ದುಡ್ಡು ಇದೆ ಅಂತ ಸಿಕ್ಕಾಪಟ್ಟೆ ಆಸ್ತಿ ಮಾಡಬಹುದಾ? ಒಬ್ಬ ವ್ಯಕ್ತಿ ಎಷ್ಟು ಆಸ್ತಿ ಖರೀದಿ ಮಾಡಬಹುದು ಗೊತ್ತಾ?
ನಮ್ಮ ದೇಶದಲ್ಲಿ ಜಮೀನ್ದಾರಿ ಪದ್ಧತಿಯನ್ನು ನಿಲ್ಲಿಸಿದ ಬಳಿಕ, ಕೃಷಿ ಭೂಮಿಯನ್ನು ರೈತ ಮಾತ್ರ ಖರೀದಿ ಮಾಡಬಹುದು ಎನ್ನುವ ರೀತಿಯಲ್ಲಿ ಸಾಕಷ್ಟು ನಿಯಮವನ್ನು ತರಲಾಗಿದೆ.
Buying Property : ಈಗ ಎಲ್ಲಾ ಕಡೆ ಭೂಮಿಗೆ ಹೆಚ್ಚು ಬೆಲೆ ಎಂದು ಹೇಳಿದರೆ ತಪ್ಪಲ್ಲ. ಇಂದು ಭೂಮಿ ಖರೀದಿ ಮಾಡಿದರೆ, ಭವಿಷ್ಯದಲ್ಲಿ ಹಲವು ರೀತಿಯಲ್ಲಿ ಅದರಿಂದ ನಮಗೆ ಸಹಾಯ ಆಗುತ್ತದೆ ಎಂದು ಜನರು ಭೂಮಿಯ ಮೇಲೆ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಭೂಮಿ ಮೇಲೆ ಮಾಡುವ ಹೂಡಿಕೆ ಇಂದ ಒಳ್ಳೆಯ ರಿಟರ್ನ್ಸ್ ಕೂಡ ಬರುತ್ತದೆ.. ಮುಂದಿನ ದಿನಗಳಲ್ಲಿ ಭೂಮಿಯ ಮೌಲ್ಯ ಇನ್ನು ಜಾಸ್ತಿ ಆಗಲಿದೆ. ಈ ಕಾರಣಕ್ಕೆ ಜನರು ಭೂಮಿ ಖರೀದಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ.
ಇದರ ಜೊತೆಗೆ ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ ಇಷ್ಟೇ ಭೂಮಿ ಖರೀದಿ ಮಾಡಬೇಕು (Property Buying Rules) ಎನ್ನುವ ಕಾನೂನು ಕೂಡ ಇದೆ.. ಈ ಕಾನೂನಿನ ಬಗ್ಗೆ ಹಲವು ಜನರಿಗೆ ಗೊತ್ತಿಲ್ಲ.. ಅದರಲ್ಲು ಕೃಷಿ ಭೂಮಿ ವಿಷಯಕ್ಕೆ ಈ ರೀತಿಯ ನಿಯಮಗಳು ಸಾಕಷ್ಟಿದೆ ಅವುಗಳ ಬಗ್ಗೆ ತಿಳಿಸುತ್ತೇವೆ ನೋಡಿ..
ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ! ದೀಪಾವಳಿಗೂ ಮುನ್ನವೇ ಇನ್ನಷ್ಟು ಅಗ್ಗ
ಪ್ರತಿ ರಾಜ್ಯದಲ್ಲೂ ಭೂಮಿ ಖರೀದಿ ವಿಚಾರಕ್ಕೆ ಅವರದ್ದೇ ಆದ ನಿಯಮಗಳು ಇರುತ್ತದೆ. ಅದರಲ್ಲೂ ಕೃಷಿ (Agriculture Land) ಮಾಡುವಂಥ ರೈತರ ಭೂಮಿ ಖರೀದಿ ಮಾಡುವ ವಿಷಯಕ್ಕೆ ಸಾಕಷ್ಟು ನಿಯಮಗಳನ್ನು ಹೊರತರಲಾಗಿದೆ.
ನಮ್ಮ ದೇಶದಲ್ಲಿ ಜಮೀನ್ದಾರಿ ಪದ್ಧತಿಯನ್ನು ನಿಲ್ಲಿಸಿದ ಬಳಿಕ, ಕೃಷಿ ಭೂಮಿಯನ್ನು ರೈತ (Farmer) ಮಾತ್ರ ಖರೀದಿ ಮಾಡಬಹುದು ಎನ್ನುವ ರೀತಿಯಲ್ಲಿ ಸಾಕಷ್ಟು ನಿಯಮವನ್ನು ತರಲಾಗಿದೆ.
ಕೇಂದ್ರ ಸರ್ಕಾರವು ಯಾರು ಎಷ್ಟು ಭೂಮಿಯನ್ನು ಖರೀದಿ ಮಾಡಬಹುದು ಎನ್ನುವ ಲಿಮಿಟ್ ಇಡುವ ನಿಯಮವನ್ನು ಜಾರಿಗೆ ತರುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಹಾಗಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಭೂಮಿ ಖರೀದಿ ಮಾಡುವ ಲಿಮಿಟ್ಸ್ ಬೇರೆ ಬೇರೆ ರೀತಿ ಇರುತ್ತದೆ.
ಗಂಡ ಹೆಂಡತಿಗೆ ಬಂತು ಹೊಸ ಕಾನೂನು, ಮಹತ್ವದ ತೀರ್ಪು ನೀಡಿದ ಹೈಕೋರ್ಟ್! ಇನ್ಮುಂದೆ ಗಂಡಸರ ಆಟ ನಡೆಯೋಲ್ಲ
ಯಾವ ವ್ಯಕ್ತಿ ಎಷ್ಟು ಜಮೀನು ಖರೀದಿ ಮಾಡಬಹುದು ಎನ್ನುವ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಹೊಸದಾಗಿ ಭೂಮಿ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಇದು ಉಪಯುಕ್ತ ಮಾಹಿತಿ.
ಕೇರಳ ರಾಜ್ಯದ ಬಗ್ಗೆ ಹೇಳುವುದಾದರೆ, 1963ರ ಕಾಯ್ದೆಯ ಪ್ರಕಾರ ಮದುವೆ ಆಗಿರುವ ಒಬ್ಬ ವ್ಯಕ್ತಿ 7.5 ಎಕರೆ ಭೂಮಿಯನ್ನು ಖರೀದಿ ಮಾಡಬಹುದು. 5 ಸದಸ್ಯರಿರುವ ಕುಟುಂಬದವರು 15 ಎಕರೆ ಭೂಮಿ ಹೊಂದಬಹುದು. ಕೃಷಿಯನ್ನೇ ಹೆಚ್ಚು ಮಾಡುವ ಮಹಾರಾಷ್ಟ್ರದಲ್ಲಿ 54 ಎಕರೆ ಭೂಮಿಯನ್ನು ಹೊಂದಬಹುದು, ಇಲ್ಲಿ ವ್ಯವಸಾಯ ಮಾಡುವ ರೈತರು ಮಾತ್ರ ಕೃಷಿ ಭೂಮಿ ಹೊಂದಬಹುದು. ವೆಸ್ಟ್ ಬೆಂಗಾಲ್ ನಲ್ಲಿ 24.5 ಎಕರೆ ಜಮೀನು ಹೊಂದಬಹುದು.
ಸಿಹಿ ಸುದ್ದಿ! ಪ್ರತಿ ಹೆಣ್ಣುಮಗುವಿಗೂ ಸಿಗುತ್ತೆ ₹21,000, ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಹಿಮಾಚಲ ಪ್ರದೇಶದಲ್ಲಿ 34 ಎಕರೆ ಭೂಮಿ ಖರೀದಿ ಮಾಡಿರಬಹುದು. ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ರೈತರು ಮಾತ್ರ ಕೃಷಿ ಭೂಮಿ ಹೊಂದಬಹುದು ಎಂದು ಕಾನೂನು ಮಾಡಲಾಗಿದ್ದು, ಒಬ್ಬ ವ್ಯಕ್ತಿ 54 ಎಕರೆ ಭೂಮಿ ಹೊಂದಬಹುದು. ಗುಜರಾತ್ ನಲ್ಲಿ 12 ಎಕರೆ.
ನಮ್ಮ ದೇಶದಲ್ಲಿ ಭಾರತೀಯರು ಮಾತ್ರ ಕೃಷಿ ಭೂಮಿಯನ್ನು ಖರೀದಿ ಮಾಡಬಹುದು, NRI ಗಳು ಕೃಷಿ ಭೂಮಿವನ್ನು ಖರೀದಿ ಮಾಡುವ ಹಾಗಿಲ್ಲ. ನಮ್ಮ ದೇಶದ ಭೂಮಿ ಕಾಯ್ದೆಯಲ್ಲಿ ಈ ವಿಚಾರ ತಿಳಿಸಲಾಗಿದೆ. ಆದರೆ ಭಾರತೀಯರು NRI ಗಳಿಗೆ ಭೂಮಿಯನ್ನು ಗಿಫ್ಟ್ ಆಗಿ ಕೊಡಬಹುದು.
How much property can a person buy in India