಿಮಾ ಯೋಜನೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, PMSVANidhi, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಈ ಯೋಜನೆಗಳು ಕೂಡ ಸೇರಿವೆ.

ಇನ್ನು ಕಾರ್ಮಿಕರ ಅರ್ಹತೆ ಮೇರೆಗೆ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದ್ದು,ಆತ್ಮನಿರ್ಭರ್ ಭಾರತ್ ರೋಜ್‌ಗಾರ್ ಯೋಜನೆ (ABRY), ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ (ABVKY), ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್‌ಗರ್ ಅಭಿಯಾನ (PMGKRA), ರಾಷ್ಟ್ರೀಯ ಅಡಿಯಲ್ಲಿ ನಿರುದ್ಯೋಗ ಯೋಜನೆ ಇವುಗಳಲ್ಲಿ ಕೆಲವು ಕೆಲಸ ಸಿಗುವಂಥ ಯೋಜನೆ ಕೂಡ ಆಗಿದೆ.

ಸಾಮಾಜಿಕ ನೆರವು ಕಾರ್ಯಕ್ರಮ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY), ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ಗರ್ ಅಭಿಯಾನ (PM-GKRA), ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ (PM KMDY), ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಈ ಯೋಜನೆಗಳ ಪ್ರಯೋಜನವನ್ನು ಕಾರ್ಮಿಕರು ಪಡೆದುಕೊಳ್ಳಬಹುದು.

ಕಾರ್ಮಿಕರಿಗಾಗಿ ತಂದಿರುವ ಇಶ್ರಮ್ ಕಾರ್ಡ್ ಡೇಟಾ ನೋಡಿದರೆ, ರಿಜಿಸ್ಟರ್ ಮಾಡಿರುವ 29.89 ಕೋಟಿ ಜನರ ಪೈಕಿ, 20.63 ಕೋಟಿ ಜನರ ಬಳಿ ಒನ್ ನೇಷನ್ ಒನ್ ರೇಷನ್ ಕಾರ್ಡ್ (ONORC) ಇದ್ದು, ಅದರ ಅನುಕೂಲ ಪಡೆಯುತ್ತಿದ್ದಾರೆ.

11.26ಕೋಟಿ ಜನರು ಆಯುಶ್ಮಾನ್ ಭಾರತ್ ಜನ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (Health Scheme) ಸೌಲಭ್ಯ ಪಡೆಯುತ್ತಿದ್ದಾರೆ. 3.82 ಕೋಟಿ ರೈತರು ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. 4.63 ಕೋಟಿ ಜನರು ಪಿಎಮ್ ಉಜ್ವಲ ನಿಧಿಗೆ ರಿಜಿಸ್ಟರ್ ಆಗಿದ್ದಾರೆ. 2022ರ ಹಣಕಾಸು ವರ್ಷದಲ್ಲಿ, 31 ವಿವಿಧ ವಿಭಾಗದಲ್ಲಿ ಕೆಲಸ ಕಾಡುವ ಕಾರ್ಮಿಕ ವರ್ಗದ 1.77 ಕೋಟಿ ಜನರು ಇಶ್ರಮ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ.

Government Schemes For Labours, apply today and get the benefits of the scheme

Follow us On

FaceBook Google News

Government Schemes For Labours, apply today and get the benefits of the scheme